Thursday, January 23, 2025

ಒಂದು ಮತದಿಂದ ಮೇಯರ್ ಆದ ಬಿಜೆಪಿ ಅಭ್ಯರ್ಥಿ

ಚಂಡೀಗಡ: ಪಂಜಾಬ್​ನ ಚಂಡೀಗಡದಲ್ಲಿ ಬಿಜೆಪಿಯ ಸರಬ್​ಜಿತ್​ಕೌರ್ ಎನ್ನುವ ಅಭ್ಯರ್ಥಿ ಚಂಡೀಗಡ ಮಹಾನಗರಪಾಲಿಕೆಯ ಮೇಯರ್ ಆಗಿ ಆಯ್ಕೆಯಾದರು. ಎಂತೆಂಥ ಸುದ್ದಿಗಳ ನಡುವೆ ಒಬ್ಬ ಬಿಜೆಪಿ ಅಭ್ಯರ್ಥಿ ಮೇಯರ್ ಆಗಿ ಆಯ್ಕೆ ಆಗಿರುವುದು ಅಂಥ ದೊಡ್ಡ ಸುದ್ದಿಯೇನಲ್ಲ. ಆದರೆ ಅವರು ಆಯ್ಕೆಯಾದ ಮತಗಳನ್ನು ನೋಡಿದರೆ ನಿಮಗೆ ಖಂಡಿತ ಅಚ್ಚರಿಯಾಗುತ್ತದೆ.

ಶನಿವಾರ ಮೇಯರ್ ಆಯ್ಕೆಯಾದ ಸರಬ್​ಜಿತ್​ಕೌರ್ ತಮ್ಮ ಪ್ರತಿಸ್ಪರ್ದಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದ್ದು ಕೇವಲ ಒಂದೇ ಒಂದು ಮತದಿಂದ. ಪಾಲಿಕೆಯ ಒಟ್ಟು ಸದಸ್ಯರ ಬಲ 36 ಆಗಿತ್ತು. ಆಗ ನಡೆದ ಓಟಿಂಗ್​ನಲ್ಲಿ ಬಿಜೆಪಿಯ ಕೌರ್ ಅವರು 14 ಮತಗಳನ್ನು ತೆಗೆದುಕೊಂಡರೆ, ಆಮ್ ಆದ್ಮಿಯ ಕತ್ಯಾಲ್ ಅವರು 13 ಮತಗಳನ್ನು ತೆಗೆದುಕೊಂಡರು. ಒಂದು ಮತ ಅಸಿಂಧುಗೊಂಡರೆ, ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳದ ಸದಸ್ಯರು ಗೈರುಹಾಜರಾಗಿದ್ದರು.

RELATED ARTICLES

Related Articles

TRENDING ARTICLES