Wednesday, January 22, 2025

ಬಿಜೆಪಿ ನಾಯಕರ ನಿದ್ದೆಗೆಡಿಸಿದ ಸಿದ್ದು, ಡಿಕೆಶಿ

ರಾಜ್ಯ : ಕಾಂಗ್ರೆಸ್‌ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ ಬಿಜೆಪಿ ನಾಯಕರನ್ನ ನಿದ್ದೆಗೆಡಿಸಿದೆ. ಹೀಗಾಗಿ ಯಾವುದೇ ಅಧಿಕೃತ ಕಾರ್ಯಕ್ರಮ ನಿಗದಿಯಾಗದಿದ್ದರೂ, ಬಿಜೆಪಿ ನಾಯಕರು ಸಭೆ ನಡೆಸಿದರು. ಮೇಕೆದಾಟು ಪಾದಯಾತ್ರೆ ಬಗ್ಗೆ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಕಾಂಗ್ರೆಸ್ಸಿಗರನ್ನ ಅರೆಸ್ಟ್ ಮಾಡದೇ ಪಾದಯಾತ್ರೆಗೆ ಮಟ್ಟ ಹಾಕಲು ಸರ್ಕಾರ ಹೊರಟಿದೆ.

ಮೇಕೆದಾಟು ಜಲಾಶಯ ಅನುಷ್ಠಾನಕ್ಕೆ ಒತ್ತಾಯಿಸಿ ಪಾದಯಾತ್ರೆ ಅದ್ದೂರಿಯಾಗೇ ಉದ್ಘಾಟನೆಗೊಂಡಿದೆ. ಇತ್ತ ಈ ಪಾದಯಾತ್ರೆ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಹೀಗಾಗಿ ರೇಸ್ ಕೋರ್ಸ್ ರಸ್ತೆಯ ಮುಖ್ಯಮಂತ್ರಿ ಸರ್ಕಾರಿ ನಿವಾಸದಲ್ಲಿ ಬಿಜೆಪಿ ನಾಯಕರು ಹಾಗೂ ಸಚಿವರು ಸಭೆ ನಡೆಸಿದ್ರು. ಈ ಸಭೆಯಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ, ಜಲ ಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ, ಗೃಹ ಸಚಿವ ಆರಗ ಜ್ಞಾನೇಂದ್ರ, ಆರೋಗ್ಯ ಸಚಿವ ಸುಧಾಕರ್, ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಪಾದಯಾತ್ರೆಯಿಂದ ಕಾಂಗ್ರೆಸ್ ಕೇವಲ ರಾಜಕೀಯ ಲಾಭ ನೋಡುತ್ತಿದೆ. ಸರ್ಕಾರ ಪೊಲೀಸ್ ಶಕ್ತಿ ಪ್ರದರ್ಶನ ಮಾಡಿದ್ದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಪ್ರಚಾರ ಸಿಗಲಿದೆ. ಹೀಗಾಗಿ, ಕಾನೂನು ಕ್ರಮ ಸೂಕ್ತವಾಗಿದೆ ಎಂದು ತೀರ್ಮಾನ ಕೈಗೊಂಡಿದ್ದಾರೆ.

ಪಾದಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾಲ್ಗೊಂಡು ಕೊವಿಡ್-19 ನಿಯಮ ಉಲ್ಲಂಘನೆ ಮಾಡಿದ್ದಾರೆ. ಇದಕ್ಕೆ ಸೂಕ್ತ ಕಾನೂನು ಕ್ರಮದ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವರ ಸಭೆಯಲ್ಲಿ ನಿರ್ಧರಿಸಲಾಗಿದೆ. ಹಾಗೆಯೇ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಸರ್ಕಾರ ಅಂಕಿ-ಅಂಶಗಳನ್ನು ಜನರ ಮುಂದಿಟ್ಟು ಬಿಜೆಪಿ ಯೋಜನೆಗಾಗಿ ಮಾಡಿದ ಕಾನೂನಾತ್ಮಕ ಹೋರಾಟ, ಪ್ರಧಾನಿ ಮೋದಿಯೊಂದಿಗಿನ ಮಾತುಕತೆಯನ್ನು ಜನರ ಮುಂದಿಡಲು ನಿರ್ಧಾರ ಮಾಡಿದೆ. ಹಾಗೇ ಬಿಜೆಪಿ ವತಿಯಿಂದ ಜನರಲ್ಲಿ ಯೋಜನೆಗೆ ಈ ಹಿಂದೆ ಕಾಂಗ್ರೆಸ್ ಆಡಳಿತದ 5 ವರ್ಷದಲ್ಲಿ ಯೋಜನೆ ವಿಳಂಬ ಮಾಡಿದ್ದು ಮತ್ತು ಪಕ್ಷದ ಪ್ರಯತ್ನವನ್ನು ಜನರ ಮುಂದಿಟ್ಟು ಜನಾಭಿಪ್ರಾಯವನ್ನು ರೂಪಿಸಲು ಹೊರಟಿದೆ.

