ಝಳಕಿಯಲ್ಲಿ ನಮ್ಮ ಸ್ವಾಗತಕ್ಕೆ ನಿಂತಿದ್ದು ಝಣ ಝಣ ಕಾಂಚಾಣ..
ಸಂಜೆ 4 ರ ಸುಮಾರಿಗೆ ಬೆಂಗಳೂರಿನಿಂದ ಹೊರಟ ನಮ್ಮ ತಂಡ ಬೆಳಗಿನ ಜಾವ 3 ಗಂಟೆಗೆ ಝಳಕಿ ಚೆಕ್ ಪೋಸ್ಟ್ ತಲುಪಿತ್ತು. ಇಲ್ಲಿಯೂ ಸಹ ನಮ್ಮ ಕಾರ್ಯಾಚರಣೆ ಮುಮದುವರಿದಿತ್ತು. ನಮ್ಮ ಪ್ರತಿನಿಧಿ ಇಲ್ಲಿಯೂ ಸಹ ಚಾಲಕರ ವೇಷದಲ್ಲಿ ಕಾಸು ಕೊಡುವುದಕ್ಕೆ ಮುಂದಾದ. ಇಲ್ಲಿ ನಡೆಯುವ ಎಲ್ಲ ದೃಶ್ಯಗಳನ್ನು ನಮ್ಮ ರಹಸ್ಯ ಕ್ಯಾಮೆರಾ ಸೆರೆಹಿಡಿಯುತ್ತಿತ್ತು.
ಹಣ ತೆಗದುಕೊಳ್ಳುವುದು ನಮ್ಮ ರಹಸ್ಯ ಕ್ಯಾಮರಾದಲ್ಲಿ ರೆಕಾರ್ಡ್ ಆಗುತ್ತಿದ್ದಂತೆ ನಮ್ಮ ತಂಡ ಮುಂದೆ ನಡೆಯುವ ಘಟನಾವಳಿಗಳನ್ನ ಬಹಿರಂಗವಾಗೇ ಚಿತ್ರೀಕರಣ ಮಾಡೋಣ ಅಂತ ತೀರ್ಮಾನಿಸಿ ಕ್ಯಾಮೆರಾ ಹೊರತೆಗೆಯಿತು. ಯಾವಾಗ ನಮ್ಮ ಕ್ಯಾಮೆರಾ ಅಲ್ಲಿನ ಸಿಬ್ಬಂದಿ ಕಣ್ಣಿಗೆ ಬಿತ್ತೋ ಅವರೆಲ್ಲಾ ದಿಕ್ಕಾಪಾಲಾಗಿ ಓಡಲು ಶುರುಮಾಡಿದ್ರು. ಚೆಕ್ ಪೋಸ್ಟ್ ನ ಹಿಂದಿದ್ದ ಪಾಳುಜಾಗದಲ್ಲಿ ಕೈಲಿದ್ದ ನೋಟುಗಳನ್ನು ಎಸೆದು ಮಿಕ್ಕಿದ್ದ ಕಂತೆ ಕಂತೆ ನೋಟುಗಳನ್ನ ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡು ಪರಾರಿಯಾದ್ರು.
ಆಗ ಅಲ್ಲಿದ್ದ ಲಾರಿ ಚಾಲಕರನ್ನ ನಮ್ಮ ತಂಡ ಮಾತನಾಡಿಸ್ತು. ಅವರು ತಮ್ಮ ಗೋಳನ್ನು ನಮ್ಮ ಕ್ಯಾಮರಾ ಮುಂದೆ ಹೇಳಿಕೊಂಡರು. ಬಹುತೇಕ ಗಡಿ ಭಾಗದಲ್ಲಿ ಒಂದು ಚೆಕ್ ಪೋಸ್ಟ್ ಮೂಲಕ ತಪಾಸಣೆ ನಡೆಸಿದ್ರೆ ಝಳಕಿಯಲ್ಲಿ ಎರಡು ಬದಿಯಲ್ಲಿ ಪ್ರತ್ಯೇಕ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಸುಲಿಗೆಗೆ ನಿಂತಿದ್ದಾರೆ.
ಇನ್ನೊಂದು ಬದಿಯಲ್ಲಿ ಇರುವ ಚೆಕ್ ಪೋಸ್ಟ್ ನಲ್ಲಿ ಕಾಸು ವಸೂಲು ಮಾಡ್ತಾರೆ ಅನ್ನೋದು ಬಿಟ್ಟರೆ ಅಲ್ಲಿ ಯಾವುದೇ ಬಿಲ್ ಬುಕ್ ಆಗಲಿ ಇತರ ದಾಖಲಾತಿಗಳಾಗಲಿ ಯಾವುದು ಇರಲಿಲ್ಲ. ಬಿಲ್ ಬುಕ್ ಎಲ್ಲಿ ಎಂದು ಕೇಳಿದರೆ ಬರೀ ಹಾರಿಕೆ ಉತ್ತರ ನೀಡಿದ್ರು.
