Monday, December 23, 2024

5 ವರ್ಷಗಳ ನಂತರ ಭಾವನಾ ಮೆನನ್ ಲೈಂಗಿಕ ದೌರ್ಜನ್ಯ ಕುರಿತಂತೆ ಪೋಸ್ಟ್

ತಿರುವನಂತಪುರಂ: ಕೆರಳದ ಪ್ರಸಿದ್ದ ಮಲೆಯಾಳಂ ನಟಿ ಭಾವನಾ ಮೆನನ್ 5 ವರ್ಷಗಳ ನಂತರ ತಾವು ಅನುಭವಿಸಿದ ಯಾತನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ತಮ್ಮ ಇನ್ಸ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ಈ ಐದು ವರ್ಷಗಳ ನನ್ನ ಯಾತ್ರೆ ಅಷ್ಟು ಸುಲಲಿತವಾಗಿರಲಿಲ್ಲ. ನನ್ನನ್ನು ಅವಮಾನಿಸಲು ಹಲವು ಪ್ರಯತ್ನಗಳು ನಡೆದವು ಎಂದು ಭಾವನಾ ಮೆನನ್ ತಮ್ಮ ಮೇಲೆ 5 ವರ್ಷಗಳ ಹಿಂದೆ ನಡೆದಿದ್ದ ಲೈಂಗಿಕ ದೌರ್ಜನ್ಯದ ನಂತರದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.

2017ರಲ್ಲಿ ಭಾವನಾ ಮೆನನ್ ತಮ್ಮ ಕೊಚ್ಚಿಯ ಶೂಟಿಂಗ್ ಮುಗಿಸಿಕೊಂಡು ಹಿಂದಿರುಗುವಾಗ ಅವಳನ್ನು ಹಲವು ಅಪರಿಚಿತರು ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿದ್ದರು. ಇದರ ಹಿಂದೆ ಕೇರಳದ ಪ್ರಖ್ಯಾತ ನಟ ದಿಲೀಪ್ ಮತ್ತು ಇನ್ನು ಐವರು ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಆಗ ಈ ಪ್ರಕರಣ ಸದ್ದು ಮಾಡಿತ್ತು.

RELATED ARTICLES

Related Articles

TRENDING ARTICLES