Wednesday, January 22, 2025

ಕೋರ್ಟ್​ ಸಿಬ್ಬಂದಿಯಿಂದಲೇ ಭ್ರಷ್ಟಾಚಾರ

ನವದೆಹಲಿ: ಭ್ರಷ್ಟಾಚಾರ ಎಲ್ಲೆಡೆಯೂ ಇರುವಂತೆ ಕೋರ್ಟ್​ನಲ್ಲಿಯೂ ಇರುವುದು ಎಲ್ಲರಿಗೂ ಗೊತ್ತು. ಅದೀಗ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳಿಗೂ ಕಿರಿಕಿರಿಯನ್ನುಂಟು ಮಾಡಿದ ಘಟನೆ ನಡೆದಿದೆ. ಇಂಥ ಘಟನೆಯನ್ನು ನಿಂದಿಸಿರುವ ನ್ಯಾಯಾಧೀಶರು ಕೋರ್ಟ್​ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯು ಹಣ ನೀಡುವಂತೆ ಒತ್ತಾಯಿಸುವುದು, ಕಾನೂನುಬಾಹೀರವಾಗಿ ಪಡೆಯುವುದನ್ನು ಸಹಿಸಲು ಸಾಧ್ಯವಿಲ್ಲ.

ಆರೋಪಿಯೊಬ್ಬನನ್ನು ದೋಷಮುಕ್ತಗೊಳಿಸುವಂತೆ 50 ಸಾವಿರ ಡಿಮ್ಯಾಂಡ್ ಮಾಡಿದ ಕೋರ್ಟ್​ ಸಿಬ್ಬಂದಿಯನ್ನು ಬಿಹಾರದ ನ್ಯಾಯಾಲಯದಲ್ಲಿ ವಜಾ ಮಾಡಲಾಗಿತ್ತು. ಈ ಪ್ರಕರಣ ಕುರಿತಾಗಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕಕ್ಷಿದಾರರ ಪರ ವಕೀಲ ಇದು ನನ್ನ ಕಕ್ಷಿದಾರರ ಮೊದಲ ಆರೋಪ ಎಂದು ನ್ಯಾಯಾಲಯಕ್ಕೆ ಹೇಳಿದಾಗ, ನ್ಯಾಯಾಧೀಶರು ನಿಮ್ಮ ಕಕ್ಷಿದಾರರು ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದರು.

RELATED ARTICLES

Related Articles

TRENDING ARTICLES