Thursday, December 26, 2024

ಅಮಲು ಪದಾರ್ಥ ಸೇವಿಸಿ ಕಾಲೇಜು ವಿದ್ಯಾರ್ಥಿಗಳ ರಂಪಾಟ

ಉಡುಪಿ :ಅಮಲು ಪದಾರ್ಥ ಸೇವಿಸಿ ರಸ್ತೆ ಮಧ್ಯೆ ವಿಧ್ಯಾರ್ಥಿಗಳು ಹೊಡೆದಾಟಕ್ಕೆ ಇಳಿದ ಘಟನೆ ಉಡುಪಿಯ ಪಡುಬಿದ್ರಿ ಪೇಟೆಯಲ್ಲಿ ನಡೆದಿದೆ.

ಖಾಸಗಿ ಕಾಲೇಜೊಂದರ ಎಂಬಿಬಿಎಸ್ ಕಲಿಯುತ್ತಿರುವ ಚೆನೈ ಮೂಲದ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದ್ದು. ಸ್ಕೂಟರ್​ನಲ್ಲಿ ಓರ್ವ ಹುಡುಗಿ ಹಾಗೂ ಇಬ್ಬರು ಪ್ರಯಾಣಿಸುತ್ತಿದ್ದು, ಮಾರ್ಗ ಮಧ್ಯೆ ಪಟ್ರೋಲ್ ಖಾಲಿಯಾಗಿದ್ದ ಕಾರಣಕ್ಕೆ ಮೂವರು ರಸ್ತೆ ಮಧ್ಯೆ ಗಲಾಟೆಗೆ ನಿಂತಿದ್ದಾರೆ.

ವಿದ್ಯಾರ್ಥಿಗಳ ರಂಪಾಟ ಹೆಚ್ಚಾದಾಗ ಸ್ಧಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಧಳಕ್ಕೆ ಬಂದಾಗ ಪೊಲೀಸರು ನಮ್ಮನ್ನು ಮುಟ್ಟಿದರೆ ಪರಿಣಾಮ ಚೆನ್ನಾಗಿರೋಲ್ಲ ಎಂದು ಪೊಲೀಸರಿಗೆ ಆವಾಜ್ ಹಾಕಿದರು. ಕೊನೆಗೆ ಸಾರ್ವಜನಿಕರ ಸಹಾಯದಿಂದ ಅಂಬುಲೆನ್ಸ್‌ನಲ್ಲಿ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿದರು.ಸ್ಥಳಕ್ಕೆ ಪೊಲೀಸರು ಬಂದಾಗ ಪೊಲೀಸರಿಗೆ ನಮ್ಮನ್ನ ಮುಟ್ಟಿದರೆ ಪರಿಣಾಮ ಚೆನ್ನಾಗಿರೋಲ್ಲ ಅಂತ ಅವಾಜ್ ಹಾಕಿದ ವಿಧ್ಯಾರ್ಥಿಗಳು . ಕೊನೆಗೆ ಸಾರ್ವಜನಿಕರ ಸಹಾಯದಿಂದ ವಿಧ್ಯಾರ್ಥಿಗಳನ್ನು ಅಂಬುಲೆನ್ಸ್‌ ಗೆ ತುಂಬಿ ಆಸ್ಪತ್ರೆಗೆ ದಾಖಲಿಸಿದರು. ವಿದ್ಯಾರ್ಥಿಗಳ ಹೈ ಡ್ರಾಮದಿಂದಾಗಿ ಸಾರ್ವನಿಕರಿಗೆ ಪುಕ್ಕಟೆ ಮನರಂಜನೆ ಸಿಕ್ಕಿತು.ವಿದ್ಯಾರ್ಥಿಗಳ ಹೈಡ್ರಾಮದಿಂದಾಗಿ ಸಾರ್ವನಿಕರಿಗೆ ಪುಕ್ಕಟೆ ಮನರಂಜನೆ ಸಿಕ್ಕಿತು.

 

RELATED ARTICLES

Related Articles

TRENDING ARTICLES