Wednesday, January 22, 2025

ಪಾಕಿಸ್ತಾನದ​​ ಕ್ರಿಕೆಟರ್​ಗೆ ಧೋನಿ ಗಿಫ್ಟ್

ಪಾಕಿಸ್ತಾನ ತಂಡದ ಬೌಲರ್ ಹ್ಯಾರಿಸ್ ರೌಫ್‍ಗೆ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನ ಟೀ-ಶರ್ಟ್‍ನ್ನು ಉಡುಗೊರೆಯಾಗಿ ನೀಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ವಲಯದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಇವರನ್ನು ಕ್ರಿಕೆಟ್ ಲೋಕದಲ್ಲೇ ಶ್ರೇಷ್ಠ ನಾಯಕನೆಂದು ಗುರುತಿಸಲಾಗಿದೆ. ಈಗ ಧೋನಿ ತಮ್ಮ ಟೀ-ಶರ್ಟ್‍ನ್ನು ಪಾಕಿಸ್ತಾನದ ಆಟಗಾರನಿಗೆ ಉಡುಗೊರೆಯಾಗಿ ನೀಡಿರುವುದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

 ಶುಕ್ರವಾರ ಧೋನಿ ಸಹಿ ಮಾಡಿದ ಸಿಎಸ್‍ಕೆ ಜರ್ಸಿಯೊಂದನ್ನು ಪಾಕಿಸ್ತಾನ ತಂಡದ ಆಟಗಾರ ಹ್ಯಾರಿಸ್ ರೌಫ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕ್ರಿಕೆಟ್ ಲೋಕದ ಕ್ಯಾಪ್ಟನ್ ಕೂಲ್ ಎಂದೇ ಹೆಸರುವಾಸಿಯಾಗಿರುವ ಎಂ.ಎಸ್.ಧೋನಿಯವರು ಸಿಎಸ್‍ಕೆ ತಂಡದ ಟೀ-ಶರ್ಟ್‍ನ್ನು ನನಗೆ ನೀಡಿದ್ದಾರೆ. ಈ ಉಡುಗೊರೆಯನ್ನು ನಾನು ಖುಷಿಯಿಂದ ಸ್ವೀಕರಿಸಿದ್ದೇನೆ, ಎಂದು ಹ್ಯಾರಿಸ್ ರೌಫ್ ಟ್ವೀಟ್ ಮಾಡಿದ್ದಾರೆ.​​​​​

RELATED ARTICLES

Related Articles

TRENDING ARTICLES