Monday, December 23, 2024

ಡೆಲಿವರಿ ಬಾಯ್​ ಆದ ರೊಬೋಟ್​!

ಅದೊಂದು ಕಾಲವಿತ್ತು ರೊಬೋಟ್​​ಗಳು ಮಾನವನಿಗೆ ಅಪಾಯಕಾರಿಯಾಗಲಿದೆ, ರೊಬೋಟ್​ಗಳನ್ನ ಎಲ್ಲಾ ಕ್ಷೇತ್ರಗಳಲ್ಲಿ ಬಳಕೆ ಮಾಡಿದರೆ ಮಾನವ ನಿರುದ್ಯೋಗಿ ಆಗ್ತಾನೆ ಅಂತ ಹೇಳುವ ಕಾಲವದು, ಆಗ ಈ ಮಾತನ್ನ ಸಾಕಷ್ಟು ಜನ ನಿರಾಕರಿಸಿದ್ರು. ಆದ್ರೆ ಅದು ನಿಜವಾಗುವ ಕಾಲ ಇವಾಗ ಹತ್ತಿರವಾಗ್ತಾ ಇದೆ ಅಂತ ಕಾಣುತ್ತದೆ, ಯಾಕಂದ್ರೆ ಈಗಾಗ್ಲೆ ರೊಬೋಟ್​ಗಳು ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸೋದಕ್ಕೆ ಆರಂಭ ಮಾಡಿದೆ, ಆದ್ರೆ ಇಷ್ಟು ದಿನಗಳ ಕಾಲ ರೊಬೋಟ್​​ ಬಲಕೆಗೆ ನಿರ್ಬಂಧವಿದ್ದ ಕಾರಣ ಅವುಗಳನ್ನ ಯಂತ್ರದ ರೂಪದಲ್ಲಿ ಬಳಕೆ ಮಾಡಲಾಗುತ್ತಿತ್ತು. ಆದ್ರೆ ಈಗ ಕೊವಿಡ್​ ಕಾರಣದಿಂದಾಗಿ ಕೆಲ ಸಂಸ್ಥೆಗಳು ರೊಬೋಟ್​ಗಳನ್ನ ನೇರವಾಗಿ ಬಳಸೋದಕ್ಕೆ ನಿರ್ಧರಿಸಿವೆ. ಇದು ಮುಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ರೊಬೋಟ್​​ಗಳು ಕಾರ್ಯ ನಿರ್ವಹಿಸುವ ಮುನ್ಸೂಚನೆ ಅಂತ ತಜ್ಞರು ಅಭಿಪ್ರಾಯವನ್ನ ವ್ಯಕ್ತ ಪಡಿಸುತ್ತಿದ್ದಾರೆ.

