Monday, February 24, 2025

ವಿಕೆಂಡ್ ಕರ್ಪ್ಯೂ : ಉಲ್ಲಂಘಿಸಿ ಕುರಿ ಸಂತೆ ವ್ಯಾಪಾರ

ಕಲಬುರಗಿ : ವಿಕೆಂಡ್ ಕರ್ಪ್ಯೂ ಉಲ್ಲಂಘಿಸಿ ಕುರಿ ಸಂತೆ ವ್ಯಾಪಾರ ಮಾಡಿದ ಘಟನೆ ಕಲಬುರಗಿಯ ಫಿಲ್ಟರ್ ಬೆಡ್ ಏರಿಯಾನಲ್ಲಿ ನಡೆದಿದೆ.
ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಪಾಲಿಸದೆ ಕುರಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರು,ಹೊಟ್ಟೆಗೆ ಹಿಟ್ಟಿಲ್ಲದೆ ಇಲ್ಲದೆ ಇರುದರಿಂದ ಕುರಿ ಮಾರಾಟ ಮಾಡೊಕೆ ಬಂದಿರೋದು ಎಂದು ಹೇಳುತ್ತಾರೆ.

ಮೂರು ತಿಂಗಳಿಗೊಮ್ನೆ ಲಾಕ್ ಡೌನ್ ಕರ್ಪ್ಯೂ ಮಾಡಿದರೆ ನಾವು ಬದುಕಬೇಕಾ ಸಾಯಬೇಕಾ,ಕೊರೊನಾ ಹೆಸರಲ್ಲಿ ನೆಮ್ಮಲ್ಲೆರನ್ನಲ್ಲ ಒಂದೆ ಸಾರಿ ಸಾಯಿಸಿಬಿಡಿ ಎಂದು ಕುರಿ ವ್ಯಾಪಾರಿಗಳು ಹೇಳುತ್ತಾರೆ.ಮನೆಯಲ್ಲಿ ಇರೋ ಕುರಿ ಮಾರಿ ಮಕ್ಕಳ ಒಂದು ಹೊತ್ತು ಅನ್ನ ಹಾಕಬೇಕು, ಎಲ್ಲಿದೆ ಕೊರೊನಾ, ಶನಿವಾರ ಭಾನುವಾರ ಮಾತ್ರ ಕರೊನಾ ಇರೋದಾ ಸರ್ಕಾರದ ವಿರುದ್ಧ ಕುರಿ ಸಂತೆಯಲ್ಲಿ ಭಾಗಿಯಾಗಿದ್ದ ವ್ಯಾಪಾರಸ್ಥರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES