Wednesday, January 22, 2025

55 ಗಂಟೆಗಳ ಕಾಲ ಕರುನಾಡು ಸ್ತಬ್ಧ : ಏನಿರುತ್ತೆ, ಏನಿರಲ್ಲ ?

ರಾಜ್ಯದಲ್ಲಿ ಕ್ರೂರಿ ಕೊರೋನಾದ ರೌದ್ರನರ್ತನಕ್ಕೆ ಇನ್ನೂ ಬ್ರೇಕ್​ ಬಿದ್ದಿಲ್ಲ. ಈ ಹೆಮ್ಮಾರಿ ನಿಯಂತ್ರಣಕ್ಕೆ ಸರ್ಕಾರ ವೀಕೆಂಡ್ ಲಾಕ್ ಬ್ರಹ್ಮಾಸ್ತ್ರ ಪ್ರಯೋಗಿಸಿದೆ‌. ಬೆಂಗಳೂರು ಸೇರಿದಂತೆ ಇಡೀ ರಾಜ್ಯ ಬರೋಬ್ಬರಿ 55 ಗಂಟೆಗಳು ಸ್ತಬ್ಧವಾಗಲಿದೆ. ಅಗತ್ಯ ಸೇವೆಗಳು ಹೊರತುಪಡಿಸಿ ಎಲ್ಲವೂ ಲಾಕ್ ಆಗಿದ್ದು, ಅನಗತ್ಯವಾಗಿ ಓಡಾಟ ನಡೆಸಿದರೆ ಲಾಕ್ ಆಗೋದು ಫಿಕ್ಸ್.

ಹೌದು, ವೀಕೆಂಡ್​​ನಲ್ಲಿ ಮೋಜು ಮಸ್ತಿ ಮಾಡುವ ಜನರೇ ಎಚ್ಚರ ಎಚ್ಚರ. ಕೊರೋನಾ ಆರ್ಭಟಕ್ಕೆ ಬ್ರೇಕ್​ ಹಾಕ್ಬೇಕಂದ್ರೆ ನೀವು ನಿಮ್ಮ ವೀಕೆಂಡ್​ ಮೋಜು ಮಸ್ತಿಗೆ ಬ್ರೇಕ್​ ಹಾಕೋದು ಅನಿವಾರ್ಯ. ಹೀಗಾಗಿ ನೆನ್ನೆ ರಾತ್ರಿ 8 ರಿಂದ ಕರುನಾಡಿಗೆ ಸರ್ಕಾರ ಬೀಗ ಜಡಿದಿದೆ. ಅಗತ್ಯ ಸೇವೆಗಳಷ್ಟೇ ಲಭ್ಯವಿರಲಿದೆ,

ಹೌದು, ರಾಜ್ಯ ಸರ್ಕಾರ ಮೂರನೇ ಅಲೆ ನಿಯಂತ್ರಣಕ್ಕೆ ಶುಕ್ರವಾರ ರಾತ್ರಿ 8 ರಿಂದ ಸೋಮವಾರ ಬೆಳಗ್ಗೆ 5 ರವರೆಗೆ ವೀಕೆಂಡ್ ಲಾಕ್ ಅಸ್ತ್ರ ಪ್ರಯೋಗ ಮಾಡಿದೆ. ಸೋಮವಾರ ಬೆಳಗ್ಗೆ 5 ರವರೆಗೆ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿ ಇರಲಿದೆ. ಅಗತ್ಯ ವಸ್ತುಗಳ ಪೂರೈಕೆ ಹಾಗೂ ವೈದ್ಯಕೀಯ ಸೇವಾ ವಲಯ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ. ಮೆಟ್ರೋ ಕೆಎಸ್ಆರ್‌ಟಿಸಿ ಓಡಾಟ ನಡೆಸಲಿದ್ದು, ಬಿಎಂಟಿಸಿ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ. ಸೂಕ್ತ ಕಾರಣವಿರದೆ, ದಾಖಲೆ ಇರದೆ ರಸ್ತೆಗಿಳಿದರೆ ನೀವು ಪೊಲೀಸರ ಹತ್ತಿರ ಲಾಕ್​​ ಆಗೋದು ಪಕ್ಕ.

ಲಾಕ್​​ಡೌನ್​​ ವೇಳೆ ಏನಿರುತ್ತೆ..?

