Monday, December 23, 2024

ಕೊರೋನಾ ಚಕ್ರವ್ಯೂಹದಲ್ಲಿ ಸಿಲುಕಿದ ಬೆಂಗಳೂರು

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಲೇ ಇದ್ದು ಈಗಾಗಲೇ 10 ಸಾವಿರ ಜನರಿಗೆ ಕೊರೋನಾ ಕೇಸ್ ದಾಖಲಾಗಿದೆ.

ನಗರದ ಗಲ್ಲಿ ಗಲ್ಲಿಯಲ್ಲೂ ಕೊರೋನಾ ಮಹಾಸ್ಫೋಟವಾಗಿದ್ದು, 10 ವಾರ್ಡ್​ಗಳಲ್ಲಿ ಕೊರೋನಾ ಸೋಂಕು ಜಾಸ್ತಿಯಾಗುತ್ತಲೇ ಇದೆ. ಜನವರಿ 19ಕ್ಕೆ ಸೆಮಿ ಲಾಕ್​ಡೌನ್ ಮುಗಿಯುತ್ತೋ ಅಥವಾ ಇಲ್ಲವೊ ಎಂಬ ಅನುಮಾನ ಜನರಲ್ಲಿ ಕಾಡುತ್ತಿದೆ. ಹೀಗಾಗಿ ಮತ್ತೆ ಟಫ್ ರೂಲ್ಸ್ ಈಗಾಗಲೆ ಜಾಸ್ತಿಯಾಗಿದ್ದು , 50-50 ರೂಲ್ಸ್, ನೈಟ್ ಕರ್ಫ್ಯೂ, ವೀಕೆಂಡ್​ ಕರ್ಫ್ಯೂ ವಿಸ್ತರಣೆಗೊಂಡಿದೆ. ರಾಜ್ಯದಲ್ಲಿ ಮತ್ತಷ್ಟು ಟಫ್ ರೂಲ್ಸ್ ಜಾರಿಯಾಗುತ್ತಿದೆ. ಸೆಮಿ ಲಾಕ್​ಡೌನ್ ಬದಲಾಗಿ ಲಾಕ್​ಡೌನ್ ಅಸ್ತ್ರ ಪ್ರಯೋಗವಾಗುತ್ತಾ, ಪಾಸಿಟಿವಿಟಿ ರೇಟ್ ಶೇ.5ರಷ್ಟು ಹೆಚ್ಚಾದ್ರೆ ಲಾಕ್​ಡೌನ್ ಅಗತ್ಯ.

ಈಗಾಗಲೇ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.6.33ಕ್ಕೆ ಏರಿಕೆ ಕಂಡುಬಂದಿದೆ. ಬೆಂಗಳೂರಿನ ಪಾಸಿಟಿವಿಟಿ ರೇಟ್ ಶೇ.10ಕ್ಕೆ ಜಿಗಿದಿದೆ. ಹೀಗಾಗಿ ಲಾಕ್​ಡೌನ್ ಅಸ್ತ್ರ ಪ್ರಯೋಗ ಮಾಡಿದರೆ ತಜ್ಜರ ಶಿಫಾರಸುಗಳನ್ನ ಚಾಚು ತಪ್ಪದೆ ಸರ್ಕಾರ ಪಾಲನೆ ಮಾಡುತ್ತಾ ಎಂದು ಸಾಕಷ್ಟು ಕುತೂಹಲ ಕೆರಳಿಸಿದ ರಾಜ್ಯ ಸರ್ಕಾರ ನಿರ್ಧಾರ ಹೀಗಾಗಿ ಎರಡು ಮೂರು ದಿನಗಳಲ್ಲಿ ರಾಜ್ಯದ ಲಾಕ್ ಭವಿಷ್ಯ ನಿರ್ಧಾರವಾಗಲಿದೆ.

RELATED ARTICLES

Related Articles

TRENDING ARTICLES