ಬೆಂಗಳೂರು : ಹನಿಟ್ರ್ಯಾಪ್.. ಲಲನೆಯ ಜೊತೆ ಚಕ್ಕಂದ ಆಡೊ ವಿಡಿಯೋ ಸಿಕ್ಕಿದ್ರೆ ಸಾಕು ವಿವಾದ ಸೃಷ್ಟಿಯಾಗಿ ಬಿಡುತ್ತದೆ. ಅಸಲಿ ಯಾವುದು ನಕಲಿ ಯಾವುದು ಅಂತ ಗೊತ್ತಾಗೋದೇ ಇಲ್ಲ. ನಾನೇನು ಮಾಡಿಲ್ಲ, ನನ್ನದೇನು ತಪ್ಪಿಲ್ಲ ಅಂದ್ರೂ ತಂತ್ರಜ್ಞಾನ ಬಳಕೆ ಮಾಡಿ ಭೀತಿ ಹುಟ್ಟಿಸೋ ಕರಾಳ ದಂಧೆಗಳು ಎಗ್ಗಿಲ್ಲದೆ ಸಾಗಿದೆ. ಇದೀಗ ಅಂತಹದ್ದೊಂದು ವಿವಾದ ಹುಟ್ಟುಹಾಕಿದೆ ಸಚಿವರ ಮಗನಿಗೆ ಬ್ಲ್ಯಾಕ್‌ಮೇಲ್ ಮ್ಯಾಟರ್ ಹಾಗಾದ್ರೆ.. ಏನಿದು ಕಹಾನಿ..?
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪುತ್ರ ನಿಶಾಂತ್ ಸೋಮಶೇಖರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತನಗೆ ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆಂದು ದೂರು ನೀಡಿದ್ದಾರೆ ನಿಶಾಂತ್. ಪೊಲೀಸರಿಗೆ ಬೇಕಾದ ನಂಬರ್ಸ್‌ಗಳು , ಬ್ಲ್ಯಾಕ್‌ಮೇಲ್‌ಗೆ ಬಳಸುತ್ತಿದ್ದ ವಿಡಿಯೋವನ್ನು ಸೈಬರ್‌ಸೆಲ್‌ಗೆ ರವಾನಿಸಿದ್ದಾರೆ. ಈ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ತಿಂಗಳು ನಿಶಾಂತ್ ಫೋನ್‌ಗೆ ಅಪರಿಚಿತ ನಂಬರ್‌ನಿಂದ ಮೆಸೇಜ್ ಬಂದಿತ್ತಂತೆ. ನಂತರ ನಿಶಾಂತ್ ಮತ್ತು ಹುಡುಗಿಯೊಬ್ಬಳು ಇರುವಂತಹ ವಿಡಿಯೋಗಳು ಸೆಂಡ್ ಮಾಡಿ ತಾವು ಕೇಳಿದಷ್ಟು ಹಣ ನೀಡದಿದ್ದಲ್ಲಿ ಮಾಧ್ಯಮಗಳಿಗೆ ಮತ್ತು ಸಾಮಾಜಿಕ ಜಾಲತಾಣಗಳಿಗೆ ಹರಿ ಬಿಡೋದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಮೊದ ಮೊದಲು ಸುಮ್ಮನಾಗಿದ್ದ ನಿಶಾಂತ್ ,ಬರಬರುತ್ತಾ ಅಪರಿಚಿತರ ಕಾಟ ಹೆಚ್ಚಾಗುತ್ತಲೇ ಹೋಗಿದೆ. ಕೊನೆಗೆ ಸೈಬರ್ ಸೆಲ್ ನಲ್ಲೂ ದೂರು ದಾಖಲಿಸಿ ಆರೋಪಿಗಳ ಬಂಧನಕ್ಕೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊದಲು ಬಂದಂತಹ ವಾಟ್ಸಪ್ ಮೆಸೇಜ್ ನಂಬರನ್ನ ಟ್ರೇಸ್ ಮಾಡಿದ್ದಾರೆ. ಯುಕೆ ನಂಬರ್ ಬಳಸಿ ಭಾರತದಲ್ಲಿ ಆಪರೇಟ್ ಮಾಡಿರೋದು ಬೆಳಕಿಗೆ ಬಂದಿದೆ. ಅದರ ಕಾಲ್ ರೆಕಾರ್ಡ್ ತೆಗದಾಗ ಮೊದಲು ಆರೋಪಿಯೊಬ್ಬ ತಗ್ಲಾಕಿಕೊಂಡಿದ್ದಾನೆ..ಈತನ ಜೊತೆಗೆ ಎಂಎಲ್ ಎ ಪುತ್ರಿಯೂ ಶಾಮೀಲಾಗಿರೋ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಇನ್ನು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ 5 ದಿನಗಳ ಕಾಲ ಕಷ್ಟಡಿಗೆ ತೆಗೆದುಕೊಂಡಿರುವ ಪೊಲೀಸರು , ಬ್ಲ್ಯಾಕ್‌ಮೇಲ್ ದಂಧೆಯಲ್ಲಿ ಭಾಗಿಯಾದ ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ಸೈಬರ್ ಸೆಲ್ ಮತ್ತು ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.