Saturday, November 2, 2024

ಈ ರಾಷ್ಟ್ರದಲ್ಲಿ ವರ್ಷಕ್ಕೆ 13 ತಿಂಗಳು

ಕೊರೋನಾ ರೂಲ್ಸ್​ ನಡುವೆಯು ಜಗತ್ತು ಹೊಸ ವರ್ಷವನ್ನು ಈಗಾಗ್ಲೆ ಬರ ಮಾಡಿಕೊಂಡಿದೆ. ನ್ಯೂ ಇಯರ್​ ಸೆಲೆಬ್ರಷನ್​ನ ಹ್ಯಾಂಗ್​ ಓವರ್​ನಲ್ಲಿದ್ದ ಯೂತ್ಸ್​ ಈಗ ತಮ್ಮ ದೈನಂದಿನ ಬದುಕಿಗೆ ಮರಳಿದ್ದಾರೆ. ಹಲವರು ತಮ್ಮ ಕೆಲಸ ಕಾರ್ಯಗಳಲ್ಲಿ ವರ್ಷವನ್ನ ಕೂಡ ಬದಲಿಸಲು ಪ್ರಾರಂಭಿಸಿಯಾಗಿದೆ. ಆದರೆ ಕೆಲವು ರಾಷ್ಟ್ರಗಳಲ್ಲಿ ಮತ್ತು ಕೆಲವೊಂದು ಸಂಸ್ಕೃತಿಯಲ್ಲಿ ಕೆಲ ತಿಂಗಳುಗಳ ನಂತರ ಹೊಸ ಬರುತ್ತದೆ, ಆದ್ರೆ ಆ ಕೆಲ ಸಂಸ್ಕೃತಿಗಳಲ್ಲಿಯೂ ಕೂಡ ವರ್ಷಕ್ಕೆ 12 ತಿಂಗಳುಗಳು ಮಾತ್ರ ಇರುತ್ತದೆ. ಆದ್ರೆ ಅದೊಂದು ರಾಷ್ಟ್ರದಲ್ಲಿ ಮಾತ್ರ ವರ್ಷಕ್ಕೆ 13 ತಿಂಗಳು ಹಾಗು ಹೊಸ ವರ್ಷ ಸೆಪ್ಟೆಂಬರ್​ 11ಕ್ಕೆ ಆಚರಿಸಲಾಗುತ್ತದೆ. ಅದ್ಯಾವುದಪ್ಪ ಆ ದೇಶ ಅನ್ನೋ ಅನುಮಾನ ನಿಮ್ಮನ್ನ ಕಾಡ್ತಾ ಇರಬಹುದು.. ಆ ರಾಷ್ಟ್ರದ ಹೆಸರೇ ಇಥಿಯೋಪಿಯಾ.

ಇಥಿಯೋಪಿಯಾ ಈ ದೇಶ ತನ್ನ ಚಿತ್ರ- ವಿಚಿತ್ರ ಆಚರಣೆಗಳಿಂದಾಗಿ ವಿಶ್ವದ ಗಮನವನ್ನ ಸೆಳೆದಿದೆ. ಇಂದಿಗೂ ಕೂಡ ಈ ದೇಶದ ಆಚರಣೆಗಳು ಹಾಗು ಇಲ್ಲಿನ ಸಂಸ್ಕೃತಿಯ ಬಗ್ಗೆ ಹಲವು ಸಂಶೋಧಕರು ಅಧ್ಯಯನವನ್ನ ನಡೆಸುತ್ತಿದ್ದಾರೆ. ಅದರಲ್ಲೂ ಈ ರಾಷ್ಟ್ರದ ಕೆಲ ಭಾಗಗಳಲ್ಲಿ ಇರುವ ಆಚರಣೆಗಳನ್ನ ಗಮನಿಸಿದರೆ ಅದೆಂತವರಾದ್ರು ಕೆಲ ಕಾಲ ಬೆಚ್ಚಿ ಬೀಳೋದು ಕೂಡ ಉಂಟು, ಈ ರಾಷ್ಟ್ರದಲ್ಲಿ ಸುಮಾರು 85 ಲಕ್ಷ ಜನ ವಾಸಿಸುತ್ತಿದ್ದ ಆಫ್ರಿಕಾದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನ ಹೊಂದಿದೆ ಎರಡನೇ ದೇಶವಾಗಿ ಗುರುತಿಸಿಕೊಂಡಿದೆ. ಈ ಇಥಿಯೋಪಿಯಾ ದೇಶ ಮೇಲ್ನೋಟಕ್ಕೆ ನೋಡೋದಕ್ಕೆ ಬಹಳ ಸುಂದವಾಗಿ ಕಾಣಿಸುತ್ತೆ, ಆದ್ರೆ ಇಲ್ಲಿನ ಕೆಲ ಬುಡಕಟ್ಟು ಜನಾಂಗ ಸೇರಿದ ಹಾಗೆ ಹಲವು ಜನರು ಒಂದು ತುತ್ತಿನ ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಇಲ್ಲಿ ವ್ಯಾಪಕವಾಗಿದೆ, ಇಲ್ಲಿ ಮತ್ತೊಂದು ವಿಚಾರ ಅಂದ್ರೆ ಈ ಆಫ್ರಿಕಾ ದೇಶಗಳ ಅಭಿವೃದ್ಧಿಗೆ ವಿಶ್ವ ಸಂಸ್ಥೆ ಹಣ ಬಿಡುಗಡೆ ಮಾಡಿದ್ರು ಅದ್ರಿಂದ ಒಂದು ರೂಪಾಯಿ ಕೂಡ ಅಲ್ಲಿನ ಜನಕ್ಕೆ ತಲುಪಿಲ್ಲ ಅಂದ್ರೆ ನಂಬಲೇ ಬೇಕು..

