Thursday, December 19, 2024

ಮತ್ತೊಂದು ಬಾಂಬ್​ ಸಿಡಿಸಿದ ಬಸನಗೌಡ ಯತ್ನಾಳ್​

ಧಾರವಾಡ : ಸಂಕ್ರಾಂತಿ ಬಳಿಕ ರಾಜ್ಯ ರಾಜಕೀಯದಲ್ಲಿ ಕ್ರಾಂತಿ ಆಗುತ್ತಾ , ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ನಿಶ್ಚಿತನಾ ಎಂದು ಬಸನಗೌಡ ಯತ್ನಾಳ್​ ಹೇಳಿದ್ದಾರೆ.

ಸಂಕ್ರಮಣ ಬಳಿಕ ಬಿಜೆಪಿಯಲ್ಲಿ ಬದಲಾವಣೆ ಗಾಳಿ ಬೀಸುತ್ತಾ, ಸಿಎಂ ಆಗಲು ಅರ್ಹತೆ, ಯೋಗ್ಯತೆ ಇರುವ ವ್ಯಕ್ತಿ ನಾನು ಎಂದ ಯತ್ನಾಳ್​, ಪಂಚರಾಜ್ಯಗಳ ಚುನಾವಣೆಯ ದಿನಾಂಕ ಘೋಷಣೆ ಆಗಿದೆ, ಸ್ವಲ್ಪ ತಡವಾಗುತ್ತದೆ. ಆದರೆ ಶೀಘ್ರದಲ್ಲೇ ಒಳ್ಳೆಯ ದಿನಗಳು ಬರುತ್ತೆ ಎಂದರು.

2023ರ ಚುನಾವಣೆಯಲ್ಲಿ ಹೊಸ ಶಕ್ತಿಯೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಳೆದ ಒಂದು ವರ್ಷದಿಂದ ಹೇಳಿದ ಹಾಗೆ ಎಲ್ಲವೂ ಆಗಿದೆ, ಎಲ್ಲವೂ ಕಾಕತಾಳಿಯ, ಆದರೆ ನಾನು ಜ್ಯೋತಿಷ್ಯನಲ್ಲ ಎಂದು ಧಾರವಾಡದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES