Sunday, May 19, 2024

ಮೇಕೆದಾಟು ಪಾದಯಾತ್ರೆ : ಹೋಟೆಲ್‌ ಬಂದಾದ್ರೇನು, ಬೇರೆ ವ್ಯವಸ್ಥೆ ರೆಡಿ ಎಂದ ಕಾಂಗ್ರೆಸ್‌

ಬೆಂಗಳೂರು : ಸರ್ಕಾರ ಚಾಪೆ ಕೆಳಗೆ ನುಗ್ಗಿದ್ರೆ, ಕಾಂಗ್ರೆಸ್ ನಾಯಕರು ರಂಗೋಲಿ ಕೆಳಗೆ ನುಗ್ಗೋಕೆ ಹೊರಟಿದ್ದಾರೆ. ಟಫ್ ರೂಲ್ಸ್ ಮೂಲಕ ಕಾಂಗ್ರೆಸ್ ಪಾದಯಾತ್ರೆಗೆ ಸರ್ಕಾರ ಕಡಿವಾಣ ಹಾಕಿದ್ರೆ, ನೀವು ಏನ್ಬೇಕಾದ್ರೂ ಮಾಡ್ಕೊಳ್ಳಿ, ನಾವು ಮಾಡೋದು ಮಾಡ್ಕೋಳ್ತೇವೆ ಅಂತ ಕಾಂಗ್ರೆಸ್ ನಾಯಕರು ಸರ್ಕಾರಕ್ಕೆ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ.

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ. ಪಾದಯಾತ್ರೆ ಮೂಲಕ ಜನರ ವಿಶ್ವಾಸ ಗಳಿಸೋಕೆ ಹೊರಟಿದೆ.ಆದ್ರೆ ಪಾದಯಾತ್ರೆಗೆ ಅವಕಾಶ ಕೊಟ್ರೆ ನಮಗೇ ಲಾಸ್ ಅಂತ ಜೆಡಿಎಸ್, ಬಿಜೆಪಿ ನಾಯಕರು ತಡೆಯೋಕೆ ಹಲವು ಪ್ರಯತ್ನಗಳನ್ನ ಮಾಡ್ತಾನೇ ಇದ್ದಾರೆ. ಆದ್ರೆ ಸರ್ಕಾರದ ಎಲ್ಲಾ ಪ್ರಯತ್ನಗಳಿಗೆ ಕೈನಾಯಕರು ತಿರುಗೇಟು ನೀಡ್ತಾನೇ ಇದ್ದಾರೆ. ಕೊವಿಡ್ ಹೆಚ್ಚಳವಾಗ್ತಿದೆ ಅಂತ ಸರ್ಕಾರ ಟಫ್ ರೂಲ್ಸ್ ಜಾರಿಮಾಡಿದೆ. ಈ ಮೂಲಕ ಪಾದಯಾತ್ರೆಗೆ ತಡೆಯೊಡ್ಡೋಕೆ ಹೊರಟಿದೆ.ಪಾದಯಾತ್ರೆಗೆ ಬರುವರಿಗೆಂದು ಊಟ,ವಸತಿ ವ್ಯವಸ್ಥೆಗೆಂದು ಕೈ ನಾಯಕರು ಹೊಟೇಲ್,ರೆಸ್ಟೋರೆಂಟ್ ಬುಕ್ ಮಾಡಿದ್ದನ್ನೂ ಕ್ಯಾನ್ಸಲ್ ಮಾಡಿಸಿ,ಹೊಟೇಲ್ ಬಂದ್ ಮಾಡಿಸಿದ್ದಾರೆ.ಈ ಮೂಲಕ ಪಾದಯಾತ್ರೆಯನ್ನ ಅಡ್ಡದಾರಿಯಲ್ಲಿ ತಡೆಯೋ ಪ್ಲಾನ್ ರೂಪಿಸಿದ್ದಾರೆ.

