Thursday, December 19, 2024

ರಾಕಿಭಾಯ್​ಗೆ 36ನೇ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ನಾನು ಬರೋವರೆಗೂ ಮಾತ್ರ ಬೇರೆಯವರ ಹವಾ ನಾನು ಬಂದ ಮೇಲೆ ನಂದೇ ಹವಾ ಈ ಮಾಸ್​ ಡೈಲಾಗ್ ಮೂಲಕ ಸ್ಯಾಂಡಲ್​ವುಡ್​ನ ಸಿನಿರಸಿಕರಿಗೆ ಮನರಂಜನೆ ನೀಡಿ, ಕೆಜಿಎಫ್​ ಚಾಪ್ಟರ್​ 1 ಸಿನಿಮಾ ಮೂಲಕ ಇಡೀ ಭಾರತ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಮೋಸ್ಟ್​​​ ಟ್ಯಾಲೆಂಟೆಂಡ್​ ಆ್ಯಕ್ಟರ್​ ರಾಕಿಂಗ್​ ಸ್ಟಾರ್ ಯಶ್ ಅವರು ಇಂದು(ಜನವರಿ 8) 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ರಾಕಿ ಭಾಯ್​ ಇವರ ಪೂರ್ಣ ಹೆಸರು ನವೀನ್ ಕುಮಾರ್ ಗೌಡ. ಯಶ್​ ಅವರು ಮೊದಲಿಗೆ ಕಿರುತೆರೆ ಪ್ರಸಾರವಾಗುತ್ತಿದ್ದ, ಅಶೋಕ್ ಕಶ್ಯಪ್ ನಿರ್ದೇಶನದ ನಂದಗೋಕುಲ ಧಾರವಾಹಿಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ತದನಂತರ ಮಳೆಬಿಲ್ಲು, ಪ್ರೀತಿ ಇಲ್ಲದ ಮೇಲೆ ಹಾಗೂ ಇನ್ನೂ ಹಲವಾರು ಧಾರವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು.

ಬಳಿಕ ಪ್ರಿಯಾ ಹಾಸನ್ ನಿರ್ದೇಶನದ ಜಂಭದ ಹುಡುಗಿ(2007) ಚಲನಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಬೆಳ್ಳಿತೆರೆ ಪರದೆಗೆ ಅಧಿಕೃತವಾಗಿ ಕಾಲಿಟ್ಟರು. ಆದರೆ ಯಶ್​ಗೆ ಐಡೆಂಟಿಂಟಿ ಕೊಟ್ಟ ಸಿನಿಮಾ ಅಂದ್ರೆ ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸ್ಸು ಸಿನಿಮಾ. ಈ ಚಲನಚಿತ್ರದ ಅಭಿನಯಕ್ಕಾಗಿ ಫಿಲಂ ಫೇರ್ ಪ್ರಶಸ್ತಿ ಧಕ್ಕಿಸಿಕೊಂಡರು. ಆದಾದ ಬಳಿಕ ರಾಕಿ, ಕಳ್ಳರ ಸಂತೆ, ಗೋಕುಲ, ಮೊದಲಸಲ, ಕಿರಾತಕ, ಡ್ರಾಮಾ, ಗೂಗ್ಲಿ, ರಾಜಾಹುಲಿ, ಗಜಕೇಸರಿ ಚಿತ್ರಗಳು ಭರ್ಜರಿ ಪ್ರದರ್ಶನ ಕಂಡು ಯಶ್​​ರನ್ನು ಕನ್ನಡ ಚಿತ್ರರಂಗದ ಪ್ರಮುಖ ನಟರ ಸಾಲಿನಲ್ಲಿ ನಿಲ್ಲಿಸಿದವು.

ಯಶ್ ಸಿನಿಜೀವನದ ಕಳಸಪ್ರಾಯ ಚಿತ್ರ ಕೆಜಿಎಫ್​ 2018 ಡಿಸೆಂಬರ್​ನಲ್ಲಿ ತೆರೆಕಂಡ ಈ ಚಿತ್ರ ಬಿಡುಗಡೆಯಾದ ಐದು ದಿನಗಳಲ್ಲಿ ನೂರು ಕೋಟಿಗಳಿಕೆ ಕಂಡು ಕನ್ನಡ ಚಿತ್ರರಂಗದಲ್ಲಿ ಹೊಸಪರ್ವಕ್ಕೆ ಕಾರಣರಾದರು. ಈ ಚಿತ್ರ ಭಾರತದಾದ್ಯಂತ ಸುಮಾರು 240 ಕೋಟಿಗೂ ಹೆಚ್ಚುಗಳಿಕೆ ಕಂಡು ಬಾಕ್ಸ್​​ಆಫೀಸ್​​ನಲ್ಲಿ ಹೊಸ ಸಂಚಲನ ಸೃಷ್ಟಿಸಿತು.

RELATED ARTICLES

Related Articles

TRENDING ARTICLES