Wednesday, January 22, 2025

ವಕೀಲ ವೃತ್ತಿ ಆಯ್ಕೆ ಮಾಡಿಕೊಳ್ಳುವರಿಗೆ ಗುಡ್ ನ್ಯೂಸ್ : ಮೋತಕಪಳ್ಳಿ ಕಾಶಿನಾಥ

ರಾಜ್ಯ :  ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್​​ನ ಅಧ್ಯಕ್ಷರಾಗಿ ಶ್ರೀ ಮೋತಕಪಳ್ಳಿ ಕಾಶಿನಾಥ ಪದಗ್ರಹಣ ಮಾಡಿದ್ದಾರೆ .ಇವರು ಇಂದು ಸ್ಟೇಟ್ ಬಾರ್ ಕೌನ್ಸಿಲ್​​ಗೆ ಭೇಟಿ ನೀಡಿ ತಮ್ಮ ಮುಂದಿನ ರೂಪುರೇಶಿಗಳು ಏನೇನು , ಯಾವ ರೀತಿ ಕೆಲ್ಸ ಮಾಡಬೇಕು ಅಂತ ಎಲ್ಲರ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಗಾಮೀಣ ಪ್ರದೇಶದಿಂದ ಬಂದು ನೂತನವಾಗಿ ವಕೀಲ ವೃತ್ತಿ ನಡೆಸುವವರಿಗೆ ಆರ್ಥಿಕ ಸಹಾಯವನ್ನು ಒದಗಿಸುವುದು, ವಕೀಲರಿಗೆ ಮೂಲಭೂತ ಸೌಕರ್ಯಗಳಾದ ಗ್ರಂಥಾಲಯ, ನೂತನ ತಂತ್ರಜ್ಞಾನ ಹಾಗೂ ಗಣಕಯಂತ್ರಗಳನ್ನು ಒದಗಿಸುವುದಕ್ಕೆ ಹೆಚ್ಚಿನ ಆಸಕ್ತಿ ವಹಿಸುವುದಾಗಿ ತಿಳಿಸಿದ್ದಾರೆ .

ಕೋವಿಡ್-೧೯ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ವಕೀಲರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಆರ್ಥಿಕ ಸಹಾಯವನ್ನು ಒದಗಿಸುವ ಉದ್ದೇಶವನ್ನು ವ್ಯಕ್ತಪಡಿಸಿದರು. ಹೈದ್ರಾಬಾದ್​ ಕರ್ನಾಟಕ ಪ್ರದೇಶದಿಂದ ನೋಂದಾಯಿತರಾಗುವ ನವ ವಕೀಲರಿಗೆ ಕಲಂ ೩೭೧ ಎ ರ ಅನ್ವಯ ಇನ್ನು ಹೆಚ್ಚಿನ ಸಹಾಯ, ಸವಲತ್ತುಗಳನ್ನು ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಲಾಗುವುದೆಂದು ಅವರು ಈ ಸಂದರ್ಭದಲಿ ತಿಳಿಸಿದರು. ಭಾರತೀಯ ವಕೀಲರ ಪರಿಷತ್ತಿನ ಸದಸ್ಯರು ಹಾಗೂ ಕೋ-ಛೇರಮನ್ ಆದ ಶ್ರೀ ವೈ. ಆರ್ ಸದಾಶಿವರೆಡ್ಡಿ ಮತ್ತು ಪರಿಷತ್ತಿನ ಎಲ್ಲಾ ಸದಸ್ಯರು ಶುಭಾಷಯ ಕೋರಿದರು. ಮಾಜಿ ಅಧ್ಯಕ್ಷರಾದ ಶ್ರೀ. ಕೆ.ಬಿ.ನಾಯ್ಕ್ ಹಾಗೂ ನಿರ್ಗಮಿತ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಬಾಬು ಎಲ್ ಮತ್ತು ಉಪಾಧ್ಯಕ್ಷರಾದ ಶ್ರೀ ಕಿವಾಡ ಕಲ್ಮೇಶ್ವರ ತುಕಾರಾಮ ಇವರು ನೂತರ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಅಧಿಕಾರವನ್ನು ಹಸ್ತಾಂತರಿಸಿ, ಮಾತನಾಡಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಧ್ಯೇಯಗಳನ್ನು ಹಾಗೂ ಗ್ರಾಮೀಣ ಭಾಗದಲ್ಲಿ ವಕೀಲರ ವೃತ್ತಿ ನಡೆಸುವ ವಕೀಲರಿಗೆ ಕಾರ್ಯಗಾರ ಹಾಗೂ ವೃತ್ತಿಪರತೆಯನ್ನು ಹೆಚ್ಚಿಸುವಲ್ಲಿ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಇನ್ನಷ್ಟು ಶ್ರಮಿಸಬೇಕೆಂಬ ಕಿವಿ ಮಾತನ್ನು ಹೇಳಿದರು.

RELATED ARTICLES

Related Articles

TRENDING ARTICLES