ಪಂಜಾಬ್: ಕಡೆಗೂ ಪ್ರಧಾನಿ ಮೋದಿಯವರ ಜನವರಿ 5ರ ಪಂಜಾಬ್ ಭೇಟಿಯ ವೇಳೆ ಭದ್ರತಾ ವೈಫಲ್ಯವಾಗಿದೆ ಎಂಬ ಆರೋಪದ ತನಿಖಾವರದಿ ಬರಲು ಇನ್ನು ಎರಡು ದಿನ ಬಾಕಿ ಇರುವಂತೆಯೇ, ಪಂಜಾಬ್ ಪೊಲೀಸ್ ಮುಖಂಡನ ತಲೆದಂಡವನ್ನು ಸರ್ಕಾರ ಪಡೆದುಕೊಂಡಿದೆ. ಮೋದಿ ಭೇಟಿಯ ವೇಳೆಯಿದ್ದ 1987ನೇ ಬ್ಯಾಚಿನ IPS ಅಧಿಕಾರಿ ವೀರೆಶ್ ಕುಮಾರ್ ಭವರಾ ಅವರನ್ನು ಈಗಿರುವ DGP ಸಿದ್ದಾರ್ಥ ಚಟ್ಟೋಪಾದ್ಯಾಯ ಅವರ ರಾಜೀನಾಮೆ ಪಡೆದು ಅವರ ಜಾಗದಲ್ಲಿ ನೇಮಕ ಮಾಡಲಾಗಿದೆ.
ಹುದ್ದೆ ಭರ್ತಿ ಸಮೀತಿಯ ಶಿಫಾರಸಿನ ಮೇರೆಗೆ DGP (ಪೊಲೀಸ್ ಮುಖ್ಯಸ್ಥರು) ಹುದ್ದೆಗೆ 3 ಜನರನ್ನು ಪರಿಗಣಿಸಲಾಗಿತ್ತು. ದಿನಕರ್ ಗುಪ್ತ, ಪ್ರಭೋದ್ ಕುಮಾರ್ ಮತ್ತು ಭವರಾ ಈ ಮೂವರಲ್ಲಿ ಕೊನೆಗೆ ಭವರಾ ಅವರನ್ನು DGP ಹುದ್ದೆಗೆ ಆಯ್ಕೆ ಮಾಡಲಾಯಿತು. ಮೋದಿಯವರ ಪ್ರವಾಸದಲ್ಲಿ ಪೊಲೀಸ್ ಭದ್ರತಾ ವೈಫಲ್ಯವಾಗಿದೆಯೋ ಇಲ್ಲವೊ ಎಂಬದು ನಿರ್ಣಯಿಸಲು ನಿಯಮಿಸಿರುವ ಸಮೀತಿಯು ಇನ್ನೆರಡು ದಿನಗಳಲ್ಲಿ ತನ್ನ ವರದಿ ನೀಡಲಿದೆ. ಆದರೆ ಅಷ್ಟರಲ್ಲಿಯೇ DGP ಯವರ ತಲೆದಂಡವನ್ನು ಪಡೆಯಲಾಗಿದೆ.