ಈಗಾಗ್ಲೆ ಕೆಲ ರೊಬೋಟ್​ಗಳು ಕಾರ್ಯ ನಿರ್ವಹಿಸಲು ಆರಂಭಿಸುತ್ತಿದ್ದು, ಬಹುತೇಕ ರೊಬೋಟ್​ಗಳನ್ನ ಕೆಲ ದೇಶಗಳಲ್ಲಿ ಸೇನಾ ಬಳಕೆಗೆ ಹಾಗು ಕೆಲ ಕಂಪನಿಗಳು ತಮ್ಮ ಕಾರ್ಯಗಾರಗಳಿಗೆ ಬಳಸಿಕೊಳ್ಳುತ್ತಿವೆ. ಹೀಗೆ ಬಳಸಲಾಗುತ್ತಿರುವ ರೊಬೋಟ್​ಗಳಿಗೆ ಆರ್ಟಿಫಿಶಲ್​ ಇಂಟಲಿಜೆನ್ಸ್ ಹಾಗು ಹಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನ ಅಳವಡಿಸಿ ಬಳಸಿಕೊಳ್ಳಲಾಗ್ತಾ ಇದೆ. ಆದ್ರೆ ಈ ರೊಬೋಟ್​ಗಳ ಬಗ್ಗೆ ಬಹಳಷ್ಟು ಗೌಪ್ಯತೆಗಳನ್ನ ಕಾಯ್ದು ಕೊಂಡಿರಿಸಲಾಗಿದೆ ಅಂತ ಹಲವರು ಹೇಳಿಕೆಯನ್ನ ನೀಡ್ತಾ ಇದ್ದಾರೆ. ಹೀಗಾಗಿ ಈ ರೊಬೋಟ್​ಗಳ ಕಾರ್ಯ ವೈಖರಿ ಹೇಗಿರಲಿದೆ ಅಂತ ಸಾಕಷ್ಟು ಜನಕ್ಕೆ ಮಾಹಿತಿ ಲಭ್ಯವಾಗಿಲ್ಲ. ಇದರ ನಡುವೆ ಕೆಲ ಉದ್ಯಮಿಗಳು ತಮ್ಮ ಹೊಟೇಲ್​ ಕೆಲಸಗಳು ಸೇರಿದಂತೆ ಸಾರ್ವಜನಿಕ ಸೇವಾ ಕ್ಷೇತ್ರಗಳಲ್ಲಿ ಸಾಮಾನ್ಯ ರೊಬೋಟ್​ಗಳನ್ನ ಬಳಸಿ ಸೇವೆ ನೀಡಲು ಮಂದಾಗಿದ್ದಾರೆ. ಈಗ ಇದೇ ಕ್ಷೇತ್ರಕ್ಕೆ ಫುಡ್​ ಡೆಲಿವರಿ ಮಾಡೋದಕ್ಕೆ ಕೂಡ ರೊಬೋಟ್​​ಗಳು ತಯಾರಾಗಿ ನಿಂತಿವೆ.

ಈ ರೊಬೋಟ್​ಗಳು ಫುಡ್​ ಡೆಲಿವರಿ ಮಾಡೋದು ಇದೇ ಮೊದಲೇನಲ್ಲ, ಈ ಹಿಂದಿನಿಂದ ಕೂಡ ರೊಬೋಟ್​ಗಳು ಹಲವು ಬಾರಿ ಫುಡ್​ ಡೆಲಿವರಿ ಮಾಡಿ ಗ್ರಾಹಕರಿಂದ ಶಹಬಾಸ್​ಗಿರಿಯನ್ನ ಗಿಟ್ಟಿಸಿಕೊಂಡಿದ್ದವು, ಆದ್ರೆ ಈಗ ವಿಷ್ಯ ಅದಲ್ಲ.. ಇದೇ ರೊಬೋಟ್​ಗಳನ್ನ ಈ ವಾರ ಲಾಸ್ ವೆಗಾಸ್ನಲ್ಲಿ ಆಯೋಜಿಸಲಾಗಿರುವ ವಿದ್ಯುನ್ಮಾನ ಗ್ರಾಹಕರ ಮೇಳದಲ್ಲಿ ಅನಾವರಣಗೊಳಿಸಲು ಸಿದ್ದತೆಯನ್ನ ನಡೆಸಲಾಗಿದೆ. ಕೆಲ ಮೂಲಗಳ ಪ್ರಕಾರ ಈ ರೊಬೋಟ್​ಗಳು ಈ ಹಿಂದಿನಿಂದ ಆಹಾರ ಹಾಗು ಹಲವು ಸರಕುಗಳನ್ನ ಡೆಲಿವರಿ ಮಾಡಿವೆ. ಆದ್ರೆ ಆಗ ಇದಕ್ಕೆ ಅಷ್ಟೊಂದು ತಂತ್ರಜ್ಞಾನವನ್ನ ಅಳವಡಿಸಿರಲಿಲ್ಲ. ಆದ್ರೆ ಈ ರೊಬೋಟ್​ಗಳು ಈಗ ಜನಪ್ರಿಯತೆಗಳಿಸಲು ಶುರುವಾಗ್ತಾ ಇದ್ದಂತೆ, ಇದಕ್ಕೆ ಹೊಸ ಹೊಸ ತಂತ್ರಜ್ಞಾನವನ್ನ ಅಳವಡಿಸಲಾಗ್ತಾ ಇದೆ.

