ನಂಗ್ಲಿ ಆರ್ಟಿಓ ಚೆಕ್ ಪೋಸ್ಟ್; ಸಮಯ ಮಧ್ಯರಾತ್ರಿ 12 ಗಂಟೆ; ಕತ್ತಲಲ್ಲೆ ನಡೆಯುತ್ತಿತ್ತು ಲಂಚಗುಳಿತನ; ಹಣ ಕೊಟ್ಟವರ ಮುಖ ನೋಡುವಷ್ಟೂ ಟೈಮ್ ಅಧಿಕಾರಿಗಳ ಬಳಿ ಇರಲಿಲ್ಲ!
ಯಥಾ ಪ್ರಕಾರ ಪವರ್ SIT ತಂಡ ನಮ್ಮದು ಗುಜ್ರಿ ತುಂಬಿದ ಲಾರಿ ಎಂದು 500 ರೂ ಕೊಡುವದಕ್ಕೆ ಮುಂದಾಯ್ತು. ಆದರೆ ಅಲ್ಲಿ ಕುಳಿತ ವಸೂಲಿಕೊರರು 1000 ಸಾವಿರ ರೂ ಕೊಡಿ ಎಂದು ಗದರಿಸಿ ಬಿಟ್ಟರು. ಅವರು ನಮ್ಮ ತಂಡಕ್ಕೆ ಮಾತ್ರವಲ್ಲ ಅಲ್ಲಿಗೆ ಬರುತ್ತಿದ್ದ ಎಲ್ಲಾ ಡ್ರೈವರ್ಗಳ ಮೇಲೆ ದಬಾಯಿಸುತ್ತಿದ್ದರು.
ಹೀಗೆ ಎಲ್ಲರ ಮೇಲೂ ಗದರಿಸುತ್ತಿದ್ದ ಚೆಕ್ಪೋಸ್ಟ್ ಸಿಬ್ಬಂದಿ ನಮ್ಮ ಕ್ಯಾಮರಾ ಕಂಡ ಕೂಡಲೇ ಓಡಿಹೋದ್ರು. ಅವರು ಪರಾರಿಯಾದದ್ದನ್ನ ಕಂಡ ಲಾರಿ ಚಾಲಕರು ಸ್ವಲ್ಪ ನಿರಾಳವಾದ್ರು. ಅವರ ನೋವನ್ನ ಕ್ಯಾಮೆರಾ ಎದುರು ತೋಡಿಕೊಂಡರು.
ಚಾಲಕರು ತಮ್ಮ ಅಳಲನ್ನು ತೋಡಿಕೊಳ್ತಿರೋದನ್ನ ನೋಡಿ ಅಲ್ಲೇ ಇದ್ದ ಕೆಲ ಚೆಕ್ಪೋಸ್ಟ್ ಸಿಬ್ಬಂದಿಗಳು ಎಲ್ಲಿ ತಮ್ಮ ಬಂಡವಾಳ ಬಯಲಾಗುತ್ತೋ ಅಂತ ನಮ್ಮ ತಂಡಕ್ಕೆ ಬೆದರಿಸುವ ಪ್ರಯತ್ನಕ್ಕೂ ಮುಂದಾದರು. ನಮ್ಮ ಮೇಲೆ ಆವಾಜ್ ಹಾಕುವುದಕ್ಕೆ ಶುರುಮಾಡಿದರು.
ಯಾವಾಗ ನಮ್ಮ ತಂಡ ಅವರ ಬೆದರಿಕೆಗೆ ಬಗ್ಗಲ್ಲ ಅಂತ ತಿಳಿಯಿತೋ ಆಗ ಕುಳಿತು ಮಾತನಾಡೋಣ ಅಂತಾ ದುಂಬಾಲು ಬಿದ್ರು. ಅವರ ಯಾವ ಮಾತಿಗೂ ಗಮನ ಕೊಡದ ನಮ್ಮ ತಂಡ ಅವರ ಕರ್ಮಕಾಂಡವನ್ನೆಲ್ಲ ಚಿತ್ರೀಕರಿಸಿಕೊಂಡು ಅತ್ತಿಬೆಲೆ ಚೆಕ್ ಪೋಸ್ಟ್ ಕಡೆ ಸಾಗಿತು.