ಮೆಲ್ಬೋರ್ನ್: ಟೆನಿಸ್ ಸೂಪರ್ಸ್ಟಾರ್ ನೊವಾಕ್ ಝೊಕೊವಿಕ್ ಇದೀಗ ಟೆನಿಸ್ ಅಲ್ಲದೆ ಮತ್ತೊಂದು ವಿಷಯದಲ್ಲಿ ಸುದ್ದಿ ಮಾಡಿದ್ದಾರೆ. ಝೊಕೊವಿಕ್ ಕೊರೋನ ಆರಂಭದ ಕಾಲದಿಂದಲೂ ವ್ಯಾಕ್ಸಿನ್ ವಿರೋಧಿಯಾಗಿದ್ದು, ಅವರು ಇದುವರೆಗೂ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ. ಕಳೆದ ವರ್ಷ ಆಟವಾಡಲು ಅವರಿಗೆ ವ್ಯಾಕ್ಸಿನ್ನಿಂದ ವಿನಾಯಿತಿಯನ್ನೂ ಸಹ ನೀಡಲಾಗಿತ್ತು. ಆದರೆ ಇದೀಗ ಅವರಿಗೆ ಆಸ್ಟ್ರೇಲಿಯಾ ಓಪನ್ ಆಡಲು ಬರಲಿರುವ ಝೊಕೊವಿಕ್ಗೆ ಆಸ್ಟ್ರೇಲಿಯಾ ವ್ಯಾಕ್ಸಿನ್ ಹಾಕಿಸಿಕೊಳ್ಳದಿರುವುದರಿಂದ ವೀಸಾ ನೀಡಲು ನಿರಾಕರಿಸಲಾಗಿದೆ. ಹಾಗಾಗಿ ಕಾನೂನಿನ ಮೊರೆ ಹೋಗಿರುವ ಝೊಕೊವಿಕ್ ಪರ ವಕೀಲ ಜಸ್ಟಿನ್ ಕ್ವಿಲ್ರು ನ್ಯಾಯಾಲಯದಲ್ಲಿ ಅವರ ಪರ ವಾದ ಮಂಡಿಸಲು ಸಜ್ಜಾಗಿದ್ದು ಅದಕ್ಕೆ ಪೂರಕವಾಗಿ ದಸ್ತಾವೇಜನ್ನು ಸಲ್ಲಿಸಿದ್ದಾರೆ. ಅದರಲ್ಲಿ ಅವರು ಒಂದು ಆಸಕ್ತಿಕರ ಮಾಹಿತಿಯೊಂದನ್ನು ದಾಖಲಿಸಿದ್ದಾರೆ.
ಜೊಕೊವಿಕ್ ಕಳೆದ ವರ್ಷ 2021ರ ಡಿಸೆಂಬರ್ನಲ್ಲಿ ಕೊರೋನ ಪೀಡಿತರಾಗಿದ್ದರು ಹಾಗೂ ಅದರಿಂದ ಅವರು ವಾಸಿಯಾಗಿದ್ದಾರೆ. ಆದರೆ ಅವರು ವ್ಯಾಕ್ಸಿನ್ಗೆ ಮೊರೆಹೋಗಿಲ್ಲ ಎಂದು ಅವರು ಹೇಳಿದ್ದಾರೆ. ಜಗತ್ತಿನ ಪ್ರಥಮ ಶ್ರೇಯಾಂಕಿತರಾಗಿರುವ ಸರ್ಬಿಯಾದ ಆಟಗಾರ ಜೊಕೊವಿಕ್ ಸಹೋದರ ಡಿಜೋರ್ಡೆ ಹೇಳುವಂತೆ ತಮ್ಮ ಸಹೋದರ ಮೊದಲಿನಿಂದಲೂ ಕೊರೋನ ವ್ಯಾಕ್ಸಿನ್ನಿಂದ ವಿನಾಯಿತಿಯನ್ನು ಪಡೆದಿದ್ದು, ಅವರು ನ್ಯಾಯಾಲಯದಲ್ಲಿ ಜಯಗಳಿಸುವ ವಿಶ್ವಾಸವಿದೆ ಎಂದಿದ್ದಾರೆ.