Wednesday, January 22, 2025

ಪಡ್ಡೆ ಹುಡುಗರ ನಿದ್ದೆ ಕೆಡಿಸಿದ : ಊ ಅಂಟವಾ ಮಾವ.. ಊಊ ಅಂಟವಾ

ಟಾಲಿವುಡ್ : ಸದ್ಯ ಎಲ್ಲೆಲ್ಲೂ ಸಮಂತಾರದ್ದೇ ಹವಾ… ‘ಪುಷ್ಪ’ ಸಿನಿಮಾದಲ್ಲಿ ಅವರು ಹೆಜ್ಜೆ ಹಾಕಿರುವ ‘ಊ ಅಂಟವಾ ಮಾವ..ಊಊ ಅಂಟವಾ..’ ಹಾಡಿನ ಲಿರಿಕಲ್​ ವಿಡಿಯೋ ಸಖತ್​ ಹಿಟ್​ ಆಗಿ, 12 ಕೋಟಿಗೂ ಅಧಿಕ ಜನರು ವೀಕ್ಷಣೆ ಮಾಡಿರುವುದು ವಿಷೇಷ.

ಪುಷ್ಪ ಸಿನಿಮಾದ ಹವಾ ಹೆಚ್ಚಾಗಿತ್ತು ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ..ಈಗ ಈ ಹಾಡಿನ ವಿಡಿಯೋ ಸಾಂಗ್​ ರಿಲೀಸ್​ ಮಾಡಲಾಗಿದ್ದು, ಬಿಡುಗಡೆ ಆಗಿ ಕೇವಲ ಒಂದು ಗಂಟೆಗೆ 20 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ‘ಊ ಅಂಟವಾ ಮಾವ.. ಊಊ ಅಂಟವಾ..’ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್​ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ..ಇದೀಗ ಈ ಹಾಡಿನ ವಿಡಿಯೋ ಸಾಂಗ್ ರಿಲೀಸ್​​ ಆಗಿ ಸದ್ದು ಮಾಡುತ್ತಿದೆ. ಪಡ್ಡೆ ಹುಡುಗರಿಗೆ ನಶೆ ಏರಿಸುವಂತಿರುವ ಈ ವಿಡಿಯೋ ಸಾಂಗ್​​ನಲ್ಲಿ ಸಮಂತಾ ಅವರು ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES