Sunday, January 19, 2025

ಚಾಮರಾಜನಗರ ಗಡಿಯ ಜಮೀನಿನಲ್ಲಿ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ

ಚಾಮರಾಜನಗರ: ತಮಿಳುನಾಡಿನ ಕೊಚ್ಚಿಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಚಾಮರಾಜನಗರ ಗಡಿಯಲ್ಲಿ ತುರ್ತು ಲ್ಯಾಂಡಿಂಗ್ ಆದ ಘಟನೆ ನಡೆದಿದೆ. ಪ್ರತಿಕೂಲ ಹವಾಮಾನದಿಂದಾಗಿ ಕೊಚ್ಚಿಗೆ ತೆರಳುತ್ತಿದ್ದ ಖಾಸಗಿ ಹೆಲಿಕಾಪ್ಟರ್ ಚಾಮರಾಜನಗರ ಗಡಿಭಾಗವಾದ ಸತ್ಯಮಂಗಲಂನ ಕಡಂಬೂರ್ ಎಂಬಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ. ಈ ಹೆಲಿಕ್ಯಾಪ್ಟರ್ ಸಿಎಸ್ ಏವಿಯೇಷನ್‌ ಎಂಬ ಕಂಪನಿಗೆ ಸೇರಿದ್ದು ಎನ್ನಲಾಗಿದೆ.

ಬೆಂಗಳೂರಿನಿಂದ ತೆರಳಿದ್ದ ಭರತ್, ಶೀಲಾ ಭರತ್, ಹೆಲಿಕಾಪ್ಟರ್ ಎಂಜಿನಿಯರ್ ಅಂಕಿತ್ ಸಿಂಗ್, ಪೈಲಟ್- ಜಸ್ಪಾಲ್ ಕೂದಲೆಳೆಯಲ್ಲಿ ಈ ದುರ್ಘಟನೆಯಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ ಕೊಚ್ಚಿ ಆಸ್ಪತ್ರೆಯೊಂದಕ್ಕೆ ತೆರಳುವಾಗ ಪ್ರತಿಕೂಲ ಹವಾಮಾನದಿಂದ ಈ ಘಟನೆ ನಡೆದಿದೆ. ಕಡಂಬೂರಿನ ಜಮೀನೊಂದರಲ್ಲಿ ಹೆಲಿಕ್ಯಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿದ್ದು, ಹೆಲಿಕ್ಯಾಪ್ಟರ್​ನಲ್ಲಿದ್ದ ಎಲ್ಲರೂ ಸುರಕ್ಷಿತರಾಗಿದ್ದಾರೆ. ಹೆಲಿಕಾಪ್ಟರ್ ಇಳಿದಿದ್ದೇ ತಡ ಆತಂಕದಲ್ಲಿ ಸುತ್ತಮುತ್ತಲಿನ ರೈತರು ಅದನ್ನು ಮುತ್ತಿಕೊಂಡು, ಹೆಲಿಕ್ಯಾಪ್ಟರ್​ನಿಂದ ಇಳಿದವರ ಯೋಗಕ್ಷೇಮ ವಿಚಾರಿಸಿದ್ದಾರೆ.

RELATED ARTICLES

Related Articles

TRENDING ARTICLES