ಹೀಗೆ ಮೇಲ್ನೋಟಕ್ಕೆ ಸುಂದರ ದೇಶದಂತೆ ಕಾಣುವ ಇಥಿಯೋಪಿಯಾ ತನ್ನೋಡಲೊಳಗೆ ಸಾಕಷ್ಟು ಬಡತನವನ್ನ ಕೂಡ ತುಂಬಿಟ್ಟು ಕೊಂಡಿದೆ. ಆದ್ರೆ ಈ ದೇಶ ಎಷ್ಟೇ ಬಡತನವಿರಲಿ, ಇಲ್ಲಿನ ಜನ ಎಷ್ಟೇ ಕಷ್ಟದಲ್ಲಿ ಇರಲಿ ಅವರು ತಮ್ಮ ಸಂಸ್ಕೃತಿಯನ್ನ ಎಂದಿಗೂ ಕೂಡ ಬಿಟ್ಟು ಕೊಟ್ಟಿಲ್ಲ, ಈ ದೇಶ ತನ್ನ ಹೊಸ ವರ್ಷದ ಆಚರಣೆ ಸೇರಿದ ಹಾಗೆ ಹಲವು ಆಚರಣೆಗಳಲ್ಲಿ ಸಾಕಷ್ಟು ಭಿನ್ನವಾಗಿದ್ದು ಇದೇ ಕಾರಣಕ್ಕೆ ಇವತ್ತು ಸಾಕಷ್ಟು ಸುದ್ಧಿ ಮಾಡ್ತಾ ಇದೆ. ಹೌದು ಆಫ್ರಿಕನ್ ದೇಶವಾದ ಇಥಿಯೋಪಿಯಾದ ಕ್ಯಾಲೆಂಡರ್ ಪ್ರಪಂಚಕ್ಕಿಂತ 7 ವರ್ಷಗಳು, 3 ತಿಂಗಳ ಹಿಂದೆ ಇದೆ. ಈ ದೇಶವು ಇತರ ಹಲವು ವಿಷಯಗಳಲ್ಲಿ ಬಹಳ ವಿಭಿನ್ನವಾಗಿದೆ, ವರ್ಷದ 12 ರ ಬದಲಿಗೆ 13 ತಿಂಗಳುಗಳಿವೆ.

ಸದ್ಯಕ್ಕೆ ಇಡೀ ಜಗತ್ತು ಗ್ರೆಗೋರಿಯನ್ ಕ್ಯಾಲೆಂಡರ್​ ಅನ್ನ ಬಳಸುತ್ತಿದೆ. ಅಸಲಿಗೆ ಈ ಕ್ಯಾಲೆಂಡರ್​ ಅನ್ನ 1582 ರಲ್ಲಿ ಪ್ರಾರಂಭಿಸಲಾಯಿತು. ಆದರೆ ಇದಕ್ಕೂ ಮೊದಲು ಜೂಲಿಯನ್ ಕ್ಯಾಲೆಂಡರ್ ಅನ್ನು ಬಳಸಲಾಗುತ್ತಿತ್ತು, ಆದರೆ ಯಾವಗ ಈ ಹೊಸ ಗ್ರೆಗೋರಿಯನ್​ ಕ್ಯಾಲೆಂಡರ್​ ಅನ್ನ ಸ್ಥಾಪಿಸಲಾಯಿತೋ ಆಗಲೇ ಕ್ಯಾಥೋಲಿಕ್ ಕ್ರಿಶ್ಚಿಯನ್​ ಸಮುದಾಯ ಹಾಗು ಕ್ಯಾಥೋಲಿಕ್​ ಚರ್ಚ್​ಗಳು ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನ ಅನುಸರಿಸೋದಕ್ಕೆ ಶುರು ಮಾಡಿದ್ವು, ಆದರೆ ಅನೇಕ ದೇಶಗಳು ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನ ವಿರೋಧಿಸಿದ್ರು ಕೂಡ ಕೊನೆಗೆ ಇದೇ ಕ್ಯಾಲೆಂಡರ್​ ಅನ್ನ ಒಪ್ಪಿಕೊಂಡಿದ್ದಾರೆ. ಆದರೆ ಇದಕ್ಕೆ ಇಥಿಯೋಪಿಯಾ ಮೊದಲು ಯಾವ ನಿಲುವನ್ನ ತೆಳೆದಿತ್ತೋ ಅದನ್ನ ಇಂದಿನ ವರೆಗೂ ಪಾಲಿಸಿಕೊಂಡು ಬಂದಿದೆ.

