Wednesday, January 22, 2025

ಸಿರ್ಬಡ್ ನೌಕಾನೆಲೆ, ಮೆಡಿಕಲ್ ಕಾಲೇಜಿನಲ್ಲಿ ಹೆಚ್ಚುತ್ತಿರುವ ಕರೋನಾ ಪಾಸಿಟಿವ್

ಕಾರವಾರ : ಮೆಡಿಕಲ್ ಕಾಲೇಜಿನ ವೈದ್ಯರು ವಿದ್ಯಾರ್ಥಿಗಳು ಸೇರಿ 29ಮಂದಿಯಲ್ಲಿ ಪಾಸಿಟಿವ್ ಕಂಡುಬಂದ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಮೂರು ದಿನದಲ್ಲಿ ಮೆಡಿಕಲ್ ಕಾಲೇಜಿನಲ್ಲೆ ಅತೀ ಹೆಚ್ಚು ಪಾಸಿಟಿವ್ ಕಂಡುಬಂದಿದ್ದು. ಸಿರ್ಬಡ್ ನೌಕಾನೆಲೆಯ ನೌಕರರಿಂದ ಪಾಸಿಟಿವ್ ಸ್ಪೋಟಗೊಂಡಿದೆ. ಸಿರ್ಬಡ್ ನೌಕಾನೆಲೆಯ 30 ನೌಕರಿಗೆ ಪಾಸಿಟಿವ್ ಪತ್ತೆಯಾಗಿದ್ದು, ಉತ್ತರಪ್ರದೇಶದಿಂದ ಬಂದ ಸಿಬರ್ಡ್ ನೌಕರರಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ.

ಹೊರರಾಜ್ಯದಿಂದ ಬಂದ ಸಿರ್ಬಡ್ ನೌಕರರಲ್ಲಿ ಕಾಣಿಸಿಕೊಳ್ಳುತ್ತಿರುವ ಕರೋನಾ,ಉತ್ತರಪ್ರದೇಶದಿಂದ ಬಂದಿರುವ ಸಿರ್ಬಡ್ ನೌಕಾಲೆಯ ಉದ್ಯೋಗಿಗಳಿಗೆ ಕೊರೋನಾ ಪಾಸಿಟಿವ್ ದೃಡಪಟ್ಟಿದೆ ಎಂದು ಉತ್ತರಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ಶರದ್ ನಾಯಕ ಮಾಹಿತಿಯನ್ನು ನೀಡಿದ್ದಾರೆ.

RELATED ARTICLES

Related Articles

TRENDING ARTICLES