ಕೋವಿಡ್‌ ನಿಯಮ ಉಲ್ಲಂಘನೆಗೆ ಕಾನೂನು ಕ್ರಮ :

ಕನಕಪುರ ತಾಲ್ಲೂಕಿನ ಸಂಗಮದಲ್ಲಿ ಕಾವೇರಿ ನದಿಗೆ ತೆಪ್ಪದ ಮೂಲಕ ಸಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸ್ನಾನ ಮಾಡಿ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸುವ ವೇಳೆ ಡಿಕೆ ಶಿವಕುಮಾರ್ ಸ್ವಲ್ಪ ಜಾರಿದ್ದಾರೆ. ಇದರಿಂದ ಅವರ ಬ್ಯಾಲೆನ್ಸ್ ತಪ್ಪಿದೆ. ಇನ್ನು ಬಿಜೆಪಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಡಿಕೆ ಶಿವಕುಮಾರ್ ದಾಟಲಿಲ್ಲ, ಮೇಕೆಯಾದರೂ ದಾಟಲಿ ಎಂದು ಅಣಕವಾಡಿದೆ.

ಇನ್ನು, ಸುಸ್ತು, ಮೈ-ಕೈ ನೋವು ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಪಾದಯಾತ್ರೆಯಿಂದ ವಾಪಸ್‌ ಆಗಿದ್ದಕ್ಕೆ ಬಿಜೆಪಿ ವ್ಯಂಗ್ಯವಾಡಿದೆ.. ಟ್ವೀಟ್‌ ಮಾಡಿರುವ ಸಚಿವ ಗೋವಿಂದ ಕಾರಜೋಳ, ಸಿದ್ದರಾಮಯ್ಯಗೆ ಜ್ವರ ಕಾಣಿಸಿಕೊಂಡಿದ್ದು ನನಗೆ ಕಳವಳ ಆಗಿದೆ. ಸಿದ್ದರಾಮಯ್ಯನವರೇ ದಯವಿಟ್ಟು ವಿಶ್ರಾಂತಿ ತೆಗೆದುಕೊಳ್ಳಿ. ತಮ್ಮ ಆರೋಗ್ಯ ರಕ್ಷಣೆ ಮಹತ್ವದ್ದು ಅಂತ ವ್ಯಂಗ್ಯವಾಡಿದ್ದಾರೆ.

ಸದ್ಯ ಕೊವಿಡ್-19 ನಿಯಮ ಉಲ್ಲಂಘನೆ ಮಾಡಿದ್ದಲ್ಲಿ, National Disaster Management Act (NDMA), Epidemic Act ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಇದರ ಜೊತೆ ರಾಮನಗರ ಜಿಲ್ಲೆಯಲ್ಲಿ 144 section ವಿಧಿಸಿದ್ದರೂ ಸಾವಿರಾರು ಜನರನ್ನ ಸೇರಿಸಿದ ನಾಯಕರ ವಿರುದ್ಧ ಕಾನೂನು ಉಲ್ಲಂಘನೆ ಕೇಸ್ ಹಾಕಲು ಸರ್ಕಾರ ನಿರ್ಧರಿಸಿದೆ.ಆದ್ರೆ ಕಾನೂನು ಕ್ರಮವನ್ನು ಹೇಗೆ ಜಾರಿಗೊಳಿಸುತ್ತದೆ ಅನ್ನೊದು ಕುತೂಹಲಕ್ಕೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES