Wednesday, January 22, 2025

ಯಾರಪ್ಪ ಅದು ಗಂಡಸಾ ಅಂತ ಸವಾಲ್ ಹಾಕಿದ್ದು – ಅಶ್ವತ್ ನಾರಾಯಣ್​ಗೆ ಡಿ.ಕೆ ಶಿವಕುಮಾರ್ ಟಾಂಗ್

ರಾಮನಗರ : ಮೊದಲ ದಿನದ ಪಾದಯಾತ್ರೆ ಚೆನ್ನಾಗಿ ನಡೆದಿದೆ. ಇವತ್ತು ಕೂಡ ಪಾದಯಾತ್ರೆಯು ಸುಗಮವಾಗಿ ನಡೆಯುತ್ತದೆ. ಯಾರಪ್ಪ ಗಂಡು ಅಂತ ಸವಾಲು ಹಾಕಿದರಲ್ಲಾ ಈಗ ಬಂದು ಅವರಿಗೆ ಮಾತನಾಡೋಕೆ ಹೇಳಿ, ಹಾಗೇ ರಾಮನಗರಕ್ಕೆ ಬಂದು ಯಾರನ್ನ ಬೇಕಾದರೂ ಕೇಳಿಕೊಳ್ಳೋಕೆ ಹೇಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸಚಿವ ಡಾ.ಅಶ್ವತ್ಥ್​ ನಾರಾಯಣ್​ ವಿರುದ್ಧ ಗುಡುಗಿದರು.

ಇನ್ನು ಮೇಕೆದಾಟು ಪಾದಯಾತ್ರೆ ಹಿನ್ನೆಲೆಯಲ್ಲಿ ಸರ್ಕಾರ ಜಾರಿ ಮಾಡಿರುವ ಕೋವಿಡ್ ನಿಯಮಾವಳಿ ಹಾಗೂ ಕರ್ಪ್ಯೂ ಉಲ್ಲಂಘನೆ ಮಾಡಿದ್ದಾರೆ ಎಂಬ ಕಾರಣಕ್ಕೇ ಕಾಂಗ್ರೆಸ್ ನಾಯಕರ 30 ಜನರ ವಿರುದ್ಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ರಾಮನಗರ ಜಿಲ್ಲಾ ಎಸ್.ಪಿ ಎಸ್.ಗಿರೀಶ್ ಅವರು ಮಾಹಿತಿ ನೀಡಿದರು.

RELATED ARTICLES

Related Articles

TRENDING ARTICLES