ಬಲಭಾಗದಲ್ಲಿ ಇದ್ದ ಚೆಕ್ಪೋಸ್ಟ್ ಮುಖ್ಯ ಕಚೇರಿಗೆ ಭೇಟಿಕೊಟ್ಟೆವು. ಅಷ್ಟೋತ್ತಿಗಾಗಲೆ ನಮ್ಮ ಬರುವಿಕೆ ತಿಳಿದು ಎಚ್ಚತ್ತುಕೊಂಡವರು ತಾವು ಸಾಚಾಗಳು ಎಂಬಂತೆ ಸೋಗು ಹಾಕಿದ್ದರು. ಆದರೆ ಇವರ ಅಸಲಿಯತ್ತನ್ನು ಮಾಮೂಲು ಕೊಡಲು ಬಂದ ಚಾಲಕರು ವಿವರಿಸಿ ಹೇಳಿದ್ರು ಸುತ್ತಮುತ್ತ ಸಿಸಿ ಟಿವಿ ಕ್ಯಾಮರಾ ಇಲ್ಲ. ಅದರ ಬಗ್ಗೆ ವಿಚಾರಿಸಿದರೆ ಅದಕ್ಕೊಂದು ಸಬೂಬು ಹೇಳಿದರು. ಇಡೀ ರಾಜ್ಯಾದ್ಯಂತ ಲಂಚದ ಹಾವಳಿ ಇದೆ ರೀತಿ ನಡೀತಿದೆ ಎನ್ನುವುದನ್ನ ಕನಫರ್ಮ್ ಮಾಡಿಕೊಂಡೆವು. ನಂತರ ನಾವು ಕಾರ್ಯಾಚರಣೆ ಮುಗಿಸಿ ಬೆಳಗ್ಗೆ 8 ಗಂಟೆಗೆ ಬೆಂಗಳೂರಿಗೆ ವಾಪಸ್ ಹೊರಟೆವು.
ಝಳಕಿಯಿಂದ ಹೊರಟ ನಾವು ರಾತ್ರಿ 9 ಕ್ಕೆ ಬೆಂಗಳೂರು ತಲುಪಿ ಈ ಹಿಂದೆ ಕಾರ್ಯಾಚರಣೆ ಮಾಡಿದ ಕಡೆಗಳಲ್ಲಿ ಏನು ನಡೀತಿದೆ ಎಂದು ಕುತೂಹಲ ಕಾಡುತ್ತಿತ್ತು. ವಿಶ್ರಾಂತಿಯನ್ನು ಕಡೆಗಣಿಸಿ ಮತ್ತೆ ಬಾಗೇಪಲ್ಲಿ ಕಡೆ ಪ್ರಯಾಣ ಬೆಳೆಸಿದೆವು..
ಅಲ್ಲಿ ಹೋಗಿ ಮತ್ತೆ ನೋಡಿದಾಗ ಯಾವುದೇ ಬದಲಾವಣೆ ಇರಲಿಲ್ಲ. ಯಥಾ ಸ್ಥಿತಿಯಲ್ಲಿ ಚಾಲಕರಿಂದ ಹಣ ಪೀಕುವುದರಲ್ಲಿ ಸಿಬ್ಬಂದಿಗಳು ತಲ್ಲಿನರಾಗಿದ್ದರು. ಈ ಹಿಂದೆ ಅನುಮಾನಾಸ್ಪದವಾಗಿ ಕಾಣಿಸಿದ್ದ ವ್ಯಕ್ತಿ ಮತ್ತೇ ಕಾಣಿಸಿಕೊಂಡಿದ್ದ. ಅವನ್ನನ್ನು ತಡೆದು ವಿಚಾರಿಸಿದಾಗ ಅವನ ಆರ್ಭಟ ನೋಡಬೇಕಿತ್ತು.
ಆತನ್ನನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆತನ ಜೇಬಿನಲ್ಲಿ ಎರಡು ಬಂಡಲ್ ಸಿಕ್ಕಿತ್ತು. ಅದನ್ನು ಸಹ ವಿಕ್ಷಕರ ಮುಂದೆಯೇ ಇಡೋಣ ಎಂದು ಹಾಗೇ ಇಡಲಾಗಿದೆ. ಇಷ್ಟಕ್ಕೂ ಆರ್ಭಟ ನಿಲ್ಲಿಸದ ಈ ವ್ಯಕ್ತಿಯನ್ನು ಸ್ಥಳೀಯ ಪೊಲೀಸರ ಸುಪರ್ದಿಗೆ ನೀಡಿ ಮರಳಿದೆವು.