Monday, December 23, 2024

ವಿಕ್ರಾಂತ್ ರೋಣಗೆ 100 ಕೋಟಿ ಆಫರ್

ದಬಾಂಗ್ 3, ಕೋಟಿಗೊಬ್ಬ 3 ನೋಡಿ ಅಪ್ಸೆಟ್ ಆಗಿರೋ ಕಿಚ್ಚನ ಫ್ಯಾನ್ಸ್​ಗೆ ಡಬಲ್ ಧಮಾಕ ನೀಡೋಕೆ ಬರ್ತಿದೆ ವಿಕ್ರಾಂತ್ ರೋಣ. ವರ್ಲ್ಡ್​ ಸಿನಿದುನಿಯಾದಲ್ಲಿ ಕ್ರಾಂತಿ ಮಾಡೋಕೆ ಸನ್ನದ್ಧನಾಗ್ತಿರೋ ರೋಣನಿಗೆ ಎಲ್ಲಿಲ್ಲದ ಡಿಮ್ಯಾಂಡ್ ಹುಟ್ಟಿದೆ. ನೂರು ಕೋಟಿ ದಾಖಲೆ ಮೊತ್ತಕ್ಕೆ ಒಟಿಟಿ ಮಂದಿ ಪೈಪೋಟಿಗೆ ಇಳಿದಿದ್ದಾರೆ. ಈ ಕುರಿತ ವೆರಿ ವೆರಿ ಸ್ಪೆಷಲ್ ಇಂಟರೆಸ್ಟಿಂಗ್ ಸ್ಟೋರಿ ನಿಮಗಾಗಿ ಕಾಯ್ತಿದೆ.

ಚಿತ್ರರಂಗವನ್ನ ಕೊರೋನಾ ಮತ್ತೊಮ್ಮೆ ಇನ್ನಿಲ್ಲದೆ ಕಾಡಲು ಮುಂದಾಗಿದೆ. ಮೂರನೇ ಅಲೆ ಅಂತ ಹೇಳಲಾಗ್ತಿರೋ ಈ ಹೊಸ ವರ್ಷದಲ್ಲಿ ದಿನೇ ದಿನೆ ಕೇಸ್​ಗಳು ಗಣನೀಯವಾಗಿ ಹೆಚ್ಚಾಗ್ತಿವೆ. ಇದು ಸಿನಿಮಾರಂಗದ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪರಿಣಾಮ ಬೀಳುತ್ತಿದೆ. ಅದ್ರಲ್ಲೂ ಬಿಗ್ ಬಜೆಟ್ ಚಿತ್ರಗಳ ಮೇಲಿನ ಎಫೆಕ್ಟ್ ಕೊಂಚ ಜಾಸ್ತಿ.

ರಾಜಮೌಳಿಯ ತ್ರಿಬಲ್ ಆರ್ ಹಾಗೂ ಪ್ರಭಾಸ್​ರ ರಾಧೆ ಶ್ಯಾಮ್ ಚಿತ್ರಗಳ ರಿಲೀಸ್ ಪೋಸ್ಟ್​ಪೋನ್ ಆಯ್ತು. ಕನ್ನಡದಲ್ಲೂ ಜನವರಿ ರಿಲೀಸ್ ಚಿತ್ರಗಳು ಮುಂದಕ್ಕೆ ಹೋದವು. ಆದ್ರೆ ಕೆಜಿಎಫ್​ಗೂ ಮುನ್ನ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಮತ್ತೊಂದು ಕನ್ನಡದ ಪ್ಯಾನ್ ಇಂಡಿಯಾ ಮೂವಿ ವಿಕ್ರಾಂತ್ ರೋಣ ಮೇಲೆ ಎಲ್ಲರ ಚಿತ್ತ ಮೂಡಿದೆ.

ಯೆಸ್.. ಜಾಕ್ ಮಂಜು ನಿರ್ಮಾಣದ ವಿಕ್ರಾಂತ್ ರೋಣ ಸುಮಾರು 80 ಕೋಟಿ ಬೃಹತ್ ಮೊತ್ತದಲ್ಲಿ ತಯಾರಾಗ್ತಿದೆ. ರಂಗಿತರಂಗ ಫೇಮ್ ಅನೂಪ್ ಭಂಡಾರಿ ಈ ಚಿತ್ರಕ್ಕೆ ಌಕ್ಷನ್ ಕಟ್ ಹೇಳಿದ್ದು, ಹಾಲಿವುಡ್ ಶೈಲಿಯ ಸಿನಿಮಾಗಳ ಕಥೆಯನ್ನ ದೊಡ್ಡ ಪರದೆ ಮೇಲೆ ತರೋದರಲ್ಲಿದ್ದಾರೆ. ಡೆಡ್​ಮ್ಯಾನ್ಸ್ ಌಂಥೆಮ್ ಟೀಸರ್ ಹಾಗೂ ಇಲ್ಲಿಯವರೆಗೂ ರಿವೀಲ್ ಆಗಿರೋ ಫ್ಯಾಂಟಮ್ ವರ್ಲ್ಡ್​ ಝಲಕ್​ಗಳು ಚಿತ್ರದ ಮೇಲಿನ ನಿರೀಕ್ಷೆಯನ್ನ ದುಪ್ಪಟ್ಟು ಮಾಡಿವೆ.

