Monday, December 23, 2024

ಗೂಡ್ಸ್‌ ಆಟೋದಲ್ಲಿದ್ದ 2 ಕ್ವಿಂಟಾಲ್ ಗಾಂಜಾ ವಶಕ್ಕೆ

ಬೆಂಗಳೂರು : ಸಿಲಿಕಾನ್ ಸಿಟಿ‌ಯ ರೌಡಿಗಳಿಗೆ ಗಾಂಜಾದ ನಂಟು ಅಂಟಿರಲಿಲ್ಲ ಆದರೆ ಈಗ ಡ್ರಗ್ ಜಾಲದಲ್ಲಿ ರೌಡಿ ಪಟಾಲಂನ ನಂಟು ಗೊತ್ತಾಗಿದೆ. ಫೀಲ್ಡಿಗಿಳಿದು ಲಾಂಗ್ ಮಚ್ಚು ಹಿಡಿದು ಅಬ್ಬರಿಸುತ್ತಿದ್ದವರು ಗಾಂಜಾದ ಘಾಟು ಸವೆದು ಬಿಂದಾಸ್ ಬಿಸಿನೆಸ್‌ಗೆ ಇಳಿದಿದ್ದಾರೆ.

ರಾಜಧಾನಿಯಲ್ಲಿ ಗಾಂಜಾಗೂ ಸಿಟಿಗೂ ಅವಿನಾಭಾವ ನಂಟಿದೆ. ಸಿದ್ಧಾಪುರ, ಜಯನಗರ, ಕೆಜಿ ನಗರದ ಡ್ರಗ್ ಜಾಲವನ್ನು ಬೆನ್ನಟ್ಟಿ ಹೊರಟ ದಕ್ಷಿಣ ವಿಭಾಗ ಪೊಲೀಸ್ರಿಗೆ ರೌಡಿಗಳಿಗೂ ಗಾಂಜಾದ ಸಪ್ಲೈ ಆ್ಯಂಡ್ ಡೆಲಿವರಿಗೂ ನಂಟು ಇರೋದು ಗೊತ್ತಾಗಿದೆ. ಆ ರೌಡಿಗಳ ಹೆಸ್ರನ್ನು ಗಾಂಜಾ ಸಾಗಾಟ ಮಾಡುತ್ತಿದ್ದವರೇ ಬಾಯ್ಬಿಟ್ಟಿದ್ದಾರೆ. ಅವರೇ ಕುಳ್ಳ ರಿಜ್ವಾನ್, ಉಲ್ಲಾಳ್ ಕಾರ್ತಿ, ಹಬೀಬ್ ಮತ್ತು ಸ್ಟಾರ್ ನವೀನ್.

ಸಿದ್ದಾಪುರ ಪೊಲೀಸ್ರು ಸಿಂಥೆಟಿಕ್ ಡ್ರಗ್ ಜಾಲದ ಬೆನ್ನು ಬಿದ್ದಾಗ ಆರೋಪಿ ಕೋಸ್ಟ್ ನ ನಾಗರೀಕ 100 ಗ್ರಾಂ ಪ್ಯೂರ್ ಕೊಕೈನ್ ಜೊತೆ ಸಿಕ್ಕಿಬಿದ್ದಿದ್ದ. ಆ ಬಳಿಕ ಡ್ರಗ್ ಜಾಲದ ಬೆನ್ನತ್ತಿದ್ದಾಗ ಜಯನಗರದಲ್ಲಿ ಸನಾವುಲ್ಲಾ ಎಂಬಾತ ಕೂಡ ಗಾಂಜಾ ಸಹಿತ ಸಿಕ್ಕಿಬಿದ್ದಿದ್ದ.ಇವನು‌ ಕೊಟ್ಟ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆಗೆ ಇಳಿದಾಗ ಕೆಜಿ ನಗರದ ಜಿಂಕೆ ಪಾರ್ಕ್ ಬಳಿ ಗೂಡ್ಸ್ ಆಟೋವೊಂದರಲ್ಲಿ ಗಾಂಜಾ ಸಾಗಿಸುತ್ತಿರುವ ಮಾಹಿತಿ ಲಭ್ಯವಾಗಿ ಆಟೋ ಸೀಜ್ ಮಾಡಿ 200 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.. ಇನ್ನು ಗಾಂಜಾ ಸಾಗಾಟ ಮಾಡುತ್ತಿದ್ದ ಪೋತಯ್ಯ, ಪಲ್ಲೇ. ವಂಥಾಲಾ ರಮೇಶ್, ಕೊಂಡಜ್ಜಿ ಪ್ರಸಾದ್‌ ಎಂಬುವರನ್ನು ಬಂಧಿಸಿದ್ದಾರೆ.

ಇನ್ನು ಗಾಂಜಾವನ್ನು ಆಂಧ್ರಮೂಲದಿಂದ ತರಲಾಗುತ್ತಿತ್ತು. ಬಳಿಕ ಆ ಗಾಂಜಾವನ್ನು ಸಿಲಿಕಾನ್ ಸಿಟಿಯ ಬೇರೆ ಬೇರೆ ಕಡೆ ರವಾನಿಸಲಾಗುತ್ತಿತ್ತು. ಗಾಂಜಾ ಸಾಗಾಟಕ್ಕೆ ಮತ್ತು ಮಾರಾಟಕ್ಕೆ ರೌಡಿಪಟಾಲಂ ಕಾವಲಾಗಿರುತ್ತಿದ್ದರು. ಗಾಂಜಾ ಸಾಗಾಟ ವೇಳೆ ಸಿಕ್ಕಿಬಿದ್ರೆ ಜೈಲಿನಿಂದ ಬಿಡಿಸುವ ಭರವಸೆಯನ್ನು ನೀಡುತ್ತಿದ್ರು.. ಆ ಮೂಲಕ ರೌಡಿಗಳು ಡ್ರಗ್ಸ್ ಸಪ್ಲೈ ಮಾಡಿ ತಮ್ಮ ಪಟಾಲಂನನ್ನು ಹಿಡಿದಿಟ್ಟುಕೊಳ್ಳುವ ಮತ್ತು ಹಣವನ್ನು ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.

ಸದ್ಯ ದಕ್ಷಿಣ ವಿಭಾಗ ಪೊಲೀಸ್ರಿಗೆ ಡ್ರಗ್ಸ್ ಜಾಲದ ಮೇಜರ್ ಲೀಡ್ ಸಿಕ್ಕಿದ್ದು ತನಿಖೆ ನಡೆಸುತ್ತಿದ್ದಾರೆ.. ಇನ್ನು ರೌಡಿಗಳು ಗಾಂಜಾ ಮತ್ತಿನಲ್ಲಿ ತೇಲುತ್ತಾ ಕ್ರೈಂ ಮಾಡೋದನ್ನು ತಡೆಯೋಕೂ ಮುನ್ನವೇ ಗಾಂಜಾದ ಮೂಲಬೇರು ಕಿತ್ತುವಹಾಕುವ ಜವಾಬ್ದಾರಿ ಪೊಲೀಸ್ರ ಮೇಲಿದೆ..

RELATED ARTICLES

Related Articles

TRENDING ARTICLES