Saturday, January 18, 2025

ಟೀಂ ಇಂಡಿಯಾಗೆ ಭರ್ಜರಿ ವೆಲ್​​ಕಮ್

ನ್ಯೂಲ್ಯಾಂಡ್ : ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಟೆಸ್ಟ್ ಸರಣಿಯ ಅಂತಿಮ ನಿರ್ಣಾಯಕ ಕದನ ಮಂಗಳವಾರದಿಂದ ಕೇಪ್​ಟೌನ್​ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಶುರುವಾಗಲಿದೆ.

ಸೆಂಚೂರಿಯನ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 113 ರನ್​ಗಳ ಜಯ ಸಾಧಿಸಿ ಐತಿಹಾಸಿಕ ಸಾಧನೆ ಮಾಡಿದರೆ, ಜೋಹಾನ್ಸ್​ ಬರ್ಗ್​​ನಲ್ಲಿ ನಡೆದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಸೌತ್ ಆಫ್ರಿಕಾ 7 ವಿಕೆಟ್​ಗಳ ಗೆಲುವು ಕಂಡಿತು. ಹೀಗಾಗಿ ಉಭಯ ತಂಡಗಳು ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದೆ. ಸದ್ಯ 3ನೇ ಟೆಸ್ಟ್​ ಪಂದ್ಯದ ಮೇಲೆ ಸರಣಿ ಗೆಲುವಿನ ಲೆಕ್ಕಾಚಾರ ನಿಂತಿದೆ.

ಅಂತಿಮ ನಿರ್ಣಾಯಕ ಕದನಕ್ಕಾಗಿ ವಿರಾಟ್ ಕೊಹ್ಲಿ ಪಡೆ ಜೋಹಾನ್ಸ್​ ಬರ್ಗ್​​ನಿಂದ ಕೇಪ್​ಟೌನ್​ಗೆ ಬಂದಿಳಿದಿದೆ. ಇಲ್ಲಿ ತಲುಪಿದ ತಕ್ಷಣ ಆಫ್ರಿಕನ್ನರು ಟೀಮ್ ಇಂಡಿಯಾಗೆ ಸರ್​ಪ್ರೈಸ್ ನೀಡಿದ್ದಾರೆ. ಹೌದು, ಕೇಪ್​ಟೌನ್​ಗೆ ಬಂದಿಳಿದ ಭಾರತಕ್ಕೆ ಊಹಿಸಲಾಗದ ರೀತಿಯಲ್ಲಿ ಅಭೂತಪೂರ್ವ ಸ್ವಾಗತ ಸಿಕ್ಕಿತು. ಆಫ್ರಿಕಾದವರು ತಮ್ಮದೇ ಶೈಲಿಯ ಸಂಗೀತ, ನೃತ್ಯದ ಮೂಲಕ ಭಾರತೀಯ ಆಟಗಾರರನ್ನು ವೆಲ್​ಕಮ್ ಮಾಡಿದರು. ಅಲ್ಲದೆ ಕೇಪ್​ಟೌನ್​ಗೆ ಸ್ವಾಗತ ಎಂದು ಬರೆದಿರುವ ಕೇಕ್ ಕೂಡ ತಯಾರು ಮಾಡಿದ್ದು ವಿಶೇಷವಾಗಿತ್ತು.

RELATED ARTICLES

Related Articles

TRENDING ARTICLES