Thursday, December 19, 2024

ನೊವಾಕ್‌ ಜೊಕೊವಿಕ್ ಅವರ ವೀಸಾ ತಿರಸ್ಕರಿಸಿದ : ಆಸ್ಟ್ರೇಲಿಯಾ

ಆಸ್ಟ್ರೇಲಿಯಾ : ಕೋವಿಡ್‌-19 ಹೆಚ್ಚಾಗ್ತಿರೋ ಕಾರಣ ಆಸ್ಟ್ರೇಲಿಯಾದಲ್ಲಿ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿವೆ. ಈ ಹಿನ್ನೆಲೆಯಲ್ಲಿ ನೊವಾಕ್‌ ಜೊಕೊವಿಕ್ ಸರಿಯಾದ ದಾಖಲಾತಿಗಳನ್ನು ಒದಗಿಸುವಲ್ಲಿ ವಿಫಲರಾದ ಕಾರಣ ಅವರ ವೀಸಾ ತಿರಸ್ಕರಿಸಲಾಗಿದೆ.

ಇದರ ವಿಚಾರಣೆಯನ್ನು ನ್ಯಾಯಾಲಯ ಸೋಮವಾರ ಕೈಗೆತ್ತಿಕೊಳ್ಳಲಿದೆ. ಹೀಗಿರುವಾಗ , ನೊವಾಕ್ ಜೊಕೊವಿಕ್ ಅವರಿಗೆ ತಿಂಗಳ ಹಿಂದೆ ಕೋವಿಡ್-19 ಸೋಂಕು ತಗುಲಿತ್ತು ಎಂದು ವಕೀಲರು ಸಲ್ಲಿಸಿರುವ ದಾಖಲೆಗಳಿಂದ ಸಾಬೀತಾಗಿದೆ. ಹೀಗಿದ್ದರೂ ಅವರು ಲಸಿಕೆ ಪಡೆದುಕೊಂಡಿಲ್ಲ ಎಂದು ವರದಿಯಾಗಿದೆ. ಕೋವಿಡ್‌ ನಿಯಮಗಳ ಪ್ರಕಾರ 3 ಆವೃತ್ತಿಗಳಲ್ಲಿ ಆಡುವ ಅವಕಾಶ ಕಳೆದುಕೊಳ್ಳಲಿದ್ದಾರೆ. ಇದರ ಬೆನ್ನಲೇ ಜೊಕೊವಿಕ್ ಆಸ್ಟ್ರೇಲಿಯಾ ಅಧಿಕಾರಿಗಳ ಕ್ರಮದ ವಿರುದ್ಧ ಸವಾಲು ಹಾಕಿದ್ದಾರೆ. ಟೂರ್ನಿಯ ಆಯೋಜಕರು ತಮಗೆ ಡಿಸೆಂಬರ್ 30ರಂದು ಹಸಿರು ನಿಶಾನೆ ನೀಡಿರುವ ಹಿನ್ನೆಲೆ ಇಲ್ಲಿಗೆ ಬಂದಿರುವುದಾಗಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES