Thursday, December 19, 2024

ಮಾನವೀಯತೆ ಮೆರೆದ ಹುಬ್ಬಳ್ಳಿ ಪೊಲೀಸರು

ಹುಬ್ಬಳ್ಳಿ: ಕರ್ಪ್ಯೂ ಮಧ್ಯದಲ್ಲಿ ಹುಬ್ಬಳ್ಳಿ ನಗರದಲ್ಲಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಕುಂದಾಪುರ ಮೂಲದ ನಾಗರಾಜ ಎಂಬ ಯುವಕ ಹುಬ್ಬಳ್ಳಿಗೆ ಬಂದಿದ್ದು, ಈ ವೇಳೆ ನಗರದ ಚೆನ್ನಮ್ಮ ವೃತ್ತದ ಬಳಿ ಯುವಕ ಮೂರ್ಛೆ ರೋಗದಿಂದ ಕುಸಿದು ಬಿದ್ದಿದ್ದ.

ಇದನ್ನು ಕಂಡ ಪೊಲೀಸ್ ಸಿಬ್ಬಂದಿ ಯುವಕನಿಗೆ ಕೀ ಕೊಟ್ಟು, ಕೈ ಉಜ್ಜಿ ಪ್ರಥಮ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಹುಬ್ಬಳ್ಳಿಯ ಉಪನಗರ ಪೊಲೀಸ್ ಸಿಬ್ಬಂದಿಯ ಈ ಮಾನವೀಯತೆಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸಾರ್ವಜನಿಕರ ಜೊತೆ ಇದೇ ರೀತಿಯ ಪ್ರೀತಿ ತೋರಿಸಿದರೆ ಜನರಿಗೆ ಪೊಲೀಸರ ಬಗ್ಗೆಯಿರುವ ಭಯ ಹೋಗಿ, ಸಾರ್ವಜನಿಕರು ಮತ್ತು ಪೊಲೀಸರ ಮಧ್ಯ ಒಂದು ಸುಮಧುರ ಬಾಂಧವ್ಯ ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ.

RELATED ARTICLES

Related Articles

TRENDING ARTICLES