Sunday, January 19, 2025

ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಟಿಪ್ಪರ್ : ಬೈಕ್ ಸವಾರ ಸ್ಧಳದಲ್ಲೇ ಸಾವು

ಚಾಮರಾಜನಗರ : ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಇನ್ನೂರು ಮೀಟರ್ ಎಳೆದೊಯ್ದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಳ್ಳದ ಮಾದಳ್ಳಿ ಗೇಟ್ ಸಮೀಪ‌ದಲ್ಲಿ ನಡೆದಿದೆ.

ಮಗಳ ಮನೆಗೆ ತೆರಳುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಟಿಪ್ಪರ್,ಇನ್ನೂರು ಮೀಟರಿಗೂ ಹೆಚ್ಚು ದೂರ ಎಳೆದೊಯ್ದಿದೆ, ಈ ಘಟನೆಯಲ್ಲಿ ನಂಜನಗೂಡು ತಾಲೂಕಿನ ಮಲ್ಲಹಳ್ಳಿ ಗ್ರಾಮದ ಮುದ್ದರಾಜಪ್ಪ(50) ಮೃತಪಟ್ಟಿದ್ದಾರೆ.
ಮಗಳ ಮನೆ ಗೋಪಾಲಪುರಕ್ಕೆ ಬೈಕಿನಲ್ಲಿ ತೆರಳುತ್ತಿದ್ದ ಮುದ್ದರಾಜಪ್ಪ,ವೇಗದಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ಸಮೇತ ಸವಾರನನ್ನು ಎಳೆದೊಯ್ದ ಬೀಕರ ಅಪಘಾತ ಸಂಭವಿಸಿದೆ.ಟಿಪ್ಪರ್ ಚಾಲಕನ ಅತಿವೇಗ ಮತ್ತು ಅಜಾಗರೂಕ ಚಾಲನೆಯಿಂದ ಈ ಅವಘಡ ಸಂಭವಿಸಿದೆ.

ಅರ್ಧ ಗಂಟೆಗೂ ಹೆಚ್ಚು ಕಾಲ ರೈತ ಮುಖಂಡರು ಹಾಗೂ ಸ್ಥಳೀಯರು ಪ್ರತಿಭಟಿಸಿದ್ದಾರೆ. ಟಿಪ್ಪರ್ ಗಳಿಗೆ ಕಡಿವಾಣ ಹಾಕದ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಚಾಮರಾಜನಗರ ಡಿವೈಎಸ್ಪಿ ಪ್ರಿಯಾದರ್ಶಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗುಂಡ್ಲುಪೇಟೆ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES