Monday, December 23, 2024

ಡ್ರೈನೇಜ್​​ಗೆ ಬಿದ್ದ ಬೈಕ್ ಚಾಲಕ

ಶಿವಮೊಗ್ಗ : ಕತ್ತಲಲ್ಲಿ ಕಾಣದೆ ಡ್ರೈನೇಜ್​​ಗೆ ಬಿದ್ದ ಬೈಕ್ ಘಟನೆ ನಗರದ ಜೈಲ್ ರಸ್ತೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆಲಸ ಮುಗಿಸಿ ಬೈಕ್​​ನಲ್ಲಿ ಮನೆಗೆ ಮರಳುತ್ತಿದ್ದ ವ್ಯಕ್ತಿ, ನಿನ್ನೆ ತಡರಾತ್ರಿ ಶಿವಮೊಗ್ಗ ನಗರದ ಜೈಲ್ ರಸ್ತೆಯಲ್ಲಿ ಅವೈಜ್ಞಾನಿಕ ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ಅವಘಢ ಸಂಭವಿಸಿದೆ.

ಜೈಲ್ ರಸ್ತೆಯಲ್ಲಿರುವ ದೊಡ್ಡ ದೊಡ್ಡ ಡ್ರೈನೇಜ್​ಗಳು, ಅಂದಾಜು 8 ಅಡಿ ಆಳ 7 ಅಡಿ ಉದ್ದ ಹಾಗೂ 4 ಅಡಿ ಅಗಲ ಈ ಡ್ರೈನೇಜ್​ ಇದೆ, ಇದರಿಂದಾಗಿ ಬೈಕ್ ಸಂಪೂರ್ಣ ಜಖಂಗೊಂಡಿದೆ.

RELATED ARTICLES

Related Articles

TRENDING ARTICLES