Sunday, January 19, 2025

ರಾಕಿ ಭಾಯ್‌ಗೆ​​​ KGF ಟೀಂ​​​ ವಿಶ್

ಬೆಂಗಳೂರು : ಸ್ಯಾಂಡಲ್‍ವುಡ್ ನಟ ಯಶ್ ಅವರ ಹುಟ್ಟುಹಬ್ಬಕ್ಕೆ ಕೆಜಿಎಫ್ ಚಿತ್ರತಂಡ ವಿಭಿನ್ನ ಮತ್ತು ವಿಶೇಷವಾಗಿ ವಿಶ್ ಮಾಡುತ್ತದೆ ಎಂದು ಕಾದು ಕುಳಿತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿಲ್ಲ.

ಚಿತ್ರತಂಡ ಯಶ್ ಅವರ ಖಡಲ್ ಲುಕ್ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದೆ. ಎಚ್ಚರಿಕೆ, ಮುಂದೆ ಅಪಾಯವಿದೆ. ನಮ್ಮ ರಾಕಿ ಭಾಯಿ ಯಶ್ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಬರೆದುಕೊಂಡು ಯಶ್ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಲುಕ್‍ನ ಫೋಟೋವನ್ನು ಕೆಜಿಎಫ್ ತಂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ.

ಯಶ್ ಅವರಿಗೆ ಜನ್ಮ ದಿನಾಚರಣೆ ವಿಶ್ ಮಾಡಿರುವ ಹೊಂಬಾಳೆ ಫಿಲ್ಮ್ಸ್ #KGF2onApr14 ಎಂಬ ಹ್ಯಾಶ್ ಟ್ಯಾಗ್ ಬಳಸುವ ಮೂಲಕ ರಿಲೀಸ್ ದಿನಾಂಕದಲ್ಲಿ ಸದ್ಯಕ್ಕಂತೂ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಖಚಿತಪಡಿಸಿದೆ. ಯಶ್ ಅಭಿಮಾನಿಗಳಿಗೆ ಈ ವಿಚಾರ ಸಖತ್ ಖುಷಿಯನ್ನು ತಂದಿದೆ.

RELATED ARTICLES

Related Articles

TRENDING ARTICLES