Friday, November 22, 2024

ಕಾಂಗ್ರೆಸ್​ನ 30 ಜನ ಮುಖಂಡರ ಮೇಲೆ FIR ದಾಖಲು

ಬೆಂಗಳೂರು: ನಮಗೆ ಸಿಕ್ಕ ವರದಿ ಪ್ರಕಾರ 30 ಜನ ಲೀಡರ್ ಮೇಲೆ FIR ದಾಖಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮಾಹಿತಿ ನೀಡಿದ್ದಾರೆ.

ಮೇಕದಾಟು ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಪಾದಯಾತ್ರೆ ಇಂದು ಕೂಡ ನಡೆಯುತ್ತಿದೆ ಈ ಬಗ್ಗೆ ರಾಮನಗರ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಅದಕ್ಕೆ ಕಾರಣಕರ್ತರು ಯಾರು ಅವರ ವಿರುದ್ಧ ಮೊದಲು ನಂತರ ಉಳಿದವರ ಮೇಲೆ ಕ್ರಮ ಎಂದರು.

ಇನ್ನು ದಂಡ ಹಾಕುವ ಪ್ರಕ್ರಿಯೆಯಲ್ಲಿ ಸರ್ಕಾರದ ವಿಳಂಭ ಇಲ್ಲ. ಇವತ್ತು ಅವರು ಮಾಡಬೇಕಾದ್ದು ಪಾದಯಾತ್ರೆ ಅಲ್ಲ. ನೀರಿನಲ್ಲಿ ಕಿವಿ ಹಿಡಿದು ಕೂತು, ಜನರಲ್ಲಿ ದಮ್ಮಯ್ಯ ತಪ್ಪಾಯ್ತು ಅಂತ ಕ್ಷಮೆ ಕೇಳಬೇಕು. ಕೊರೊನಾ ಸಂದರ್ಭದಲ್ಲಿ ಇವರು ಈ ರೀತಿ ಮಾಡಬಾರದಿತ್ತು ಎಂದಿದ್ದಾರೆ.

ಶಿವಕುಮಾರ್ ಹೇಳಿದರು ನಮಗೆ ಅನುಮತಿ ಬೇಕಿಲ್ಲ ಅಂತ. ಅವರು ಹೀಗೆ ಮಾಡಬಾರದಿತ್ತು. ನಾವು ಅಸಹಾಯಕರಲ್ಲ, ನಿರ್ಲಕ್ಷ್ಯ ಕೂಡ ಮಾಡಿಲ್ಲ. ಒಂದು ರಾಜಕೀಯ ಪಕ್ಷ ಮಾಡ್ತೀವಿ ಅಂತ ಹೊರಟ್ರು. ಪೊಲೀಸ್ ಫೋರ್ಸ್ ಇದೆ, ಆಗೋದೇ ಇಲ್ಲ ಅಂತಲ್ಲ. ಅದು ಮತ್ತೊಂದು ಘಟನೆಗೆ ಕಾರಣ ಆಗಬಾರದು. ಜನರು ಕೂಡ ಕರೆ ಮಾಡುತ್ತಿದ್ದಾರೆ, ಹೀಗೆ ಮಾಡಬಾರದು ಅಂತ ಎಂದು ಅವರು ಮಾತನಾಡಿದರು.

ಬೆಂಗಳೂರು ಬರುವಾಗ ತಡೆಯೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಈಗಾಗಲೇ ಹತ್ತು ಸಾವಿರ ಕೇಸ್ ಬರ್ತಿದೆ. ಶ್ರಮಿಕ ವರ್ಗ ಬಹಳಷ್ಟು ಕಷ್ಟಪಡುತ್ತಿದ್ದಾರೆ. ಅವರನ್ನ ತಡೆಯೋ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುದ್ದಾರೆ. ಬರ್ತಿರೋದು ಫೇಕ್ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ, ಹೇಳಲಿ. ಸೋಂಕು ಮತ್ತೆ ಉಲ್ಬಣ ಆದ್ರೆ ಕಾಂಗ್ರೆಸ್ ಪಕ್ಷದವರೇ ಕಾರಣ. ಬೆಂಗಳೂರು ಒಳಗಿನಲ್ಲಿ ಏನು ಮಾಡಬೇಕು ಅನ್ನೋದು ನೋಡ್ತೀವಿ. ಶಿವಕುಮಾರ್ ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ. ಇವರ ಜೀವ ಮುಖ್ಯ, ಆರೋಗ್ಯ ಮುಖ್ಯ. ಟೆಸ್ಟ್ ಮಾಡಲು ಹೋದ್ರೆ, ಗದರಿಸಿ ಕಳಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಜ್ವರ ಬಂದಿದೆ. ಯಾವ ರೀತಿಯ ಜ್ವರ ಅಂತ ಗೊತ್ತಿಲ್ಲ. ಆರೋಗ್ಯವಾಗಿ ಇರಲಿ ಅನ್ನೋದೇ ನಮ್ಮ ಉದ್ದೇಶ ಎಂದು ಸಚಿವ ಅರಗ ಜ್ಞಾನೇಂದ್ರ ಅವರು ಹೇಳಿದರು.

RELATED ARTICLES

Related Articles

TRENDING ARTICLES