Sunday, November 17, 2024

ಮೇಕೆದಾಟು ಪಾದಯಾತ್ರೆಗೆ ಜೆಡಿಎಸ್ ಕೌಂಟರ್…!

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಬಿಜೆಪಿಗಿಂತ ಜೆಡಿಎಸ್​​ಗೆ ದೊಡ್ಡ ಹೊಡೆತ ನೀಡುತ್ತದೆ. ರಾಮನಗರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕಾಂಗ್ರೆಸ್ಸಿಗರ ಪಾದಯಾತ್ರೆ ಅಂದುಕೊಂಡಂತೆ ಆದ್ರೆ, ಜೆಡಿಎಸ್​​ಗೆ ನಿಜಕ್ಕೂ ಹಿನ್ನಡೆಯಾಗಲಿದೆ. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆಗೆ ಕೌಂಟರ್ ಕೊಡಲು ಜೆಡಿಎಸ್ ಜಲಧಾರೆ ಯಾತ್ರೆ ಹಮ್ಮಿಕೊಂಡಿದೆ.

ಕಾಂಗ್ರೆಸ್​​ನಿಂದ ಮೇಕೆದಾಟು ಪಾದಯಾತ್ರೆ ಜನವರಿ 9 ರಿಂದ ಆರಂಭ ಆಗುತ್ತಿದೆ. ಈ ಪಾದಯಾತ್ರೆಯಿಂದ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಗೆ ಸಾಕಷ್ಟು ಹೊಡೆತ ಬೀಳುವ ಸಾಧ್ಯತೆಯಿದೆ. ಹೀಗಾಗಿ ಕುಮಾರಸ್ವಾಮಿ ಮೇಕೆದಾಟು ಪಾದಯಾತ್ರೆಯನ್ನು ಟೀಕಿಸುತ್ತಾ ಒಂದು ಮಹಾ ರಥಯಾತ್ರೆಗೆ ಯೋಜನೆ ರೂಪಿಸಿದ್ದಾರೆ. ರಾಜ್ಯದಲ್ಲಿ ಆಗಬೇಕಿರುವ ಪ್ರಮುಖ ನೀರಾವರಿ ಯೋಜನೆಗಳ ಅನುಷ್ಠಾನ ಸಂಬಂಧ ಮಹಾ ಸಂಕಲ್ಪ ತೊಟ್ಟ ಜೆಡಿಎಸ್, ಜನತಾ ಜಲಧಾರೆ ಯಾತ್ರೆ ನಡೆಸಲು ಮುಂದಾಗಿದೆ.

ಗಂಗಾರಥ ಹೆಸರಿನ ರಥಗಳನ್ನು ಜೆಡಿಎಸ್ ರೆಡಿ ಮಾಡಿದೆ. ನೀರಾವರಿ ಯೋಜನೆಗಳ ಅನುಷ್ಠಾನ ಕುರಿತು ಜೆಡಿಎಸ್ ನಿಂದ ಸಂಕಲ್ಪದ ಯಾತ್ರೆ ಮಾಡುತ್ತಿದೆ. ಜನವರಿ 26 ರಿಂದ ೧೫ ರಥಗಳಿಂದ ರಾಜ್ಯದಲ್ಲಿ ಯಾತ್ರೆ ಆರಂಭವಾಗಲಿದೆ. ವಿವಿಧ ಜಲಾಶಯಗಳಿಗೆ ತೆರಳಿ ಅಲ್ಲಿ ನೀರು ಸಂಗ್ರಹ ಮಾಡಿ ಅಂದೇ ಆ ಭಾಗದಲ್ಲಿ ಜೆಡಿಎಸ್ ನಾಯಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ಅಂತಿಮವಾಗಿ ಒಂದು ಬೆಂಗಳೂರಿನಲ್ಲಿ ದೊಡ್ಡ ಸಮಾವೇಶ ಮಾಡೋದ್ರ ಮೂಲಕ ಈ ಜಲಯಾತ್ರೆ ನಡೆಯಲಿದೆ. ಈ ಮೂಲಕ ಜೆಡಿಎಸ್ ವಿಭಿನ್ನ ಪ್ರಯತ್ನಕ್ಕೆ ಜೆಡಿಎಸ್ ಕೈಹಾಕಿದೆ. ಈ ಜನತಾ ಜಲಧಾರೆ ರಥ ವಾಹನಕ್ಕೆ ಪುಷ್ಪಾರ್ಚನೆಯನ್ನು ಮಾಜಿ ಪ್ರಧಾನಿ ದೇವೇಗೌಡ್ರು ಮಾಡಿದ್ದಾರೆ. ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ, ಶಾಸಕರರಾದ ಸುರೇಶ್ ಗೌಡ, ಬಂಡೆಪ್ಪ ಕಾಶೆಂಪುರ್, ಸಾರಾ ಮಹೇಶ್ , ಮಂಜುನಾಥ್, ಮಾಜಿ ಸಂಸದ ಶಿವರಾಮೇಗೌಡ, ಪರಿಷತ್ ಸದಸ್ಯರು ಭಾಗಿಯಾಗಿದ್ದರು.

ಒಟ್ಟಿನಲ್ಲಿ ಕಾಂಗ್ರೆಸ್ ಪಾದಯಾತ್ರೆಗೆ ಜಲಧಾರೆ ಯಾತ್ರೆ ಮೂಲಕ ಟಾಂಗ್ ನೀಡಲು ಹೊರಟಿದೆ. ಪಾದಯಾತ್ರೆ ಮೂಲಕ ಅದೆಷ್ಟು ರಾಜಕೀಯ ಸ್ಥಿತ್ಯಂತರ ನಡೆದಿದೆ. ಈ ಯಾತ್ರೆಗಳು ಯಾರಿಗೆ ಎಷ್ಟು ಲಾಭ ತಂದುಕೊಡುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES