ಬೆಂಗಳೂರು : ನೈಟ್ ಕರ್ಫ್ಯೂ ನಿಂದ ಯಾವುದೇ ಪ್ರಯೋಜನವಿಲ್ಲವೆಂದು WHO ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅಭಿಪ್ರಾಯ ಪಟ್ಟಿದ್ದಾರೆ.
ಭಾರತದಲ್ಲಿ ರಾತ್ರಿ ಕರ್ಫ್ಯೂಗಳನ್ನು ಜಾರಿಗೆ ತರುವ ಹಿಂದೆ ಯಾವುದೇ ವಿಜ್ಞಾನವಿಲ್ಲ, ರಾತ್ರಿ ಕರ್ಫ್ಯೂ ಕ್ರಮವನ್ನುವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ತಳ್ಳಿ ಹಾಕಿದ್ದಾರೆ. .ಸರ್ಕಾರಗಳು ಸಾರ್ವಜನಿಕ ಆರೋಗ್ಯ ಸುಧಾರಿತ ಕ್ರಮಗಳ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದರು.
ಭಾರತವು ಈ ಅಲೆಗೆ ಸಿದ್ಧರಾಗಿರಬೇಕು, ಆದರೆ ಭಯಭೀತರಾಗಿರಬಾರದು, ಇದು ಮತ್ತೊಂದು ಅಲೆಯ ಪ್ರಾರಂಭದಂತೆ ಕಾಣುತ್ತದೆ,ಹಾಗಾಗಿ ಆದಷ್ಟು ಈ ಸಾಮಾಜಿಕ ಮತ್ತು ರಾಜಕೀಯ ಸಭೆಗಳನ್ನು ಕಡಿಮೆ ಮಾಡಬೇಕು ಎಂದು ಟಿವಿ ಸಂದರ್ಶನದಲ್ಲಿ ಸೌಮ್ಯ ಸ್ವಾಮಿನಾಥನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.