Sunday, December 22, 2024

ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಕೇಸ್: ಸಿಎಂ

ಬೆಂಗಳೂರು : ಕಾನೂನು ಉಲ್ಲಂಘನೆಯ ಮಾಡುವವರ ಮೇಲೆ ಕೇಸ್ ದಾಖಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಸ್ವಾಬ್ ಟೆಸ್ಟ್ ವೇಳೆ ಅಧಿಕಾರಿಗಳ ವಿರುದ್ಧ ಡಿಕೆಶಿ ಗರಂ ಆದ ವಿಚಾರದ ಬಗ್ಗೆ ಮಾತನಾಡಿದ ಸಿಎಂ ನಾವು ಅವರ ಆರೋಗ್ಯದ ಬಗ್ಗೆ ಚಿಂತನೆ ಮಾಡ್ತಿದ್ದೇವೆ,ಅವರು ಸುಧೀರ್ಘವಾಗಿ ನಡೆದ ಸಂದರ್ಭದಲ್ಲಿ ಅವರ ಆರೋಗ್ಯ ತಪಾಸಣೆ ಮಾಡಬೇಕು. ಅವರೊಬ್ಬರಿಗೆಲ್ಲ ಎಲ್ಲರಿಗೂ ಆರೋಗ್ಯ ತಾಪಸಣೆ ಮಾಡಬೇಕು,ಇದು ಆರೋಗ್ಯ ಇಲಾಖೆ ಕರ್ತವ್ಯ ಮತ್ತು ಔದಾರ್ಯ ಇದನ್ನ ಅರ್ಥ ಮಾಡಿಕೊಳ್ಳದೇ ಬಾಯಿಗೆ ಬಂದ ಹಾಗೇ ಮಾತನಾಡಿದ್ದಾರೆ,ಯಾರು ಯಾರು ಕಾನೂನು ಉಲ್ಲಂಘನೆ ಮಾಡುತ್ತಾರೆ ಅವರ ಮೇಲೆ ಕೇಸ್ ದಾಖಲಾಗುತ್ತದೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಸ್ ರಿಜಿಸ್ಟರ್ ನಲ್ಲಿ ಏನ್ ಆಗಬೇಕು ಅದು ಆಗುತ್ತೆ ಇದರಲ್ಲಿ ಯಾವುದೇ ಭೇದಭಾವವಿಲ್ಲ.ಎಷ್ಟೇ ದೊಡ್ಡ ನಾಯಕನಿರಲಿ ಅಥವಾ ಸಾಮಾನ್ಯ ನಾಯಕನೇ ಇರಲಿ ಏನೆಲ್ಲಾ ಆಗಬೇಕು ಅದೆಲ್ಲಾ ಆಗುತ್ತದೆ, ಎಂದು ಹೇಳಿದರು.

RELATED ARTICLES

Related Articles

TRENDING ARTICLES