Sunday, December 22, 2024

ಪಾದಯಾತ್ರೆ ಕೈ ಬಿಡುವಂತೆ ಹೇಳಿದ್ರು : ಡಿಕೆ ಶಿವಕುಮಾರ್

ರಾಜ್ಯ : ಕಾಂಗ್ರೆಸ್​ ಪಕ್ಷವು ಕುಡಿಯುವ ನೀರಿನ ಯೊಜನೆಯಾದ ಮೇಕೆದಾಟು ಪಾದಯಾತ್ರೆಯನ್ನು ಆರಂಭಿಸಿ ಮೊದಲನೇ ದಿನದ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಇಂದು ಎರಡನೇ ದಿನವಾದ ಸೋಮವಾರ ದೊಡ್ಡದ ಆಲಹಳ್ಳಿ ಗ್ರಾಮದಿಂದ ಪಾದಯಾತ್ರೆಯನ್ನು ಆರಂಭ ಮಾಡಿದರು.

ಡಿಕೆ ಶಿವಕುಮಾರ್​ ಅವರ ಸ್ವಗ್ರಾಮವಾದ ದೊಡ್ಡದ ಆಲಹಳ್ಳಿಯಿಂದ ಪ್ರಾರಂಭವಾದ ಪಾದಯಾತ್ರೆಯು ಕನಕಪುರ ಟೌನ್​​ ಕಡೆಗೆ ಸಾಗಿದ್ದು , ಇಂದು ಕೂಡ ಹಲವಾರು ಕಾಂಗ್ರೇಸ್​ ಕಾರ್ಯಕರ್ತರು , ಬೆಂಬಲಿಗರು ಈ ಯಾತ್ರೆಗೆ ಸಾಥ್​​ ನೀಡಿದ್ದಾರೆ. ಪಾದಯಾತ್ರೆ ಮಾಡುವವರಿಗೆ ತಂಪು ಪಾನಿಯ, ಜ್ಯೂಸ್, ಎಳೆನೀರು ವ್ಯವಸ್ಥೆ ಮಾಡಿರುವ ಡಿ.ಕೆ‌ ಶಿವಕುಮಾರ್​ ಅವರ ಬೆಂಬಲಿಗರು.

ಇತ್ತ , ಡಿಕೆ ಶಿವಕುಮಾರ್​ ಅವರಿಗೆ ಕರೆ ಮಾಡಿದ ಮಾಜಿ ಸಿ ಎಂ ಸಿದ್ದರಾಮಯ್ಯ ಅವರು ನಾನು ಇಂದು ಸಂಜೆಯೊಳಗೆ ಪಾದಯಾತ್ರೆಗೆ ಬರುತ್ತೇನೆಂದು ತಿಳಿಸಿದರು , ಆದರೆ ಡಿಕೆಶಿ ಅವರು ನೀವು ಮೊದಲು ಸಂಪೂರ್ಣವಾಗಿ ಸ್ವಸ್ಥರಾಗಿ ನಾಳೆ ಬನ್ನಿ ಹೇಳುವ ಮೂಲಕ ಅವರ ಆರೋಗ್ಯವನ್ನು ವಿಚಾರಿಸಿಕೊಂಡರು.

ಹಾಗೂ ಮಾತನಾಡುವಾಗ ನೆನ್ನೆ ರಾತ್ರಿ ಮನೆಯ ಹತ್ತಿರ ಆರೋಗ್ಯ ಮಂತ್ರಿ ಕೆ.ಸುಧಾಕರ್​ ಅವರು ಪ್ಲಾನ್​ ಮಾಡಿ ಡಿಸಿ ಯನ್ನು ಕಳುಹಿಸಿ ಪಾದಯಾತ್ರೆ ಕೈ ಬಿಡುವಂತೆ ಹೇಳಿದರು. ಆದರೆ , ನಾನು ಉಗಿದು ಕಳುಹಿಸಿದೆ ಎಂದು ಸಿದ್ದರಾಮಯ್ಯ ಅವರಿಗೆ ಡಿಕೆಶಿ ಅವರು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES