ಬೆಂಗಳೂರು :ದಿನದಿಂದ ದಿನಕ್ಕೆ ಕೊರೋನಾ ವೈರಸ್ ಮತ್ತು ಒಮೈಕ್ರಾನ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ, ಬೆಂಗಳೂರಿನ ಹಲವು ಕಡೆಗಳಲ್ಲಿ ಖಾಕಿ ಪಡೆಗಳು ಅನಾವಶ್ಯಕವಾಗಿ ತಿರುಗಾಡುತ್ತಿದ್ದವರಿಗೆ ದಂಡ ವಿಧಿಸುತ್ತಿದ್ದರು. ಹಾಗೆನೇ ಇನ್ನು ಕೆಲವು ಕಡೆಗಳಲ್ಲಿ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ಬೆಂಗಳೂರು ಪೊಲೀಸರು ರಸ್ತೆಗೆ ಇಳಿದಿದ್ದು,ಅನಾವಶ್ಯಕವಾಗಿ ತಿರುಗಾಡುತ್ತಿರುವವರಿಗೆ ತಿಳಿ ಹೇಳಿ ಕಳುಹಿಸುತ್ತಾರೆ.ಜೊತೆಗೆ ಕಾರಣವಿಲ್ಲದೆ ಸಂಚರಿಸುತ್ತಿರುವ ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.ಬಹುತೇಕ ಕಡೆಗಳಲ್ಲಿ ಸ್ತಬ್ಧವಾಗಿದ್ದು,ಪ್ರಮುಖ ರಸ್ತೆಗಳು ಖಾಲಿರಾಗಿದೆ.ಎಂಜಿ ರೋಡ್,ಕೆ.ಆರ್.ಮಾರ್ಕೆಟ್,ಚಿಕ್ಕಪೇಟೆ,ಬ್ರಿಗೇಡ್ ರೋಡ್,ಕಾರ್ಪೋರೇಷನ್ ಸರ್ಕಲ್,ನೃಪತುಂಗ ರಸ್ತೆ,ಮೈಸೂರು ರೋಡ್,ಮೆಜೆಸ್ಟಿಕ್ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ವಿರಳ ಸಂಚಾರ ಇದೆ.