Sunday, January 19, 2025

ಬಣ್ಣವನ್ನೇ ಮದುವೆಯಾದ್ಲು ಯುವತಿ

ಸಾಕಷ್ಟು ಜನ ತಾವು ಪ್ರೀತಿಸಿದವರೊಂದಿಗೋ ಅಥವಾ ತಮ್ಮ ಕುಟುಂಬದವರು ಒಪ್ಪಿದವರೊಂದಿಗೋ ಮದುವೆಯಾಗುತ್ತಾರೆ. ಯಾರು ಯಾರನ್ನ ಮದುವೆಯಾಗುತ್ತಾರೆ ಅನ್ನೋದನ್ನ ನಿಖರವಾಗಿ ಹೀಗೆ ಅಂತ ಹೇಳೋದಕ್ಕೆ ಸಾಧ್ಯವಿಲ್ಲ. ಹಾಗಾಗಿ ಮದುವೆಯನ್ನ ದೇವರು ನಿಶ್ಚಯಿಸಿರುತ್ತಾನೆ, ಅಥವಾ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅಂತ ಹೇಳಲಾಗುತ್ತದೆ. ಆದರೆ ಇತ್ತೀಚೆಗೆ ನಡೆಯುತ್ತಿರುವ ಮದುವೆಗಳನ್ನ ಗಮನಿಸಿದ್ರೆ, ಮದುವೆ ಅನ್ನೋದು ನಿಜವಾಗಿಯೂ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತಾ? ಆ ದೇವರೇ ಈ ರೀತಿ ಮದುವೆಗಳನ್ನ ನಿಶ್ಚಯ ಮಾಡಿದ್ನ ಅನ್ನೋ ಅನುಮಾನ ಕಾಡದೆ ಇರೊಲ್ಲ. ಅದ್ರಲ್ಲೂ ಕೆಲವೊಂದು ಮದುವೆಗಳನ್ನ ನೋಡಿದ್ರೆ ಏನ್​ ಕಾಲ ಬಂತಪ್ಪ ಅಂತ ಅಂದುಕೊಳ್ಳದೆ ಇರೋದಕ್ಕೆ ಸಾಧ್ಯವಿಲ್ಲ.

ಅದಕ್ಕೆ ಕಾರಣ ಇತ್ತೀಚೆಗೆ ನಡೆಯುತ್ತಿರುವ ಮದುವೆಗಳು. ಇತ್ತಿಚೆಗೆ ನಡೆಯುತ್ತಿರುವ ಮದುವೆಗಳು ಜಾಗತಿಕವಾಗಿ ಸಾಕಷ್ಟು ಸುದ್ದಿ ಮಾಡ್ತಾ ಇದೆ. ಅದಕ್ಕೆ ಕಾರಣ ಖರ್ಚು-ವೆಚ್ಚಗಳು ಅಲ್ಲ ಬದಲಾಗಿ ಮದುವೆಯಾಗಿತ್ತಿರುವವರು ತಾವು ಆರಿಸಿಕೊಳ್ಳುತ್ತಿರುವ ಸಂಗಾತಿಗಳು, ಕೆಲ ವರ್ಷಗಳಿಂದ ಹಲವರು ತಾವು ಮದುವೆಯಾಗುತ್ತಿರುವ ಸಂಗಾತಿಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರು ತಾವು ಸಂಗಾತಿ ಎಂದು ಆಯ್ದು ಕೊಳ್ಳುವ ವಸ್ತುಗಳು ಮತ್ತು ವ್ಯಕ್ತಿಗಳು, ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬರು ಮೊಬೈಲ್​ ಅನ್ನ ಮದುವೆಯಾಗಿದ್ದರು, ಮಹಿಳೆಯೊಬ್ಬಳು ಮರವನ್ನ ಮದುವೆಯಾಗಿ ಸುದ್ದಿಯಾಗಿದ್ದಳು, ಜಪಾನ್​ ವ್ಯಕ್ತಿಯೊಬ್ಬ ಗೊಂಬೆಯನ್ನ ಮದುವೆಯಾಗಿದ್ರೆ, ಮತ್ತೊಬ್ಬ ವ್ಯಕ್ತಿ ತನ್ನನ್ನ ತಾನೆ ಮದುವೆಯಾಗಿ ಸುದ್ದಿಯಾಗಿದ್ದ, ಹೀಗೆ ಚಿತ್ರ ವಿಚಿತ್ರವಾದ ಮದುವೆಗಳು ಜಗತ್ತಿನಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ.

ಇದೀಗ ಇದಕ್ಕೆ ಪೂರಕ ಅನ್ನೋ ಹಾಗೆ ಅಮೆರಿಕಾದ ಯುವತಿ ಸೇರಾ ಬಣ್ಣವನ್ನ ಮದುವೆಯಾಗಿ ಸುದ್ದಿಯಾಗಿದ್ದಾಳೆ, ಇದೀಗ ಈಕೆ ಬಣ್ಣವನ್ನ ಮದುವೆಯಾಗಿರುವ ವಿಡಿಯೋ ಇಂಟರ್​ನೆಟ್​ನಲ್ಲಿ ಫುಲ್​ ವೈರಲ್​ ಆಗಿದ್ದು ಈ ಬಗ್ಗೆ ಜನರು ಹಾಸ್ಯ ಚಟಾಕಿಗಳನ್ನ ಹಾರಿಸುತ್ತಿದ್ದಾರೆ. ಅಷ್ಟಕ್ಕೂ ಈ ಮಹಿಳೆ ಲಾಸ್​ವೇಗಸ್​ನ ನಿವಾಸಿಯಾಗಿದ್ದು, ಈಕೆ ಮೊದಲಿನಿಂದಲೂ ಗುಲಾಬಿ ಬಣ್ಣವನ್ನ ಪ್ರೀತಿಸುತ್ತಿದ್ದಳಂತೆ. ಈಕೆಗೆ ಬಾಲ್ಯಂದಿಂದಲೂ ಗುಲಾಬಿ ಬಣ್ಣದ ಮೇಲೆ ವಿಪರೀತವಾದ ಪ್ರೀತಿ ಇದ್ದು, ಈಕೆ ಯಾವಾಗಲೂ ಗುಲಾಬಿ ಬಣ್ಣದ ಬಟ್ಟೆಗಳನ್ನೇ ಧರಿಸುತ್ತಿದ್ದಳು ಅಂತ ಆಕೆಯ ಪೋಷಕರು ಕೂಡ ಮಾಧ್ಯಮಗಳಿಗೆ ಹೇಳಿಕೆಯನ್ನ ನೀಡಿದ್ದಾರೆ.