ಅಸಲಿಗೆ ಇಥಿಯೋಪಿಯಾದಲ್ಲಿ ರೋಮನ್ ಚರ್ಚ್ ಸಂಪ್ರದಾಯ ಇದೆ, ಇಲ್ಲಿನ ಆರ್ಥೊಡಾಕ್ಸ್ ಚರ್ಚ್ ಜೀಸಸ್ ಕ್ರೈಸ್ಟ್ ಅವರು ಕ್ರಿಸ್ತ ಪೂರ್ವ 7 ರಲ್ಲಿ ಜನಿಸಿದ್ದು, ಹಾಗಾಗಿ ಇಲ್ಲಿಂದಲೇ ಕ್ಯಾಲೆಂಡರ್ ಆರಂಭವಾಗಿದೆ ಎಂಬುವುದು ಈ ಜನರ ನಂಬಿಕೆ. ಆದರೆ ಉಳಿದ ದೇಶಗಳಲ್ಲಿ ಜಿಸಸ್​ ಕ್ರೈಸ್ಟ್​ ಕ್ರಿ.ಶ.1 ರಲ್ಲಿ ಜನಿಸಿದ್ದಾರೆ ಅಂತ ನಂಬಿಕೊಂಡು ಬಂದಿದ್ದು, ಈ ಕ್ಯಾಲೆಂಡರ್​ಗಳನ್ನೇ ಅನುಸರಿಸಿಕೊಂಡು ಬರಲಾಗುತ್ತಿದೆ. ಇಥಿಯೋಪಿಯನ್ ಕ್ಯಾಲೆಂಡರ್ನಲ್ಲಿ ವರ್ಷದಲ್ಲಿ 13 ತಿಂಗಳುಗಳಿವೆ. ಇವುಗಳಲ್ಲಿ 12 ತಿಂಗಳುಗಳು 30 ದಿನಗಳನ್ನು ಹೊಂದಿರುತ್ತವೆ. ಕೊನೆಯ ತಿಂಗಳನ್ನು ಪಗ್ಯುಮೆ ಎಂದು ಕರೆಯಲಾಗುತ್ತದೆ, ಇದರಲ್ಲಿ ಐದು ಅಥವಾ ಆರು ದಿನಗಳಿವೆ. ಇನ್ನು ಈ ಜನರ ಹೊಸ ವರ್ಷದ ಆಚರಣೆಗೆ ಇದುವರೆಗೆ ಕೂಡ ಯಾವುದೇ ವೈಜ್ಞಾನಿಕ ಕಾರಣಗಳು ಅಡ್ಡಿ ಬಂದಿಲ್ಲ.

ಅದೇನೇ ಇರ್ಲಿ ಇಥಿಯೋಪಿಯಾದ ಜನ್ರ ತಮಗೆಷ್ಟೇ ಕಷ್ಟ ಸಂಕಟಗಳಿದ್ರು, ಯಾರದ್ದೋ ಲಾಭಕ್ಕಾಗಿ ತಮ್ಮ ಸಂಸ್ಕೃತಿಯನ್ನ ಮಾರಿಕೊಳ್ಳದೆ ಬದುಕುತ್ತಿದ್ದಾರೆ, ಅವರ ಆಚರಣೆ ಜಗತ್ತಿಗೆ ವಿಚಿತ್ರ ಎನಿಸಿದರು ಆ ಜನರು ತಮ್ಮ ಸಂಸ್ಕೃತಿ ಹಾಗು ಆಚರಣೆಯ ಮೇಲೆ ಅವರಿಗಿರುವ ನಂಬಿಕೆ ಹಾಗು ಶ್ರದ್ಧೆಯನ್ನ ನಿಜವಾಗಿಯೂ ಮೆಚ್ಚಲೇ ಬೇಕಿದೆ.

ಲಿಖಿತ್​​ ರೈ, ಪವರ್​​ ಟಿವಿ

RELATED ARTICLES

Related Articles

TRENDING ARTICLES