ಈ ರೊಬೋಟ್​ ತಯಾರಿಕ ಸಂಸ್ಥೆ ಹೇಳಿರುವ ಹಾಗೆ ಇಷ್ಟು ದಿನಗಳ ಸಾಧಾರಣ ರೊಬೋಟ್​ನಂತೆ ಇವುಗಳು ಕಾರ್ಯ ನಿರ್ವಹಿಸುತ್ತಿದ್ದವು, ಆದ್ರೆ ಇನ್ನು ಮುಂದಿನ ದಿನಗಳಲ್ಲಿ ಇವುಗಳು ಹಳೆಯ ವಿಧಾನದಲ್ಲಿ ಕಾರ್ಯ ನಿರ್ವಹಿಸುದಿಲ್ಲ. ಬದಲಾಗಿ ಈ ರೊಬೋಟ್​ಗಳಿಗೆ ವಿಶೇಷ ಜಿಪಿಎಸ್​ ವ್ಯವಸ್ಥೆಯನ್ನ ಅಳವಡಿಸಲಾಗುವುದು ಹಾಗು ಇವುಗಳೇ ಆರ್ಡರ್​ ಅನ್ನ ನೇರವಾಗಿ ಡೆಲಿವರಿ ಮಾಡುತ್ತವೆ. ಹಾಗೆಯೇ ಈ ರೊಬೋಟ್​ಗಳಿಗೆ ಟ್ರ್ಯಾಕಿಂಗ್​ ಸಿಸ್ಟಮ್​ ಅನ್ನ ಅಳವಡಿಸಿರುವುದರಿಂದ, ಇದು ಸರಿಯಾದ ದಾರಿಯಲ್ಲಿ ಕ್ರಮಿಸುತ್ತಿದ್ಯ ಅನ್ನೋದನ್ನ ಕೂಡ ಪತ್ತೆ ಹಚ್ಚೋದಕ್ಕೆ ಕೂಡ ಸಹಕಾರಿಯಾಗಲಿದೆಯಂತೆ. ಜೊತೆಗೆ ಆಹಾರ ಸರಬರಾಜಿನ ನಂತರದಲ್ಲಿ ಸಂಸ್ಥೆಯ ಸೇವೆಯನ್ನ ಪಡೆದುದಕ್ಕೆ ಈ ರೊಬೋಟ್​ಗಳು ಧನ್ಯವಾದವನ್ನ ತಿಳಿಸಲು ಕೃತಕ ಸಂವಹನ ಯಂತ್ರವನ್ನ ಕೂಡ ಈ ರೊಬೋಟ್​ಗಳಿಗೆ ಅಳವಡಿಸಲಾಗಿದೆ, ಅನ್ನೋದನ್ನ ಈಗಾಗ್ಲೆ ದೃಢ ಪಡಿಸಲಾಗಿದೆ.