ಮಹಿಳೆಯ ಗುಲಾಬಿ ಬಣ್ಣದ ವ್ಯಾಮೋಹವನ್ನ ನೋಡಿದ ಯುವಕನೋರ್ವ ಈಕೆಗೆ ಗುಲಾಬಿ ಬಣ್ಣವನ್ನೇ ಮದುವೆಯಾಗಲು ಹೇಳಿದ್ದನಂತೆ ಹಾಗಾಗಿ ಈಕೆಗೆ ಇದು ಸರಿ ಎನಿಸಿ ತಾನು ಪ್ರೀತಿಸುತ್ತಿರುವ ಗುಲಾಬಿ ಬಣ್ಣವನ್ನೇ ಮದುವೆಯಾಗಲು ನಿರ್ಧರಿಸಿ ಜನವರಿ 1ರಂದು ಗುಲಾಬಿ ಬಣ್ಣವನ್ನ ಮದುವೆಯಾಗಿದ್ದಾಳೆ. ತನ್ನ ಮದುವೆಯ ದಿನದಂದು ಸೆರಾ, ಗುಲಾಬಿ ಬಣ್ಣದ ಗೌನ್, ಗುಲಾಬಿ ಕೋಟ್, ಜೊತೆಗೆ ಗುಲಾಬಿ ಬಣ್ಣದ ಕಿರೀಟವನ್ನು ಧರಿಸಿದ್ದಳು. ಅಷ್ಟೇ ಅಲ್ಲ ಆಕೆಯ ಕೂದಲೂ ಕೂಡ ಗುಲಾಬಿ ಬಣ್ಣದಲ್ಲೇ ಕಂಗೊಳಿಸುತ್ತಿತ್ತು. ಗುಲಾಬಿ ಬಣ್ಣದ್ದೇ ಆಭರಣ ಧರಿಸಿದ್ದಳು. ತನ್ನ ಮದುವೆ ಮಂಟಪಕ್ಕೆ ಗುಲಾಬಿ ಬಣ್ಣದ ಕಾರ್ ನಲ್ಲೇ ಪ್ರಯಾಣಿಸಿದ ಈಕೆ, ಗುಲಾಬಿ ಬಣ್ಣದ ಹೂವಿನ ಬೊಕೆಯನ್ನು ಕೈಯಲ್ಲಿ ಹಿಡಿದಿದ್ದಳು. ಕೇಕ್, ಮದುವೆ ಮಂಟಪ ಮುಂತಾದವುಗಳೆಲ್ಲಾ ಗುಲಾಬಿ ಬಣ್ಣದಲ್ಲೇ ಅಲಂಕಾರಗೊಂಡಿತ್ತು. ಇನ್ನು ಮದುವೆಗೆ ಬಂದ ಅತಿಥಿಗಳು ಕೂಡ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ ಸೆರಾ ಅವರ ಬಣ್ಣದ ಮದುವೆಗೆ ಎಲ್ಲರೂ ಹಾರೈಸಿದ್ದಾರೆ .

ಸದ್ಯಕ್ಕೆ ಈಕೆಯ ಮದುವೆ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಾ ಇದ್ದು ಈ ಬಗ್ಗೆ ಬಹುತೇಕರು ಗೇಲಿ ಮಾಡೋದಕ್ಕೆ ಶುರುಮಾಡಿದ್ದಾರೆ. ಇನ್ನು ಕೆಲವರು ಆಕೆಯ ಪರ ನಿಂತಿರೋದು ಕೂಡ ಹಲವು ಅಚ್ಚರಿಗೆ ಕಾರಣವಾಗಿದೆ. ಕೆಲವರಂತು ಇನ್ನು ಮುಂದಿನ ದಿನಗಳಲ್ಲಿ ಮತ್ತಿನ್ಯಾವ ಮದುವೆಗಳನ್ನ ನೋಡಬೇಕಾಗಿ ಬರುತ್ತದೋ ಅಂತ ಗೋಳಾಡಲು ಶುರುಮಾಡಿದ್ದಾರೆ.  ಒಟ್ಟಾರೆಯಾಗಿ ಈಕೆ ಈಗ ಬಣ್ಣವನ್ನ ಮದುವೆಯಾಗಿದ್ದು ಈಕೆಯ ದಾಂಪತ್ಯ ಜೀವನ ಚೆನ್ನಾಗಿರಲಿ ಅಂತ ನೆಟ್ಟಿಗರು ಮೂದಲಿಸಲು ತೊಡಗಿದ್ದಾರೆ.

ಲಿಖಿತ್​ ರೈ, ಪವರ್​ ಟಿವಿ

RELATED ARTICLES

Related Articles

TRENDING ARTICLES