  • ಶೇ.10ರಷ್ಟು ಬಸ್​​ಗಳು ಮಾತ್ರ ರಸ್ತೆಗೆ ಇಳಿಯಲಿವೆ
  • ಏರ್‌ಪೋರ್ಟ್ ಬಸ್​​​ಗಳಿಗೆ ಯಾವುದೇ ತೊಡಕಿಲ್ಲ
  • ಶೇ.10ರಷ್ಟು ಮಾತ್ರ BMTC ಸಂಚಾರ
  • ಜನ ದಟ್ಟಣೆಗೆ ಅನುಸಾರವಾಗಿ KSRTC ಸೇವೆ
  • ಕೊವಿಡ್ ರೂಲ್ಸ್ ಫಾಲೋ ಮಾಡಿ KSRTC ಬಸ್ ಸಂಚಾರ
  • ವೀಕೆಂಡ್​ನಲ್ಲಿ 20 ನಿಮಿಷಕ್ಕೊಂದು ಮೆಟ್ರೋ
  • ಕರ್ಫ್ಯೂ ವೇಳೆ ಮೆಟ್ರೋ ಎಂದಿನಂತೆ ಸಂಚಾರ
  • ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ಮೆಟ್ರೋ ಕಾರ್ಯಾಚರಣೆ
  • ಹಾಲು, ಮಾಂಸ, ತರಕಾರಿಗೆ ಯಾವುದೇ ತೊಡಕಿಲ್ಲ
  • ಕಟ್ಟಡ ನಿರ್ಮಾಣ, ಕಾರ್ಖಾನೆಗಳಿಗೆ ಅನುಮತಿ
  • ಬ್ಯಾಂಕ್, ಇನ್ಶೂರೆನ್ಸ್ ಸಂಸ್ಥೆ, ಮಾಧ್ಯಮಕ್ಕೆ ಅನುಮತಿ
  • ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿ ಕೆಲಸಕ್ಕೆ ಅನುಮತಿ
  • ಇ-ಕಾಮರ್ಸ್ ಡೆಲಿವರಿ ಸೇವೆಗೆ ಅನುಮತಿ
  • ಆಸ್ಪತ್ರೆ, ಮೆಡಿಕಲ್, ಆ್ಯಂಬುಲೆನ್ಸ್ ಸೇವೆ ಎಂದಿನಂತೆ

ಲಾಕ್​​ಡೌನ್​​ ವೇಳೆ ಏನಿರಲ್ಲ..?

  • ಓಲಾ-ಊಬರ್, ಆಟೋ​ ಓಡಾಟಕ್ಕಿಲ್ಲ ಅವಕಾಶ
  • ದೂರದಿಂದ ಬರುವ ಪ್ರಯಾಣಿಕರಿಗೆ ತೊಂದರೆಯ ಸಾಧ್ಯತೆ
  • ಹೋಟೆಲ್, ರೆಸ್ಟೋರೆಂಟ್, ಬಾರ್, ಪಬ್ ಬಂದ್, ಪಾರ್ಸಲ್​ಗಷ್ಟೇ ಅವಕಾಶಗಳಿರುವುದು
  • ಶಾಲೆ, ಕಾಲೇಜುಗಳು ಸಂಪೂರ್ಣ ಬಂದ್
  • ಸಾರ್ವಜನಿಕ ಸ್ಥಳಗಳು ಕಂಪ್ಲೀಟ್ ಬಂದ್
  • ಸಭೆ, ಸಮಾರಂಭ ಸೇರಿ ಎಲ್ಲಾ ಕಾರ್ಯಕ್ರಮಗಳಿಗೆ ನಿರ್ಬಂಧ
  • ಸಲೂನ್, ಬ್ಯೂಟಿಪಾರ್ಲರ್‌ ಕಂಪ್ಲೀಟ್ ಬಂದ್
  • ದೇವಸ್ಥಾನ, ಚರ್ಚ್, ಮಸೀದಿ ಸೇರಿ ಧಾರ್ಮಿಕ ಸ್ಥಳಗಳು ಬಂದ್
  • ವೀಕೆಂಡ್ ಲಾಕ್ ಡೌನ್​ ಕಾರಣದಿಂದ ನೆನ್ನೆ ರಾತ್ರಿ‌ 8 ರಿಂದಲೇ ಎಲ್ಲಾ ಫ್ಲೈಓವರ್​ಗಳು ಕ್ಲೋಸ್ ಆಗಿವೆ.
  • ಅನಗತ್ಯವಾಗಿ ಹೊರಗಡೆ ಬಂದರೆ ಪೊಲೀಸರು ಶಿಸ್ತಿನ ಕ್ರಮ ಕೈಗೊಳ್ಳಲಿದ್ದಾರೆ. ಇನ್ನೂ ಕೆಎಸ್ಆರ್‌ಟಿಸಿ
  • ಬೇಡಿಕೆಗೆ ತಕ್ಕಂತೆ ಮಾತ್ರ ಸೇವೆ ನೀಡಲು ತೀರ್ಮಾನಿಸಲಾಗಿದೆ.
  • ಒಟ್ಟಿನಲ್ಲಿ ರಾಜ್ಯದಲ್ಲಿ ಮೂರನೇ ಅಲೆ ಕಾಟದಿಂದ ಪಾರಾಗಲು, ಮಹಾಮಾರಿಯನ್ನ ಕಟ್ಟಿಹಾಕಲು ಸರ್ಕಾರ ಪಣ ತೊಟ್ಟಿದೆ. ಆದ್ರೆ ಈ ವೀಕೆಂಡ್ ಲಾಕ್​ನ ಎಷ್ಟರ ಮಟ್ಟಿಗೆ ಜನ ಸಕ್ಸಸ್ ಮಾಡುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES