ಅಲ್ಮಾಟಿಯ (ಕಜಖಿಸ್ತಾನ): ಕಜಖಿಸ್ತಾನದಲ್ಲಿ ಇದೀಗ ಸರ್ವಾಧಿಕಾರಿ ಆಡಳಿತ ತನ್ನ ನಿಜರೂಪ ತೋರಿಸುತ್ತಿದೆ. ಅಲ್ಲಿನ ಸರ್ವಾಧಿಕಾರಿ ಅದ್ಯಕ್ಷ ತನ್ನ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ಯಾರನ್ನೇ ಆದರೂ ಯಾವುದೇ ವಿಚಾರಣೆಯಿಲ್ಲದೆ ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಿದ್ದಾನೆ.
ಕಜಖಿಸ್ತಾನದ ಅದ್ಯಕ್ಷ ಕಾಸಿಮ್-ಜೋಮಾರ್ಟ್ ಟೊಕಾಯೆವ್ ತಮ್ಮ ಆದೇಶದಲ್ಲಿ ಇಂಧನ ಬೆಲೆ ಏರಿಕೆಯ ವಿರುದ್ಧ ಪ್ರತಿಭಟಿಸುತ್ತಿರುವ 20 ಸಾವಿರ ಜನರನ್ನು ಡಕಾಯಿತರು ಎಂದು ಕರೆದು, ಅವರ ಮೇಲೆ ಕಂಡಲ್ಲಿ ಗುಂಡು ಹಾರಿಸುವ ಆದೇಶ ಹೊರಡಿಸಿದ್ದಾನೆ. ಈ ಪ್ರತಿಭಟನೆಯಲ್ಲಿ ಇದುವರೆಗೂ 26 ಶಸ್ತ್ರಸಜ್ಜಿತ ಪ್ರತಿಭಟನಾಕಾರರು ಅಥವ ಅದ್ಯಕ್ಷರು ಕರೆಯುವಂತೆ ಅಪರಾಧಿಗಳು ಮತ್ತು 18 ಭದ್ರತಾ ಅಧಿಕಾರಿಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ಅಲ್ಲಿನ ಆಂತರಿಕ ಸಚಿವಾಲಯ ಹೇಳಿದೆ.