Sunday, January 19, 2025

ಗೋಲ್ಡನ್ ಸ್ಟಾರ್ ಜೊತೆ ಬಂತು ಗೋಲ್ಡನ್ ಗ್ಯಾಂಗ್..!

ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಕಾಮಿಡಿ ಟೈಮ್ ಅನ್ನೋ ಕಾರ್ಯಕ್ರಮದ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದರು. ನಂತರ ನಟರಾಗಿ ಸಿನಿಮಾ ಇಂಡಸ್ಟ್ರಿಗೂ ಕಾಲಿಟ್ಟರು. ಸ್ಟಾರ್ ನಟರಾದ ಬಳಿಕ ಸೂಪರ್ ಮಿನಿಟ್ ಅನ್ನೋ ಜನಪ್ರಿಯ ಕಾರ್ಯಕ್ರಮದ ನಿರೂಪಕರಾಗಿ ಮನೆಮಾತಾದರು.

ಅದಾದ ಬಳಿಕ ಇದೀಗ ಖಾಸಗಿ ವಾಹಿನಿಯಲ್ಲಿ ಮೂಡಿಬರ್ತಿರೋ ಗೋಲ್ಡನ್ ಗ್ಯಾಂಗ್​ ಅನ್ನೋ ಮತ್ತೊಂದು ಸುಂದರವಾದ ಕಾರ್ಯಕ್ರಮವನ್ನು ನಟ ಗಣೇಶ್ ನಿರೂಪಣೆ ಮಾಡ್ತಿದ್ದಾರೆ. ಈಗಾಗ್ಲೇ ಈ ಕಾರ್ಯಕ್ರಮದ ಮೊದಲ ಎಪಿಸೋಡ್ ಪ್ರಸಾರವಾಗಿದೆ.

ಫಸ್ಟ್ ಎಪಿಸೋಡ್​ನಲ್ಲಿ ಗಣಿ ಅವರ ಆತ್ಮೀಯ ಗೆಳೆಯರಾದ ತರುಣ್ ಸುಧೀರ್, ಕಿಶೋರ್ ಸುಧೀರ್, ಪ್ರೇಮ್ ಹಾಗೂ ಶರಣ್ ಕೂಡ ಭಾಗಿಯಾಗಿದ್ದರು. ಮೊದಲ ಎಪಿಸೋಡ್​ನಲ್ಲಿ ಸಾಕಷ್ಟು ಹಳೆಯ ನೆನಪುಗಳು ಹಾಗೂ ಹಿಂದಿನ ತುಂಟಾಟಗಳ ನೆನಪುಗಳನ್ನು ನೆನಪಿಸಿಕೊಂಡು ಖುಷಿಯಾದರು.

RELATED ARTICLES

Related Articles

TRENDING ARTICLES