Monday, December 23, 2024

ಓಂ ಶಕ್ತಿ ಭಕ್ತರಿಗೆ ಕೊರೋನಾ

ಶಿವಮೊಗ್ಗ : ತಮಿಳುನಾಡಿನ ಓಂ ಶಕ್ತಿ ಪ್ರವಾಸದಿಂದ ಬಂದ ಭಕ್ತರ ಪೈಕಿ ಮತ್ತಷ್ಟು ಭಕ್ತರಲ್ಲಿ ಇಂದು ಕೊರೋನಾ ಸೋಂಕು ಕಂಡು ಬಂದಿದೆ.

ಡಿ. 31 ರಂದು ಓಂ ಶಕ್ತಿ ಪ್ರವಾಸಕ್ಕೆ ತೆರಳಿದ್ದವರು, ಜನವರಿ 5 ರಂದು ವಾಪಾಸ್ ಶಿವಮೊಗ್ಗಕ್ಕೆ ಬಂದಿದ್ದರು. ಅದರಂತೆ ನಿನ್ನೆ ಬೆಳಿಗ್ಗೆ 2, ಮತ್ತು ಸಂಜೆ 4, ಒಟ್ಟು 6 ಜನರಲ್ಲಿ ಸೋಂಕು ಧೃಢವಾಗಿತ್ತು. ಆದರೆ, ಇಂದು ಬೆಳಗಿನ ವೇಳೆಗೆ ಮತ್ತೆ 17 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಜನವರಿ 5 ರಂದು ಒಟ್ಟು 82 ಬಸ್ಸಿನಲ್ಲಿ 4 ಸಾವಿರಕ್ಕೂ ಹೆಚ್ಚು ಭಕ್ತರು, ತಮಿಳುನಾಡಿನ ಓಂ ಶಕ್ತಿಗೆ ತೆರಳಿ ವಾಪಾಸ್ಸಾಗಿದ್ದರು. ಅವರಲ್ಲಿ ಸುಮಾರು 600 ಜನರಿಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ ಇದೀಗ ಮತ್ತೆ 17 ಜನ ಭಕ್ತರಲ್ಲಿ ಸೋಂಕು ದೃಢಪಟ್ಟಿದ್ದು, ಇದು ಇನ್ನೂ ಹೆಚ್ಚು ಆತಂಕ ಮೂಡಿಸಿದೆ.

RELATED ARTICLES

Related Articles

TRENDING ARTICLES