Monday, December 23, 2024

ಬಾಲಯ್ಯ ಬಣ್ಣನೆಗೆ ನಾಚಿ ನೀರಾದ ನ್ಯಾಷನಲ್ ಕ್ರಶ್ಮಿಕಾ

ಸೌತ್​ ದುನಿಯಾದಲ್ಲಿ ಲೇಡಿ ಸೂಪರ್ ಸ್ಟಾರ್ ಯಾರು ಅಂದ್ರೆ ನಯನತಾರಾ ಹೆಸ್ರು ಹೇಳ್ತಿದ್ರು. ಆದ್ರೀಗ ಆ ಟ್ರೆಂಡ್ ಬದಲಾಗೋ ಸಮಯ ಬಂದಿದೆ. ರಶ್ಮಿಕಾ ಅನ್ನೋ ಬ್ಯೂಟಿ ನ್ಯಾಷನಲ್ ಕ್ರಶ್ಮಿಕಾ ಆಗಿ ಟಾಕ್ ಆಫ್ ದ ಟೌನ್ ಆಗಿದ್ದಾರೆ. ನಟಸಿಂಹ ಬಾಲಯ್ಯ ಕೂಡ ಅವ್ರಿಗಾಗಿ ಕನ್ನಡ ಕಲಿತು ಇಂಪ್ರೆಸ್ ಮಾಡಿರೋದು ಇಂಟರೆಸ್ಟಿಂಗ್​.

ಕಿರಿಕ್ ಪಾರ್ಟಿಯಿಂದ ಶುರುವಾದ ರಶ್ಮಿಕಾ ಸಿನಿಯಾನ, ಹಂತ ಹಂತವಾಗಿ ಬೆಳೆದು, ಇಂದು ಮುಂಬೈನ ಸ್ಟುಡಿಯೋಗಳವರೆಗೂ ಬೆಳೆದು ನಿಂತಿದೆ. ಮೊದಲ ಹೆಜ್ಜೆಯಲ್ಲೇ ಬಿಗ್ಗೆಸ್ಟ್ ಸಕ್ಸಸ್ ಕಂಡ ಕೊಡಗಿನ ಬ್ಯೂಟಿ, ಅದಾದ ಬಳಿಕ ಸಾಲು ಸಾಲು ಸಕ್ಸಸ್​ಗಳಿಂದ ದೊಡ್ಡ ಶಿಖರವನ್ನೇ ಏರಿದ್ದಾರೆ.

ಕರ್ನಾಟಕ ಕ್ರಶ್ ಆಗಿ, ನಂತ್ರ ವಿಜಯ್ ದೇವರಕೊಂಡ ಜೊತೆ ನಟಿಸಿದ ಬಳಿಕ ಟಾಲಿವುಡ್ ಕ್ರಶ್ ಆಗಿ ಬದಲಾದ ರಶ್ಮಿಕಾ ಸೌತ್ ಕ್ರಶ್ ಕೂಡ ಆದ್ರು. ಇದೀಗ ಎರಡ್ಮೂರು ಬಾಲಿವುಡ್ ಪ್ರಾಜೆಕ್ಟ್​ಗಳಿಂದ ನ್ಯಾಷನಲ್ ಕ್ರಶ್ ಆಗಿ ಮಿಂಚು ಹರಿಸ್ತಿದ್ದಾರೆ.

ಅದ್ರಲ್ಲೂ ತೆಲುಗು ಸೂಪರ್ ಸ್ಟಾರ್ಸ್​ಗೆ ಈಕೆ ಲಕ್ಕಿ ಚಾರ್ಮ್​. ಇವ್ರು ಚಿತ್ರದಲ್ಲಿದ್ರೆ ಸಾಕು ಅದು ಬಿಗ್ಗೆಸ್ಟ್ ಹಿಟ್ ಆಗೋದ್ರಲ್ಲಿ ಡೌಟೇ ಇಲ್ಲ. ಅದೇ ಕಾರಣದಿಂದ ಟಾಲಿವುಡ್​ನ ಸೂಪರ್ ಸ್ಟಾರ್​ಗಳು ಹಾಗೂ ಸೆನ್ಸೇಷನಲ್ ಡೈರೆಕ್ಟರ್ಸ್​ ಎಲ್ಲಾ ಇವ್ರ ಹಿಂದೆ ಬೀಳ್ತಿದ್ದಾರೆ.