ಪಾದಯಾತ್ರೆಗೆಂದು ಕಾಂಗ್ರೆಸ್ ನಾಯಕರು ಸಂಗಮ, ಕನಕಪುರ, ರಾಮನಗರ ಎಲ್ಲಾ ಕಡೆಗಳಲ್ಲಿ ೧೫ ದಿನಗಳ ಹಿಂದೆಯೇ ಹೊಟೇಲ್ ಬುಕ್ ಮಾಡಿದ್ರು. ಆದ್ರೆ ಹೊಟೇಲ್ ಇದ್ರೆ ತಾನೇ ವಸತಿ, ಊಟ ಸಿಕ್ಕೋದು,ನೀವು ಪಾದಯಾತ್ರೆ ಮಾಡೋದು ಅಂತ ಸರ್ಕಾರ ಅವನ್ನೇ ಬಂದ್ ಮಾಡಿಸಿದೆ.ಆದ್ರೆ ನೀವು ಬಂದ್ ಮಾಡಿಸಿದ್ರೇನು ನಾವು ಅದಕ್ಕೂ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೇವೆ ಅಂತ ಕೈ ನಾಯಕರು ಪ್ರತಿತಂತ್ರ ಹೆಣೆದಿದ್ದಾರೆ. ಪಾದಯಾತ್ರೆ ಯುದ್ಧಕ್ಕೂ ಊಟ,ವಸತಿಗಾಗಿ ಹೊಲಗಳಲ್ಲೇ ಟೆಂಟ್ ಹಾಕೋಕೆ ನಿರ್ಧರಿಸಿದೆ. ಬಂದವರು ಮಲಗೋಕೆಂದು ೨೦೦೦ ಬೆಡ್ ಖರೀದಿಸಿದೆ. ಸ್ಥಳೀಯರಿಂದಲೇ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ದಾರಿಯುದ್ಧಕ್ಕೂಆಯಾಸಗೊಂಡವರಿಗೆ ಎಳನೀರು, ಪಾನಕ, ಕೋಸಂಬರಿ ವಿತರಣೆಗೂ ವ್ಯವಸ್ಥೆ ಮಾಡಲಾಗಿದೆ. ಮಾರ್ಗದಲ್ಲಿ ಬರುವ ಹಳ್ಳಿಯ ಜನರೇ ಉಪಹಾರ ನೀಡೋಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಸರ್ಕಾರಕ್ಕೇ ಸೆಡ್ಡು ಹೊಡೆದಿದ್ದಾರೆ.

ಇನ್ನು,ಮೇಕೆದಾಟು ಬಳಿಯ ಸಂಗಮದಿಂದ ಆರಂಭಿಸಿ ದೊಡ್ಡಆಲಹಳ್ಳಿ, ಕನಕಪುರ, ಮಾಡಾಳು, ಗಾಣಾಳು, ಲಿಂಗರಾಜಿಪುರ, ರಾಮನಗರ, ಕೆಂಗೇರಿ, ಕೆ.ಆರ್.ಪುರಂ ಮೂಲಕ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಸಮಾಪ್ತಿಯಾಗಲಿದೆ..ಪ್ರತಿದಿನ ೧೫ ಕಿಲೋಮೀಟರ್ ವರೆಗೆ ನಡಿಗೆ ಇರಲಿದೆ. ಮಧ್ಯೆ 7 ಕಿಲೋಮೀಟರ್​​ಗೆ ವಿಶ್ರಾಂತಿಗೆಂದು ಪಾದಯಾತ್ರೆಗೆ ಬ್ರೇಕ್ ಇರಲಿದೆ. ಬೆಳಗ್ಗೆ ಉಪಹಾರ,ದಾರಿ ಮಧ್ಯೆ ಎಳನೀರು, ಕೋಸಂಬರಿ,ಪಾನಕ,ಮಧ್ಯಾಹ್ನ ವಿಶ್ರಾಂತಿ ಸ್ಥಳದಲ್ಲಿ ಊಟಕ್ಕೆ ವ್ಯವಸ್ಥೆ, ಸಂಜೆ ಲಘು ಉಪಹಾರ, ರಾತ್ರಿ ೧೫ ಕಿಲೋಮೀಟರ್ ಮುಗಿಯುತ್ತಲೇ ಅವತ್ತಿನ ದಿನದ ಪಾದಯಾತ್ರೆ ಕೊನೆಗೊಳ್ಳಲಿದೆ.

ಒಟ್ಟಿನಲ್ಲಿ ಸರ್ಕಾರ ಪಾದಯಾತ್ರೆ ತಡೆಯೋಕೆ ಹಲವು ತಂತ್ರಗಳನ್ನ ಮಾಡ್ತಾನೇ ಇದೆ.ಅದಕ್ಕೆ ಪೂರಕವಾಗಿ ಜೆಡಿಎಸ್ ನಾಯಕರು ಬೆಂಬಲ ನೀಡ್ತಿದ್ದಾರೆ. ಆದ್ರೆ ಕೈ ನಾಯಕರು ಮಾತ್ರ ಸರ್ಕಾರ ಹಾಕಿದ ಅಡೆತಡೆಗಳನ್ನ ಭೇದಿಸಿ ತಮ್ಮದೇ ಕಾರ್ಯತಂತ್ರಗಳನ್ನ ಹೆಣೆಯುವ ಮೂಲಕ ಪಾದಯಾತ್ರೆ ಸಕ್ಸಸ್ ಮಾಡೋಕೆ ಹೊರಟಿದ್ದಾರೆ.

RELATED ARTICLES

Related Articles

TRENDING ARTICLES