ಇದೀಗ ಈ ರೊಬೋಟ್​ಗಳನ್ನ ಲಾಸ್​ವೇಗಸ್​ ವಿದ್ಯುನ್​​ನ್ಮಾನ ಯಂತ್ರಗಳ ಪ್ರದರ್ಶನದ ವೇಳೆ ಅನಾವರಣಗೊಳಿಸಲಾಗ್ತಾ ಇದ್ದು ಇದೇ ರೀತಿಯಾಗಿ ಇನ್ನಷ್ಟು ಅಭಿವೃದ್ಧಿ ಹೊಂದಿರುವ ಹಾಗು ಸಾಕಷ್ಟು ಅಡ್ವಾನ್ಸ್​ ಆಗಿರುವ ರೊಬೋಟ್​ಗಳನ್ನ ಪ್ರದರ್ಶನಕ್ಕೆ ಇಡುವ ಸಾಧ್ಯತೆ ಇದೆ ಅಂತ ಹೇಳಲಾಗ್ತಾ ಇದೆ. ಒಂದು ವೇಳೆ ಈ ಫುಡ್​ ಡೆಲಿವರಿ ರೊಬೋಟ್​ಗಳಿಗೆ ಬೇಡಿಕೆ ಹೆಚ್ಚಾದ್ರೆ ಇವುಗಳು ಮಾರಿಕಟ್ಟೆಗೆ ಅಧಿಕೃತವಾಗಿ ಲಗ್ಗೆ ಇಡೋದ್ರಲ್ಲಿ ಯಾವುದೇ ಅನುಮಾನ ಇಲ್ಲ ಅಂತ ಸಂಸ್ಥೆ ಹೇಳಿಕೊಂಡಿದೆ, ಇನ್ನು ಇದೇ ರೀತಿಯಾದ ರೊಬೋಟ್​ಗಳನ್ನ ಎಲ್​ಜಿ ಕಂಪನಿ ನಿರ್ಮಾಣ ಮಾಡಿದ್ದು ಅವುಗಳು ಕೂಡ 4 ಚಕ್ರಗಳನ್ನ ಹೊಂದಿವೆ ಆದ್ರೆ ಈ ರೊಬೋಟ್​ಗಳಿಗೆ ಈಗಾಗ್ಲೆ ಆರ್ಟಿಫಿಶಲ್​ ಇಂಟಲಿಜೆನ್ಸ್​ ಸಿಸ್ಟಮ್​ ಅನ್ನ ಅಳವಡಿಸಲಾಗಿದೆ ಅಂತ ಸಂಸ್ಥೆ ಹೇಳಿಕೊಂಡಿದ್ದು ಅವುಗಳು ಹೇಗೆ ಕಾರ್ಯ ನಿರ್ವಹಿಸಲಿದೆ ಅನ್ನೊದೆ ಕುತೂಹಲಕ್ಕೆ ಕಾರಣವಾಗಿದೆ.
ಒಟ್ಟಾರೆಯಾಗಿ ಈಗ ಈ ರೊಬೋಟ್​ಗಳನ್ನ ಪ್ರದರ್ಶನಕ್ಕೆ ಇಡಬೇಕು ಅಂತ ಹಲವು ಕಂಪನಿಗಳು ನಾ ಮುಂದು.. ತಾ ಮುಂದು ಅಂತ ಮುಗಿ ಬಿದ್ದಿವೆ, ಆದ್ರೆ ಇವುಗಳ ಬೆಲೆ ದುಬಾರಿಯಾಗಿರುವುದರಿಂದ ಬಹುತೇಕ ವ್ಯಾಪರಿಗಳು ಇದನ್ನ ಖರೀದಿಸೋದಕ್ಕೆ ಮುಂದೆ ಬರೋದಿಲ್ಲ ಅಂತ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಒಂದು ವೇಳೆ ಕಡಿಮೆ ಬೆಲೆಗೆ ಆಹಾರ ಸರಬರಾಜು ರೊಬೋಟ್​ಗಳನ್ನ ಪ್ರದರ್ಶನಕ್ಕೆ ಇಟ್ಟು, ಅವುಗಳು ಮಾರಾಟವಾದ್ರೆ, ಇದು ಆಹಾರ ಉತ್ಪನ್ನಗಳ ಡೆಲಿವರಿ ಕ್ಷೇತ್ರದ ಮೇಲೆ ಹಾಗು ಅದನ್ನೆ ನಂಬಿ ಜೀವನ ನಡೆಸುತ್ತಿದ್ದ ಅದೆಷ್ಟೋ ಜನ ಯುವಕರಿಗೆ ಸಂಕಷ್ಟ ಎದುರಾಗುವುದರಲ್ಲಿ ಸುಳ್ಳಿಲ್ಲ.

ಲಿಖಿತ್​ ರೈ, ಪವರ್​ ಟಿವಿ

RELATED ARTICLES

Related Articles

TRENDING ARTICLES