Monday, December 23, 2024

ಪಾಕಿಸ್ತಾನದ ಮುರ್ರೆ ಹಿಲ್​ಸ್ಟೇಷನ್​ನಲ್ಲಿ ಭಾರಿ ಹಿಮಪಾತ; 21 ಪ್ರವಾಸಿಗರ ಸಾವು

ಇಸ್ಲಾಮಾಬಾದ್ (ಪಾಕಿಸ್ತಾನ್): ಪಾಕಿಸ್ತಾನದಲ್ಲಿ ಭಾರೀ ಹಿಮಪಾತದಿಂದಾಗಿ ಚಳಿಯನ್ನು ತಡೆಯಲಾಗದೆ 21 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನದ ಪಂಜಾಬ್ ರಾಜ್ಯದ ಮುರ್ರೆಯಲ್ಲಿ ರಾತ್ರಿಯಿಡಿ ಸುರಿದ ಭಾರಿ ಹಿಮದಿಂದಾಗಿ ಭಾರಿ ಸಂಖ್ಯೆಯ ಕಾರುಗಳು ಸಿಲುಕಿಕೊಂಡು, ಈ ಸಾವುಗಳು ಸಂಭವಿಸಿವೆಯೆನ್ನಲಾಗಿದೆ.

ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬಜ್ದರ್ ಈ ಘಟನೆಗೆ ಸಂಬಂಧಿಸಿದಂತೆ ಅಲ್ಲಿನ ಎಲ್ಲ ಆಸ್ಪತ್ರೆಗಳು, ಪೊಲೀಸ್ ಸ್ಟೇಷನ್​ಗಳು ಹಾಗೂ ಆಡಳಿತಾಧಿಕಾರಿಗಳು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಹಾಗೂ ಸಹಾಯಕ್ಕೆ 1122 ನಂಬರನ್ನು ಡಯಲ್ ಮಾಡಲು ಹೇಳಿದ್ದಾರೆ. ಸುಮಾರು ಒಂದು ಸಾವಿರ ಕಾರುಗಳು ಈ ಪ್ರವಾಸಿ ಹಿಲ್​ಸ್ಟೇಷನ್ನಿನಲ್ಲಿ ಸಿಕ್ಕಿಹಾಕಿಕೊಂಡಿದ್ದು, ತಕ್ಷಣ ಪ್ರವಾಸಿಗರ ರಕ್ಷಣಾ ಕಾರ್ಯವನ್ನು ತೀವ್ರಗೊಳಿಸಲು ಅವರು ಸೂಚಿಸಿದ್ದಾರೆ. ಪಾಕಿಸ್ತಾನದ ಮಾಧ್ಯಮಗಳೂ ಸಹ ಸತ್ತವರಲ್ಲಿ ಕನಿಷ್ಟ 9 ಜನ ಮಕ್ಕಳೂ ಸೇರಿದ್ದಾರೆ ಎಂದು ವರದಿ ಮಾಡಿದೆ.

RELATED ARTICLES

Related Articles

TRENDING ARTICLES