ಸದ್ಯ ಪುಷ್ಪ ಚಿತ್ರ ಪ್ಯಾನ್ ಇಂಡಿಯಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಿದೆ. 300 ಕೋಟಿಗೂ ಅಧಿಕ ಪೈಸಾ ವಸೂಲ್​ನೊಂದಿಗೆ ನೂತನ ದಾಖಲೆ ಬರೆದ ಪುಷ್ಪ, ಡೈರೆಕ್ಟರ್ ಸುಕುಮಾರ್, ನಾಯಕನಟ ಅಲ್ಲು ಅರ್ಜುನ್- ರಶ್ಮಿಕಾ- ಡಾಲಿಯ ಸಿನಿಮಾ ಪ್ಯಾಷನ್​ನ ಕೈಗನ್ನಡಿ ಅನಿಸಿಕೊಂಡಿದೆ.

ಅಂದಹಾಗೆ ಪುಷ್ಪ ಚಿತ್ರ ಒಟಿಟಿಗೂ ಲಗ್ಗೆ ಇಟ್ಟಿದ್ದು, ಥಿಯೇಟರ್​ನಲ್ಲಿ ನೋಡಿರೋರು ಕೂಡ ಮತ್ತೊಮ್ಮೆ ಒಟಿಟಿಯಲ್ಲಿ ವೀಕ್ಷಿಸೋ ಮೂಲಕ ಕ್ರೇಜ್ ಹೆಚ್ಚಿಸಿದ್ದಾರೆ. ಸಮಂತಾ ಐಟಂ ಸಾಂಗ್, ಶ್ರೀವಲ್ಲಿ ಸ್ಪೆಷಲ್ ಸ್ಟೆಪ್ ಜೊತೆ ಬನ್ನಿಯ ಡಿಫರೆಂಟ್ ಸ್ಟೈಲು ಮ್ಯಾನರಿಸಂ ಚಿತ್ರಕ್ಕೆ ಪ್ಲಸ್ ಆಗಿದೆ.

ಇದಕ್ಕೂ ಮಿಗಿಲಾಗಿ ರೀಸೆಂಟ್ ಆಗಿ ಆಹಾ ಒಟಿಟಿಯಲ್ಲಿ ನಡೆಯೋ ಅನ್​ ಸ್ಟಾಪಬಲ್ ಅನ್ನೋ ನಂದಮೂರಿ ಬಾಲಯ್ಯ ಶೋಗೆ ಪುಷ್ಪ ಟೀಂ ಎಂಟ್ರಿ ಕೊಟ್ಟಿತ್ತು. ಅಲ್ಲಿ ರಶ್ಮಿಕಾಗಾಗಿ ಬಾಲಯ್ಯ ಕನ್ನಡ ಕಲಿತು, ಪಂಚ್ ಲೈನ್ಸ್ ಮೂಲಕ ಅವ್ರನ್ನ ಇಂಪ್ರೆಸ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ನ್ಯಾಷನಲ್ ಕ್ರಶ್ಮಿಕಾನ ನಟಸಿಂಹ ಬಣ್ಣಿಸೋ ಪರಿಯನ್ನ ನಾವು ಹೇಳೋದಕ್ಕಿಂತ ನೀವೇ ಒಮ್ಮೆ ಕಣ್ತುಂಬಿಕೊಳ್ಳಿ.

ಒಟ್ಟಾರೆ ನಮ್ಮ ಕನ್ನಡದ ಚೆಲುವೆಯೊಬ್ರು ಹೀಗೆ ಪರಭಾಷೆಯಲ್ಲಿ ಮೋಡಿ ಮಾಡ್ತಿರೋದು ನಿಜಕ್ಕೂ ಇಂಟರೆಸ್ಟಿಂಗ್. ಅವ್ರ ಬಾಲಿವುಡ್ ಜರ್ನಿ ಕೂಡ ಸುಖಕರವಾಗಿ, ಸಕ್ಸಸ್​​ಫುಲ್ ಆಗಿ ಸಾಗಲಿ ಅಂತ ಶುಭ ಕೋರೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES