Wednesday, January 22, 2025

ಜಾರ್ಖಂಡ್ ಸಿಎಂ ಕುಟುಂಬಕ್ಕೆ ಕೊವಿಡ್ ದೃಢ 

ಜಾರ್ಖಂಡ್ : ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಪತ್ನಿ, ಇಬ್ಬರು ಮಕ್ಕಳು & ಸೊಸೆ ಸೇರಿದಂತೆ ಒಟ್ಟು 15 ಜನರಿಗೆ ಕೊರೋನಾ ವೈರಸ್ ಅಟ್ಯಾಕ್ ಆಗಿದೆ.

ಸಿಎಂ ನಿವಾಸದಲ್ಲಿ ಇಲ್ಲಿಯವರೆಗೆ 62 ಜನರನ್ನು ಕೊವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ರಾಂಚಿಯ ಮುಖ್ಯ ವೈದ್ಯಾಧಿಕಾರಿ ವಿನೋದ್ ಕುಮಾರ್ ತಿಳಿಸಿದ್ದಾರೆ. ಅವರಲ್ಲಿ 24 ಮಂದಿಯ ವರದಿ ನಿನ್ನೆ ಸಂಜೆ ಲಭ್ಯವಾಗಿದೆ. ಪಾಸಿಟಿವ್ ಬಂದ 15 ಮಂದಿಯಲ್ಲಿ ಸಿಎಂ ಪತ್ನಿ ಕಲ್ಪನಾ ಸೊರೆನ್, ಅವರ ಇಬ್ಬರು ಮಕ್ಕಳಾದ ನಿತಿನ್ ಮತ್ತು ವಿಶ್ವಜಿತ್, ಸೊಸೆ ಸರಳಾ ಮುರ್ಮು & ಅಂಗರಕ್ಷಕ ಸೇರಿದ್ದಾರೆ ಎಂದು ಕುಮಾರ್ ಮಾಹಿತಿ ನೀಡಿದ್ದಾರೆ. ಹೀಗಾಗಿ ಸಿಎಂ ಮನೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಬಹುದು ಎಂದು ರಾಂಚಿ ಮುಖ್ಯಮಂತ್ರಿ ಕಚೇರಿ ಪಿಟಿಐಗೆ ತಿಳಿಸಿದ್ದಾರೆ

RELATED ARTICLES

Related Articles

TRENDING ARTICLES