Monday, January 27, 2025

ರಿಯಾದ್​ನಲ್ಲಿ ಮೈನವಿರೇಳಿಸುವ ಮೊಟೊಸ್ಪೋರ್ಟ್ಸ್

ರಿಯಾದ್ (ಸೌದಿ ಅರೇಬಿಯಾ): ಸೌದಿ ಅರೇಬಿಯಾದ ರಿಯಾದ್​ನಲ್ಲಿ ನಡೆಯುತ್ತಿರುವ ಹೀರೊಮೊಟೊಸ್ಪೋರ್ಟ್​ ಟೀಮ್ ರ್ಯಾಲಿಯ 6ನೆಯ ಹಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. 404 ಕಿಲೋಮಿಟರ್ ಇದ್ದ 6ನೆಯ ಹಂತರ ಮೊಟೊರ್ಯಾಲಿಯ ಕೊನೆಯ 100 ಕಿಲೋಮಿಟರ್ ರಸ್ತೆ ಅತ್ಯಂತ ದುರ್ಗಮವಾಗಿತ್ತು ಎನ್ನಲಾಗಿದೆ.

ಇದೇ ಬೈಕ್ ರ್ಯಾಲಿಯ ಮಾರ್ಗದಲ್ಲಿ ಹಿಂದಿನ ದಿನವಷ್ಟೇ ಕಾರ್ ಮತ್ತು ಟ್ರಕ್​ ರ್ಯಾಲಿಯೂ ನಡೆದಿದ್ದರಿಂದ ಟ್ರಕ್ಕುಗಳು ಈ ರಸ್ತೆಯನ್ನು ಅತ್ಯಂತ ಹೆಚ್ಚು ಹಾಳು ಮಾಡಿದ್ದವು. ಅದರ ಜೊತೆಗೆ ಇಲ್ಲಿ ಮಳೆಯೂ ಆಗಿದ್ದರಿಂದ ಈ ಮಾರ್ಗ ಬೈಕರ್​ಗಳಿಗೆ ಅತ್ಯಂತ ಕಠಿಣ ಪರೀಕ್ಷೆಯನ್ನು ಒಡ್ಡಿತು ಎಂದು ವಿಶ್ಲೇಷಿಸಲಾಗಿದೆ. ಜಿಪಿ ಕ್ಲಾಸ್ ರೈಡರ್ಸ್​ಗಳಾದ ಜೊಕ್ಯಿಮ್ ರೊಡ್ರಿಗ್ರಸ್ ಹಾಗೂ ಅರೋನ್ ಮಾರೆ ಕ್ರಮವಾಗಿ 9 ಮತ್ತು 21ನೆಯ ಕ್ರಮಾಂಕದಲ್ಲಿ ಪೂರ್ಣಗೊಳಿಸಿ ಮುಂದಿನ ಸುತ್ತಿಗೆ ಮುನ್ನಡೆದರು.

RELATED ARTICLES

Related Articles

TRENDING ARTICLES