Monday, December 23, 2024

ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಮೂಲಕ ಯುವತಿಯರನ್ನ ವಂಚಿಸುತ್ತಿದ್ದ ಆರೋಪಿ ಬಂಧನ

ಬೆಂಗಳೂರು : ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಮೂಲಕ ಯುವತಿಯರನ್ನ ವಂಚಿಸುತ್ತಿದ್ದ ಆರೊಪಿಯನ್ನು ಆಗ್ನೇಯ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಮುಖಾಂತರ ಯುವತಿಯರನ್ನ ಪರಿಚಯ ಮಾಡಿಕೊಳ್ತಿದ್ದ ಆರೋಪಿ ಈತನ ತಂದೆಗೆ ಮೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದರು, ತಂದೆ ಸಾವಿನ ಬಳಿಕ ಅನುಕಂಪದ ಆಧಾರ ಮೇಲೆ ಲೈನ್ ಮೆನ್ ಕೆಲಸ ಮಾಡಿಕೊಂಡಿದ್ದ. ಆದರೆ ಈತ 2013ರಲ್ಲಿ ಆರೋಪಿ ಸುನಿತಾ ಎಂಬಾಕೆಯನ್ನ ಕೊಲೆ ಮಾಡಿ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದ ಬಳಿಕ ಜಾಮೀನಿನ ಮುಖಾಂತರ ಹೊರ ಬಂದವನು ಜೀವನೋಪಾಯಕ್ಕಾಗಿ ಫೇಕ್ ಐಡಿ ಕ್ರಿಯೇಟ್ ಮಾಡಿ ಯುವತಿಯರನ್ನು ವಂಚಿಸುತ್ತಿದ್ದ.

ಫೇಕ್ ಅಕೌಂಟ್ ಮುಖಾಂತರ ಯುವತಿಯರನ್ನ ಪರಿಚಯ ಮಾಡಿಕೊಂಡು ಸರ್ಕಾರಿ ಕೆಲಸ ಕೊಡುಸ್ತಿನಿ ಎಂದು ಶಿವಮೊಗ್ಗ ,ಹಾವೇರಿ‌,‌ಮೈಸೂರ , ಸೇರಿದಂತೆ ನಾನಾ ಭಾಗದ ಒಟ್ಟು ಇಪ್ಪತ್ತಾರು ಯುವತಿಯರಿಗೆ ವಂಚಿಸಿದ್ದ ಬಳಿಕ ಯುವತಿಯನ್ನು ನಂಬಿಸಿ ಯುವತಿಯರಿಂದ ಒಟ್ಟು 21 ಲಕ್ಷ 30 ಸಾವಿರ ಹಣವನ್ನ ಪಡೆದುಕೊಂಡಿದ್ದ. ಸದ್ಯ ಆರೋಪಿಯನ್ನ ಬಂಧಿಸಿ ಐದು ಲಕ್ಷ ಬೆಲೆ ಬಾಳುವ ಕಾರು ,ಮತ್ತು ಬ್ಯಾಂಕ್ ಖಾತೆಯಲ್ಲಿದ್ದ ಒಂದೂವರೆ ಲಕ್ಷ ಹಣವನ್ನ ಪೊಲೀಸರು ಫ್ರೀಝ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES