Sunday, November 3, 2024

ಇಂದಿನಿಂದ ಬೂಸ್ಟರ್ ಡೋಸ್​​ ಅಭಿಯಾನ : ಸಿ ಎಂ ಬೊಮ್ಮಾಯಿ ಚಾಲನೆ

ಕರ್ನಾಟಕ : ದೇಶಾದ್ಯಂತ ಈಗಾಗಲೇ 15-18 ವರ್ಷದ ಮಕ್ಕಳಿಗೆ ಕೋವಿಡ್​​ ಲಸಿಕೆ ನೀಡಲಾಗುತ್ತಿದೆ. ಇದೀಗ ಇಂದಿನಿಂದ ಪ್ರಿಕಾಷನ್ ಡೋಸ್​ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಆರೋಗ್ಯ ಸಿಬ್ಬಂದಿ, ಕೋವಿಡ್ ನಿಯಂತ್ರಣದ ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಇಂದಿನಿಂದ ಪ್ರಿಕಾಷನ್​ ಡೋಸ್​ ನೀಡಲು ಪ್ರಾರಂಭ ಮಾಡಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಇಂದು ಶಿವಾಜಿನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿನಲ್ಲಿ ಈ ಲಸಿಕಾಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರವು ಮುಂದಾಲೋಚನೆಯಿಂದ ಈ ಬೂಸ್ಟರ್ ಡೋಸ್ ಲಸಿಕೆಯನ್ನು ನೀಡಲು ಪ್ರಾರಂಭಿಸಿದೆ. ಈಗಾಗಲೇ ಎರಡು ಡೋಸ್ ಪಡೆದಿರುವವರಿಗೆ ಮುನ್ನೆಚ್ಚರಿಕಾ ಲಸಿಕಾ ಡೋಸ್​ನ್ನು ನೀಡಲು ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ತಯಾರಿ ನಡೆಸಲಾಗಿದೆ. ಅಲ್ಲದೇ ಈ ಲಸಿಕೆಯನ್ನು ಸರ್ಕಾರವು ಹಂತಹಂತವಾಗಿ ನೀಡಲು ಮುಂದಾಗಿದೆ.

ಮೊದಲ‌ ಹಂತದಲ್ಲಿ ಲಸಿಕೆ ಪಡೆಯಲು ಯಾರೆಲ್ಲಾ ಅರ್ಹರು..!

  • ಆರೋಗ್ಯ ಕಾರ್ಯಕರ್ತರು
  • ಮುಂಚೂಣಿ ಕಾರ್ಯಕರ್ತರು
  • 60 ವರ್ಷ ಮೇಲ್ಪಟ್ಟ ಕೋಮಾರ್ಬಿಡಿಟೀಸ್ ಸಮಸ್ಯೆ ಇರುವವರಿಗೆ

ಬೂಸ್ಟರ್ ಡೋಸ್ ಪಡೆಯುವ ವಿಧಾನ :

  • ಕೋವಿನ್ ಪೋರ್ಟಲ್ ನಲ್ಲಿ ನೊಂದಾಯಿಸಿದಂತೆ ಎರಡು ಡೋಸ್ ಪಡೆದಿರಬೇಕು
  • ಎರಡನೇ ಡೋಸ್ ಪಡೆದು 9 ತಿಂಗಳು (39 ವಾರಗಳಾಗಿರಬೇಕು)
  •  ಎರಡು ಡೋಸ್ ಪಡೆದಿರುವ ಬಗ್ಗೆ ಮಾಹಿತಿ ಒದಗಿಸಬೇಕು

ಬೂಸ್ಟರ್ ಡೋಸ್​​ಗೆ ಯಾವ ಲಸಿಕೆ‌ ನೀಡಲಾಗುತ್ತದೆ :

  • ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದವರು ಮೂರನೇ ಡೋಸ್ ಕೋವಿಶೀಲ್ಡ್ ಅನ್ನೇ ಪಡೆಯಬೇಕು
  • ಕೋವ್ಯಾಕ್ಸಿನ್ ಪಡೆದವರು ಮೂರನೇ ಡೋಸ್​​ಗೆ ಕೋವ್ಯಾಕ್ಸಿನ್ ಅನ್ನೇ ಪಡೆಯಬೇಕು.

ಎಲ್ಲೆಲ್ಲಿ ಸಿಗಲಿದೆ ಬೂಸ್ಟರ್ ಡೋಸ್ :

  • ಎಲ್ಲಾ ಸರ್ಕಾರಿ ಲಸಿಕಾಕರಣ ಕೇಂದ್ರಗಳಲ್ಲಿ ಲಭ್ಯ
  • ಸರ್ಕಾರಿ ಆಸ್ಪತ್ರೆಗಳು, ಖಾಸಗೀ ಆಸ್ಪತ್ರೆಗಳಲ್ಲೂ ಲಭ್ಯ
  • ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸಿಗಲಿದೆ

RELATED ARTICLES

Related Articles

TRENDING ARTICLES