ಕಿಚ್ಚನ ಜೊತೆ ನಿರೂಪ್ ಭಂಡಾರಿ, ಗಡಾಂಗ್ ರಕ್ಕಮ್ಮ ರೋಲ್​ನಲ್ಲಿ ಬಾಲಿವುಡ್​ನ ಜಾಕ್ವೆಲಿನ್ ಫಾರ್ನಾಂಡಿಸ್, ರವಿಶಂಕರ್ ಗೌಡ, ವಾಸುಕಿ ವೈಭವ್, ಮಧುಸೂಧನ್ ರಾವ್, ನೀತಾ ಅಶೋಕ್ ಹೀಗೆ ದೊಡ್ಡ ತಾರಾಗಣವಿದೆ. ಅಜನೀಶ್ ಲೋಕನಾಥ್ ಸಂಗೀತ ಹಾಗೂ ವಿಲಿಯಮ್ ಡೇವಿಡ್ ಸಿನಿಮಾಟೋಗ್ರಫಿ ಬೇರೆಯದ್ದೇ ಟಿಂಟ್​ನಲ್ಲಿ ಫ್ರೆಶ್ ಫೀಲ್ ಕೊಡ್ತಿದೆ.

ಕೊರೋನಾ ಲಾಕ್​ಡೌನ್ ಬಳಿಕ ಶೂಟಿಂಗ್ ಶುರುವಿಟ್ಟ ಮೊಟ್ಟ ಮೊದಲ ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ಈಗಾಗ್ಲೇ ಶೂಟಿಂಗ್ ಕಂಪ್ಲೀಟ್ ಆಗಿದೆ. ಇದೇ ಫೆಬ್ರವರಿ 24ಕ್ಕೆ ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ಭಾಷೆಯಲ್ಲಿ ಸಿನಿಮಾನ ರಿಲೀಸ್ ಮಾಡೋ ಧಾವಂತದಲ್ಲಿದೆ ಟೀಂ. ಆದ್ರೀಗ ಕೊರೋನಾ ಮೂರನೇ ಅಲೆಯಿಂದ ಥಿಯೇಟರ್​ ಗಳು ಸೆಮಿ ಲಾಕ್ ಆಗಿವೆ. ಲಾಕ್ ಆದ್ರೂ ಅಚ್ಚರಿಯಿಲ್ಲ.

ಹೀಗಾಗಿ ಸಿನಿಮಾಗಳು ರಿಲೀಸ್ ಮಾಡೋಕೆ ನಿರ್ಮಾಪಕರು ಹೆದರುವಂತಾಗಿದೆ. ಇನ್ನೂ ಕಿಚ್ಚನ ಫ್ಯಾನ್ಸ್ ಕೂಡ ವಿಕ್ರಾಂತ್ ರೋಣ ಚಿತ್ರಕ್ಕಾಗಿ ಬಹಳ ಕಾತರರಾಗಿದ್ದಾರೆ. ಆದ್ರೆ ಕೊರೋನಾದಿಂದಾಗಿ ರಿಲೀಸ್ ಪೋಸ್ಟ್​ಪೋನ್ ಆಗುತ್ತಾ ಅಂದ್ರೆ ಸದ್ಯಕ್ಕೆ ಕ್ಲ್ಯಾರಿಟಿ ಇಲ್ಲ. ಆದ್ರೆ ಎಲ್ರೂ ಖುಷಿ ಆಗೋ ಅಂತಹ ಒಂದು ಸ್ವೀಟ್ ನ್ಯೂಸ್ ಬಂದಿದೆ. ವಿಕ್ರಾಂತ್ ರೋಣನಿಗೆ ಬರೋಬ್ಬರಿ 100 ಕೋಟಿಗೆ ಆಫರ್ ನೀಡ್ತಿವೆ ಒಟಿಟಿಗಳು.

ಹೌದು.. ಸ್ಯಾಂಪಲ್ಸ್ ನೋಡಿ ಬಾಲಿವುಡ್, ಹಾಲಿವುಡ್ ಶೈಲಿಯಂತಿರೋ ದೃಶ್ಯಚಿತ್ತಾರಕ್ಕೆ ಫಿದಾ ಆಗಿರೋ ಒಟಿಟಿ ಕಂಪೆನಿಗಳ ನಡುವೆ ಇದ್ರ ರೈಟ್ಸ್​ಗೆ ಪೈಪೋಟಿ ಶುರುವಾಗಿದೆಯಂತೆ. ಈಗಿರೋ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಿನಿಮಾನ ಒಟಿಟಿಯಲ್ಲೇ ರಿಲೀಸ್ ಮಾಡಿದ್ರೂ ಅಚ್ಚರಿಯಿಲ್ಲ ಅನ್ನುವಂತಾಗಿದೆ. ಹಾಗಾಗಿ ನಿರ್ಮಾಪಕ ಜಾಕ್ ಮಂಜು ಹಾಗೂ ಕಿಚ್ಚ ಸುದೀಪ್ ಮುಂದಿನ ದಿನಗಳಲ್ಲಿ ಒಟಿಟಿ ಆಫರ್ ಕುರಿತು ಯಾವ ನಿರ್ಧಾರ ಕೈಗೊಳ್ತಾರೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES