Wednesday, January 22, 2025

‘ಸೋಂಕು ಉಲ್ಬಣಕ್ಕೆ ಕಾಂಗ್ರೆಸ್​​ ಕಾರಣ’-ಗೃಹಮಂತ್ರಿ

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ಪಾದಯಾತ್ರೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಡಿಕೆ ಶಿವಕುಮಾರ್ ನಮಗೆ ಅನುಮತಿ ಬೇಕಿಲ್ಲ ಅಂತ ಹೇಳಿದ್ದಾರೆ. ಅವರು ಹೀಗೆ ಮಾತಾಡಬಾರದಿತ್ತು. ನಾವು ಅಸಹಾಯಕರಲ್ಲ, ನಿರ್ಲಕ್ಷ್ಯ ಕೂಡ ಮಾಡಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಒಂದು ರಾಜಕೀಯ ಪಕ್ಷ ಮಾಡಬೇಕಾದ್ದು ಮಾಡ್ತೀವಿ ಅಂತ ಹೊರಟ್ರು. ಪೊಲೀಸ್ ಫೋರ್ಸ್ ಇದೆ, ಆಗೋದೇ ಇಲ್ಲ ಅಂತಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿಗೆ ಬರುವಾಗ ತಡೆಯೋ ವಿಚಾರವಾಗಿ ಮಾತನಾಡಿದ ಆರಗ ಜ್ಷಾನೇಂದ್ರ ಬೆಂಗಳೂರಿನಲ್ಲಿ ಈಗಾಗಲೇ ಹತ್ತು ಸಾವಿರ ಕೇಸ್ ಬರ್ತಿವೆ. ಶ್ರಮಿಕ ವರ್ಗ ಬಹಳಷ್ಟು ಕಷ್ಟ ಪಡ್ತಿದ್ದಾರೆ. ಅವರನ್ನ ತಡೆಯೋ ನಿಟ್ಟಿನಲ್ಲಿ ಕ್ರಮ ಕೈಗೊಳ್ತಿದ್ದಾರೆ. ಸೋಂಕು ಮತ್ತೆ ಉಲ್ಬಣವಾದ್ರೆ ಕಾಂಗ್ರೆಸ್ ಪಕ್ಷದವರೇ ಕಾರಣ ಎಂದಿದ್ದಾರೆ.

RELATED ARTICLES

Related Articles

TRENDING ARTICLES