Wednesday, January 22, 2025

ಗಡ್ಡದ ರಹಸ್ಯ ಬಿಚ್ಚಿಟ್ಟ ಡಿ ಕೆ ಶಿವಕುಮಾರ್

ರಾಮನಗರ : ತವರೂರ ಜನರ ಮುಂದೆ ತಮ್ಮ ಗಡ್ಡದ ಬಗ್ಗೆ ರಹಸ್ಯ ಬಿಚ್ಚಿಟ್ಟಿದ್ದಾರೆ. ನಾನು ತಿಹಾರ್ ಜೈಲಿನಲ್ಲಿ ಇದ್ದಾಗ ಈ ಗಡ್ಡ ಬಿಟ್ಟಿದೆ,ಮುಂದೆ ನಾಡಿನ ದೊರೆಯಾದ ಬಳಿಕ ಗಡ್ಡ ತೆಗೆಯುವೆ, ಪರೋಕ್ಷವಾಗಿ ಸಿಎಂ ಆಗುವ ಬಯಕೆಯನ್ನು ಡಿಕೆಶಿ ವ್ಯಕ್ತಪಡಿಸಿದ್ದಾರೆ.

ಸಿಎಂ ಆದ ಬಳಿಕ ಗಡ್ಡ ತೆಗೆಯುವ ಶಪಥವನ್ನು ಮಾಡಿರುವ ಡಿಕೆಶಿ, ಕ್ಷೇತ್ರದ ಜನರ ಮುಂದೆ ಮನದ ಮಾತು ಬಿಚ್ಚಿಟ್ಟಿದ್ದಾರೆ. ಇಷ್ಟು ದಿನ ಗಡ್ಡದ ಬಗ್ಗೆ ಎಲ್ಲಿಯೂ ಮಾತನಾಡದ ಡಿಕೆಶಿ, ಇದುವೇ ನನ್ನ ಕೊನೆಯ ಪ್ರಚಾರ ಮತ್ತೊಮ್ಮೆ ಗೆಲ್ಲಿಸಿ ಕಳುಹಿಸಿ ಯಾಕೆಂದರೆ ಮತ್ತೆ ಚುನಾವಣೆ ಪ್ರಚಾರ ಮಾಡಲು ಬರುವುದಿಲ್ಲ. ರಾಜ್ಯ ಸುತ್ತುವ ಕೆಲಸ ಇದೆ ಹೀಗಾಗಿ ಮತ್ತೆ ಆಶೀರ್ವಾದ ಮಾಡುವಂತೆ ಡಿಕೆಶಿ ಭಾವನಾತ್ಮಕ ಸಂದೇಶವನ್ನು ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES